ಗ್ರೇಟರ್ ಬೆಂಗಳೂರು ಪ್ರಾಧಿಕಾರ  
ರಾಜ್ಯ

ನೂತನ ಪಾಲಿಕೆಗಳಿಗೆ 6,500 ಸಿಬ್ಬಂದಿಗಳ ನೇಮಕ: ಆರ್ಥಿಕ ಹೊರೆ ಎಂದ ಸರ್ಕಾರ; ಮರು ಪರಿಶೀಲನೆಗೆ GBA ಮುಂದು..!

ಈ ಪ್ರಮಾಣದ ಸಿಬ್ಬಂದಿಗೆ ತಿಂಗಳಿಗೆ ಸುಮಾರು ರೂ.50 ಕೋಟಿ ವೆಚ್ಚವಾಗಲಿದ್ದು, ಇದು ರಾಜ್ಯದ ಖಜಾನೆಗೆ ದೊಡ್ಡ ಹೊರೆಯಾಗಲಿದೆ ಎಂದು ಸರ್ಕಾರ ಸೂಚಿಸಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಸ್ತಾಪಿಸಿರುವ ಹೊಸ ನೇಮಕಾತಿ (C&R) ನಿಯಮಾವಳಿಯಲ್ಲಿ 6,500 ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯವಿದೆ ಎಂಬ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತಾಪವನೆಯನ್ನು ಮರುಪರಿಶೀಲನೆ ನಡೆಸಲು ಪಾಲಿಕೆ ಮುಂದಾಗಿದೆ.

ಈ ಪ್ರಮಾಣದ ಸಿಬ್ಬಂದಿಗೆ ತಿಂಗಳಿಗೆ ಸುಮಾರು ರೂ.50 ಕೋಟಿ ವೆಚ್ಚವಾಗಲಿದ್ದು, ಇದು ರಾಜ್ಯದ ಖಜಾನೆಗೆ ದೊಡ್ಡ ಹೊರೆಯಾಗಲಿದೆ ಎಂದು ಸರ್ಕಾರ ಸೂಚಿಸಿದೆ.

ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ಹೊರತುಪಡಿಸಿ, ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ವರ್ಗಗಳ (ಗ್ರೂಪ್ ಎ, ಬಿ, ಸಿ, ಡಿ) ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸುಮಾರು 6,500 ಜನ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೆಲ ಇಲಾಖೆಗಳು ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಬೇಡಿಕೆ ಇಟ್ಟಿರುವುದು ಕಂಡುಬಂದಿದ್ದು, ಈಗಿರುವ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿದರೆ ಪ್ರಸ್ತಾವಿತ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಹಿರಿಯ ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿ ಪ್ರಸ್ತಾವನೆಯು ಸಚಿವರು, ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೇರಿದಂತೆ ಹಲವು ಹಂತಗಳನ್ನು ದಾಟಿದ ಬಳಿಕ ಅಂತಿಮವಾಗಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯಬೇಕಿದೆ.

ಮುಂದಿನ ವಾರ ಪರಿಷ್ಕೃತ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಬಿಎ ವಿಶೇಷ ಆಯುಕ್ತ (ಹಣಕಾಸು ಮತ್ತು ಆಡಳಿತ) ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಜಿಬಿಎಗೆ 11 ಹೊಸ ಸದಸ್ಯರ ಸೇರ್ಪಡೆ

ಈ ನಡುವೆ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಮರುಸಂರಚಿಸಿ 11 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದೆ.

ಇದರೊಂದಿಗೆ ಕಳೆದ ವರ್ಷ ಆಗಸ್ಟ್ 26ರಂದು 75 ಸದಸ್ಯರಾಗಿ ರಚಿಸಲಾಗಿದ್ದ ಜಿಬಿಎ ಈಗ 86 ಸದಸ್ಯರನ್ನು ಹೊಂದಿದೆ.

ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್, ಸಂಸದೆ ಸುಧಾ ಮೂರ್ತಿ, ಅನೆಕಲ್ ಶಾಸಕ ಬಿ. ಶಿವಣ್ಣ, ವಿಧಾನಪರಿಷತ್ ಸದಸ್ಯರಾದ ರಾಮೋಜಿ ಗೌಡ, ಡಾ. ಎಂ.ಆರ್. ಸೀತಾರಾಮ್, ಉಮಾಶ್ರೀ, ಎಚ್.ಪಿ. ಸುಧಾಮ್ ದಾಸ್, ರಮೇಶ್ ಬಾಬು,. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ರಿತೇಶ್ ಕುಮಾರ್ ಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳು ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ