ಅಪಘಾತದ ಸಿಸಿಟಿವಿ ದೃಶ್ಯ 
ರಾಜ್ಯ

ನಿಲ್ದಾಣದಲ್ಲೇ ಚಾಲಕನ ಅಜಾಗರೂಕತೆ: ಮಹಿಳಾ ಪ್ರಯಾಣಿಕರ ಮೇಲೆ ಹರಿದ ಬಸ್, Video ವೈರಲ್

ಭಾನುವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದಬಂದಿದೆ.

ಗದಗ: ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಮಹಿಳಾ ಪ್ರಯಾಣಿಕರ ಪೈಕಿ ಓರ್ವ ಮಹಿಳೆ ಮೇಲೆ ಬಸ್ ಹರಿದು ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನುವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದಬಂದಿದೆ.

ಬಸ್ ನಿಲ್ದಾಣದ ಆವರಣದಲ್ಲಿ ನಡೆದು ಹೋಗುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ತಿರುವಿನಲ್ಲಿ ಏಕಾಏಕಿ ಅತಿವೇಗದಲ್ಲಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಓರ್ವ ಮಹಿಳೆ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಘಟನೆಯಲ್ಲಿ ಶಾಂತವ್ವ ಸಿದ್ದಪ್ಪ ಕೊರ್ತಿ ಎಂಬ ಮಹಿಳೆಯ ಕಾಲು ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನಿನ ಭಾಗಕ್ಕೂ ತೀವ್ರ ಪೆಟ್ಟು ಬಿದ್ದಿದೆ.

ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ,‌ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂತಾರಾ ಅಪಹಾಸ್ಯ ಪ್ರಕರಣ: 'ಸೂಪರ್ ಸ್ಟಾರ್ ಆದ್ರೇನು.. ನಾಲಿಗೆ ಮೇಲೆ ಹಿಡಿತ ಇರ್ಬೇಕು..': ನಟ ರಣವೀರ್ ಸಿಂಗ್ ಹೈಕೋರ್ಟ್ ಚಾಟಿ!

ಪಶ್ಚಿಮ ಬಂಗಾಳ SIR ಪರಿಶೀಲನೆ: ಜಾರ್ಖಂಡ್-ಒಡಿಶಾ ನ್ಯಾಯಾಧೀಶರ ನಿಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ-Video

ಸಾಮೂಹಿಕ ಅತ್ಯಾಚಾರ: ಕೊನೆಗೂ ಮೌನ ಮುರಿದ ಸಂತ್ರಸ್ಥೆ, 'ನ್ಯಾಯಬೇಕು.. ನನ್ನಂತೆಯೇ ಸಾಕಷ್ಟು ಯುವತಿಯರಿಗೆ ದೌರ್ಜನ್ಯ'

T20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ Shimron Hetmyer ಸಿಡಿಲಬ್ಬರದ ಬ್ಯಾಟಿಂಗ್, 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಉಡೀಸ್!

SCROLL FOR NEXT