ಸಿದ್ದರಾಮಯ್ಯ  
ರಾಜ್ಯ

'ಯುಪಿಎ ಯೋಜನೆಗಳನ್ನು ನಕಲು ಮಾಡಿದವರು ಈಗ ತಂತ್ರಜ್ಞಾನವನ್ನು ಕೂಡ ಕಾಪಿ-ಪೇಸ್ಟ್ ಮಾಡುತ್ತಿದ್ದಾರೆ': Robodog ವಿವಾದ ಬಗ್ಗೆ ಸಿದ್ದರಾಮಯ್ಯ ಟೀಕೆ

ಎಕ್ಸ್‌ ಪೋಸ್ಟ್‌ನಲ್ಲಿ ಅವರು, “ಮೊದಲು ಬಿಜೆಪಿಯವರು ಯುಪಿಎ ಯೋಜನೆಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲಿಸಿ, ಅವನ್ನು ತಮ್ಮದೇ ಮಹಾ ದೃಷ್ಟಿಕೋನವೆಂದು ಮರುಬ್ರ್ಯಾಂಡ್ ಮಾಡಿದರು. ಈಗ ತಂತ್ರಜ್ಞಾನವನ್ನು ಕೂಡ ಕಾಪಿ-ಪೇಸ್ಟ್ ಮಾಡುತ್ತಿದ್ದಾರೆ” ಎಂದು ಹೇಳಿದರು.

ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೋಡಾಗ್ ವಿವಾದದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿ, ಎನ್ ಡಿಎಯದ್ದು ಕೇವಲ ‘ಕಾಪಿ-ಪೇಸ್ಟ್’ ರಾಜಕಾರಣ ಎಂದು ಟೀಕಿಸಿದರು.

ಎಕ್ಸ್‌ ಪೋಸ್ಟ್‌ನಲ್ಲಿ ಅವರು, “ಮೊದಲು ಬಿಜೆಪಿಯವರು ಯುಪಿಎ ಯೋಜನೆಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲಿಸಿ, ಅವನ್ನು ತಮ್ಮದೇ ಮಹಾ ದೃಷ್ಟಿಕೋನವೆಂದು ಮರುಬ್ರ್ಯಾಂಡ್ ಮಾಡಿದರು. ಈಗ ತಂತ್ರಜ್ಞಾನವನ್ನು ಕೂಡ ಕಾಪಿ-ಪೇಸ್ಟ್ ಮಾಡುತ್ತಿದ್ದಾರೆ” ಎಂದು ಹೇಳಿದರು.

ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ಮೋದಿ ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಮೇಲೆ ನಂಬಿಕೆ ಇಡುವುದಿಲ್ಲ; ಬದಲಾಗಿ, “ಅವರು ‘ಫೇಕ್ ಇನ್ ಇಂಡಿಯಾ’ಯನ್ನು ನಂಬುತ್ತಾರೆ” ಎಂದು ಬರೆದಿದ್ದಾರೆ.

ಈ ಘಟನೆ ಎಐ ಇಂಪ್ಯಾಕ್ಟ್ ಸಮಿಟ್ ಎಂಬ ಪ್ರಮುಖ ವೇದಿಕೆಯಲ್ಲಿ ದೇಶಕ್ಕೆ “ಅಂತಾರಾಷ್ಟ್ರೀಯ ಅವಮಾನ” ತಂದಿದೆ ಎಂದರು. ಸಿದ್ದರಾಮಯ್ಯ ಅವರು ಖಾಸಗಿ ಸಂಸ್ಥೆ ಜೊತೆ ಬಿಜೆಪಿ ಸಂಪರ್ಕ ಹೊಂದಿದೆ ಎಂದು ಆರೋಪಿಸಿ, “ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ ಬಿಜೆಪಿ ಸಂಬಂಧಿತ ಸಂಸ್ಥೆಯೊಂದು ಚೀನಾದ ರೋಬೋಟ್ ನ್ನು ‘ಭಾರತೀಯ ಹೊಸ ಆವಿಷ್ಕಾರ’ ಎಂದು ಪ್ರದರ್ಶಿಸಿತು. ಚೀನಾದ ಮಾಧ್ಯಮಗಳು ಇದನ್ನು ತಕ್ಷಣವೇ ಬಹಿರಂಗಪಡಿಸಿ, ಈ ಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗುವಂತೆ ಮಾಡಿವೆ” ಎಂದು ಬರೆದಿದ್ದಾರೆ.

ನಾಯಕ ಹೇಗಿರುತ್ತಾರೆಯೇ ಹಾಗೆಯೇ ಅನುಯಾಯಿ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಈ ಘಟನೆಯಿಂದ ಭಾರತದ ಪ್ರತಿಷ್ಠೆಗೆ ಧಕ್ಕೆಯಾಗಿದೆ “ಇದೇ ನಿಜಕ್ಕೂ ನಾಚಿಕೆಗೇಡು” ಎಂದರು.

ಏನಿದು ರೋಬೋಡಾಗ್ ವಿವಾದ?

ದೆಹಲಿ‌ಯ ಭಾರತ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು “ಒರಿಯನ್” ಎಂಬ ಹೆಸರಿನ ರೋಬೋಡಾಗ್ ನ್ನು ತಮ್ಮದೇ ಆವಿಷ್ಕಾರ ಎಂದು ಹೇಳಿಕೊಂಡು ಪ್ರದರ್ಶಿಸಿತು.

ಈ ಯಂತ್ರವು ಯುನಿಟ್ರೀ ಕಂಪನಿಯ Go2 ಮಾದರಿಯಂತೆಯೇ ಕಾಣುತ್ತದೆ. ಸುಮಾರು 2–3 ಲಕ್ಷಕ್ಕೆ ಖರೀದಿಸಲು ಲಭ್ಯವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆದ ನಂತರ ಟೀಕೆಗಳು ಬಂದವು.

ತೀವ್ರ ಟೀಕೆಗಳು ಬಂದ ನಂತರ, ವಿಶ್ವವಿದ್ಯಾಲಯವು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿ, ತಾವು ರೋಬೋಡಾಗ್ ನ್ನು ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ. ಈ ಸಾಧನವನ್ನು ಚೀನಾದ ಕಂಪನಿಯಿಂದ ಖರೀದಿಸಲಾಗಿದ್ದು, ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಬಗ್ಗೆ ಕಲಿಸಲು ಶಿಕ್ಷಣ ಸಾಧನವಾಗಿ ಬಳಸಲಾಗುತ್ತಿದೆ ಎಂದು ಹೇಳಿತು.

ಈ ಪೋಸ್ಟ್ ಗೆ ಎಕ್ಸ್ ಕಮ್ಯುನಿಟಿ ನೋಟ್‌ನಲ್ಲಿ ವಿಶ್ವವಿದ್ಯಾಲಯದ ಹೇಳಿಕೆ ತಪ್ಪು ದಾರಿಗೆಳೆಯುವಂತಿದೆ ಎಂದು ಹೇಳಲಾಗಿದೆ. ಸಮಿಟ್ ವೇಳೆ ರೋಬೋಟ್‌ಗೆ “ಒರಿಯನ್” ಎಂದು ಹೆಸರಿಟ್ಟು, ಅದನ್ನು ತಮ್ಮ ತಂಡವೇ ಅಭಿವೃದ್ಧಿಪಡಿಸಿದೆ ಎಂದು ಸಂಸ್ಥೆ ಪ್ರದರ್ಶಿಸಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ನಂತರ ಮತ್ತೊಂದು ವಿಡಿಯೋ ವೈರಲ್ ಆಗಿ ವಿವಾದ ಮತ್ತಷ್ಟು ತೀವ್ರಗೊಂಡಿತು. ಆ ವಿಡಿಯೋದಲ್ಲಿ ಒಬ್ಬ ಮಹಿಳೆ ಈ ಯಂತ್ರವನ್ನು ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನ ಭಾಗವೆಂದು ಪರಿಚಯಿಸಿ, ಅದರ ವೈಶಿಷ್ಟ್ಯಗಳನ್ನು ವಿವರಿಸಿ, “ಒರಿಯನ್” ನ್ನು ಸಂಸ್ಥೆಯಲ್ಲೇ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವುದು ಕಂಡುಬಂದಿದೆ.

ನಿರಂತರ ಟೀಕೆಗಳ ಹಿನ್ನೆಲೆ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ತಮ್ಮ ‘ರೋಬೋಡಾಗ್’ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿತು. ನಂತರ, ಅವರ ಪ್ರತಿನಿಧಿಗಳಿಗೆ ಸಮಿಟ್ ನಿಂದ ಪ್ರದರ್ಶನ ಸ್ಥಳವನ್ನು ಖಾಲಿ ಮಾಡಲು ಸೂಚಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಪ್ಸ್ಟೀನ್ ಆರೋಪದ ನಡುವೆ ಬ್ರಿಟನ್‌ನ ಪ್ರಿನ್ಸ್ ಆಂಡ್ರ್ಯೂ ಬಂಧನ

ಉಚಿತ ಕೊಡುಗೆಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿ: ರಾಜಕೀಯದಲ್ಲಿ 'ಫ್ರೀಬೀಸ್‌' ಸಂಸ್ಕೃತಿ ಖಂಡಿಸಿದ ಸುಪ್ರೀಂ ಕೋರ್ಟ್

ಸ್ವಿಮ್ಮಿಂಗ್ ಪೂಲ್ ನಲ್ಲಿ ಪ್ರೇಯಸಿ ಜೊತೆ Hardik Pandya, ಜನ್ಮದಿನ ಶುಭಕೋರಿದ ಟೀಂ ಇಂಡಿಯಾ ಆಲ್ರೌಂಡರ್!

ಅಸ್ಸಾಂ: ಕಾಮಾಕ್ಯ ಸನ್ನಿಧಿಯಲ್ಲಿ ಪ್ರಿಯಾಂಕಾ ಗಾಂಧಿ, ಡಿಕೆ ಶಿವಕುಮಾರ್ ವಿಶೇಷ ಪೂಜೆ! ಅಘೋರಿ ಬಾಬಾ ಹೇಳಿದ್ದೇನು? Video

AI ಭಾರತದ ಭವಿಷ್ಯ, ಅದಕ್ಕೆ ಮುಕ್ತ ಅವಕಾಶ ಕೊಡಿ, ನಿಯಂತ್ರಣ ನಮ್ಮ ಕೈಯಲ್ಲಿರಲಿ, ಮಕ್ಕಳ ಸುರಕ್ಷತೆಯಿರಲಿ: ಪ್ರಧಾನಿ ಮೋದಿ-Video

SCROLL FOR NEXT