ಸಂಗ್ರಹ ಚಿತ್ರ 
ರಾಜ್ಯ

ರಾಜ್ಯ ಬಜೆಟ್ 2026-27: ಪರಿಸರ ರಕ್ಷಣೆಗೆ 4,500 ಕೋಟಿ ರೂ ಅನುದಾನ ಕೋರಿದ ಅರಣ್ಯ ಇಲಾಖೆ..!

ಮುಂದಿನ ಹಣಕಾಸು ವರ್ಷದ ರಾಜ್ಯ ಬಜೆಟ್ ಸುಮಾರು ರೂ. 4.5 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದು, ಇದರ 1 ಶೇಕಡಾ ಅಂದರೆ ರೂ. 4,500 ಕೋಟಿ ಅನುದಾನವನ್ನು ಅರಣ್ಯ ಹಾಗೂ ಪರಿಸರ ಇಲಾಖೆ ಕೋರಿದೆ.

ಬೆಂಗಳೂರು: ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಅನುದಾನ ಅಗತ್ಯವಿದ್ದು, ರಾಜ್ಯದ ಒಟ್ಟು ಬಜೆಟ್‌ನ ಶೇ.1ರಷ್ಟು ಅನುದಾನವನ್ನು ಅರಣ್ಯ ಹಾಗೂ ಪರಿಸರ ಇಲಾಖೆಗೆ ಮೀಸಲಿಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ ಹೇಳಿದ್ದಾರೆ.

ಮುಂದಿನ ಹಣಕಾಸು ವರ್ಷದ ರಾಜ್ಯ ಬಜೆಟ್ ಸುಮಾರು ರೂ. 4.5 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದು, ಇದರ 1 ಶೇಕಡಾ ಅಂದರೆ ರೂ. 4,500 ಕೋಟಿ ಅನುದಾನವನ್ನು ಅರಣ್ಯ ಹಾಗೂ ಪರಿಸರ ಇಲಾಖೆ ಕೋರಿದೆ.

ಇಲಾಖೆಯ ಅನುದಾನದ ಸುಮಾರು ಶೇ.60ರಷ್ಟನ್ನು ಆಡಳಿತ ವೆಚ್ಚಗಳಿಗೆ ಬಳಸಲಾಗುತ್ತಿದ್ದು, ಮಾನವ–ವನ್ಯಜೀವಿ ಸಂಘರ್ಷ ತಗ್ಗಿಸಲು ರೂ. 1,000 ಕೋಟಿ ಮತ್ತು ಆದಿವಾಸಿ ಹಾಗೂ ಅರಣ್ಯವಾಸಿಗಳ ಸ್ಥಳಾಂತರಕ್ಕೆ ರೂ. 500 ಕೋಟಿ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.

ಅರಣ್ಯ ಪ್ರದೇಶ ಕುಗ್ಗುತ್ತಿರುವುದೇ ಮಾನವ–ಪ್ರಾಣಿ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದ್ದು, ಕುದುರೆಮುಖ ವನ್ಯಜೀವಿ ಅಭಯಾರಣ್ಯದಲ್ಲಿ ಮಾತ್ರ 300 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿವೆ. ಇತರೆ ಅರಣ್ಯ ಪ್ರದೇಶಗಳಲ್ಲಿಯೂ ಸ್ಥಳಾಂತರ ಅಗತ್ಯವಿದ್ದು, ಇದಕ್ಕಾಗಿ ಹೆಚ್ಚುವರಿ ನಿಧಿ ಬೇಕಾಗಿದೆ ಎಂದು ಹೇಳಿದರು.

ಆದಿವಾಸಿ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಬಳಿ ಹಣದ ಕೊರತೆ ಇರುವುದರಿಂದ, ಕೇಂದ್ರ ಸರ್ಕಾರದ CAMPA ನಿಧಿಯಿಂದ ರೂ. 500 ಕೋಟಿ ಅನುದಾನ ಕೋರಲಾಗಿದೆ. ಈ ಸಂಬಂಧ ವಿವಿಧ ಇಲಾಖೆಗಳ ಸಚಿವರೊಂದಿಗೆ ಶೀಘ್ರದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಹೇಳಿದರು.

ಈ ಹಣಕಾಸು ವರ್ಷದಲ್ಲಿ ಮಾತ್ರ ಸರ್ಕಾರ ರೈತರಿಗೆ ರೂ. 60 ಕೋಟಿ ಬೆಳೆ ಪರಿಹಾರ ವಿತರಿಸಿದ್ದು, ಬೆಳೆ ಅಥವಾ ಜೀವಹಾನಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಬಾಕಿ ಹಣವಿಲ್ಲ. ಈಗ ನಷ್ಟ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಹಣದ ಅಗತ್ಯವಿದೆ ಮತ್ತು ಆದ್ದರಿಂದ ಬಜೆಟ್‌ನಲ್ಲಿ ಇಲಾಖೆಗೆ ಹೆಚ್ಚಿನ ಹಂಚಿಕೆಯನ್ನು ಕೋರಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

ಲೋಕಭವನ -ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ: ಮತ ಪತ್ರ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ನಮ್ಮ ನೌಕೆಗಳನ್ನು ಅತ್ಯುತ್ತಮ ಶಸ್ತ್ರಾಸ್ತ್ರಗಳಿಂದ ತುಂಬುತ್ತಿದ್ದೇವೆ; ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ- ಮಾತುಕತೆಗೂ ಮುನ್ನ ಟ್ರಂಪ್ ಬೆದರಿಕೆ!

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

SCROLL FOR NEXT