ದಂಡ ವಿಧಿಸಿರುವ ಅಧಿಕಾರಿಗಳು. 
ರಾಜ್ಯ

ಸ್ವಚ್ಛತೆಗೆ ಆದ್ಯತೆ ನೀಡದ ಹೋಟೆಲ್'ಗಳ ವಿರುದ್ಧ GBA ಕ್ರಮ: ಜಯನಗರದ ಜನಪ್ರಿಯ ಬಿರಿಯಾನಿ ಕೇಂದ್ರಕ್ಕೆ ಭಾರೀ ದಂಡ..! Video

ಶುಚಿತ್ವ ಕಾಯ್ದುಕೊಳ್ಳದೆ ಇರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ತಂಡ ಹೋಟೆಲ್'ಗೆ ರೂ.1 ಲಕ್ಷ ದಂಡ ವಿಧಿಸಿದೆ.

ಬೆಂಗಳೂರು: ಸ್ವಚ್ಛತೆ ಕಾಯ್ದುಕೊಳ್ಳದ ಜಯನಗರ ಪೂರ್ವ ಭಾಗದಲ್ಲಿರುವ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಭಾರಿ ಮೊತ್ತದ ದಂಡ ವಿಧಿಸಿದೆ.

ಶುಚಿತ್ವ ಕಾಯ್ದುಕೊಳ್ಳದೆ ಇರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ತಂಡ ಹೋಟೆಲ್'ಗೆ ರೂ.1 ಲಕ್ಷ ದಂಡ ವಿಧಿಸಿದೆ.

ಹೋಟೆಲ್‌ನಲ್ಲಿ ಸ್ವಚ್ಛತಾ ನಿಯಮ ಪಾಲನೆಯಲ್ಲಿ ಗಂಭೀರ ಉಲ್ಲಂಘನೆಗಳು ಕಂಡು ಬಂದಿದ್ದು, ತ್ಯಾಜ್ಯ ವಿಂಗಡಣೆಯಲ್ಲೂ ನಿಯಮ ಪಾಲಿಸದಿರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲೇ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ನಿಯಮ ಉಲ್ಲಂಘಿಸಿದ ಯಾವುದೇ ಸಂಸ್ಥೆ ಅಥವಾ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್; ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

'ಆಗಿದ್ದಾಯ್ತು ಬಿಡಿ.. ಏನ್ ಮಾಡೋಕ್ ಆಗುತ್ತೆ': S*X ನಿರಾಕರಿಸಿದ MBA ವಿದ್ಯಾರ್ಥಿನಿ ಕತ್ತು ಸೀಳಿದ ಧೂರ್ತನ ಮಾತು! Video

T20 ವಿಶ್ವಕಪ್ 2026: ಶಿವಂ ದುಬೆ ಸ್ಫೋಟಕ ಅರ್ಧಶತಕ; ನೆದರ್ಲೆಂಡ್ ಗೆ ಗೆಲ್ಲಲು 194 ರನ್ ಗುರಿ ನೀಡಿದ ಭಾರತ

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ 'ರೋಬೋಡಾಗ್' ವಿವಾದ, ಕ್ಷಮೆಯಾಚಿಸಿದ ಗ್ಯಾಲ್ಗೋಟಿಯಾಸ್ ವಿವಿ!

SCROLL FOR NEXT