ತರಕಾರಿಗಳು  
ರಾಜ್ಯ

ತಿನ್ನುವ ತರಕಾರಿಯಲ್ಲಿ ವಿಷ: ಬೆಂಗಳೂರು ಸುತ್ತಮುತ್ತ ನೀರು,ಗಾಳಿಯಲ್ಲಿ ಯಥೇಚ್ಛ ನೈಟ್ರೇಟ್‌, ಸೀಸ ಪತ್ತೆ !

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಮಿತಿಯು 72 ಮಾದರಿಗಳಲ್ಲಿ 26 ಶೇಕಡಾದಷ್ಟು ಮಾದರಿಗಳಲ್ಲಿ ಅತ್ಯಂತ ವಿಷಕಾರಿ ಭಾರೀ ಲೋಹವಾದ ಸೀಸವನ್ನು ಪತ್ತೆಹಚ್ಚಿದೆ. ಪರೀಕ್ಷೆಗಳಲ್ಲಿ ನಿಷೇಧಿತ ಮೊನೋಕ್ರೋಟೋಫೋಸ್ ಸೇರಿದಂತೆ 12 ಕೀಟನಾಶಕಗಳ ಅವಶೇಷಗಳೂ ಪತ್ತೆಯಾಗಿವೆ.

ತರಕಾರಿಗಳ ಮಾಲಿನ್ಯವನ್ನು ಪರಿಶೀಲಿಸಿದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) , ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ಕೆಲವು ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ನೈಟ್ರೇಟ್‌ಗಳ ಅಂಶಗಳನ್ನೂ ಹಾಗೂ ಸೂಕ್ಷ್ಮ ಧೂಳಕಣಗಳ (PM10) ಮಾದರಿಗಳಲ್ಲಿ ಸೀಸದ (lead) ಅಂಶಗಳು ಯಥೇಚ್ಛವಾಗಿ ಇರುವುದನ್ನು ಗಮನಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಮಿತಿಯು 72 ಮಾದರಿಗಳಲ್ಲಿ 26 ಶೇಕಡಾದಷ್ಟು ಮಾದರಿಗಳಲ್ಲಿ ಅತ್ಯಂತ ವಿಷಕಾರಿ ಭಾರೀ ಲೋಹವಾದ ಸೀಸವನ್ನು ಪತ್ತೆಹಚ್ಚಿದೆ. ಪರೀಕ್ಷೆಗಳಲ್ಲಿ ನಿಷೇಧಿತ ಮೊನೋಕ್ರೋಟೋಫೋಸ್ ಸೇರಿದಂತೆ 12 ಕೀಟನಾಶಕಗಳ ಅವಶೇಷಗಳೂ ಪತ್ತೆಯಾಗಿವೆ.

ಮಣ್ಣಿನ ಮಾದರಿಗಳಲ್ಲಿ ಸೆಲೆನಿಯಮ್ ಪ್ರಮಾಣ ಹೆಚ್ಚು ಕಂಡುಬಂದಿದ್ದು, ಭೂಗರ್ಭ ಜಲ ಮತ್ತು ಶುದ್ಧೀಕರಿಸಿದ ನೀರಿನ ಮಾದರಿಗಳಲ್ಲಿಯೂ ಮಾಲಿನ್ಯ ಕಂಡುಬಂದಿದೆ. ಸೇವನೆಯ ನಂತರ ಕ್ಯಾನ್ಸರ್ ಉಂಟುಮಾಡುವ ನೈಟ್ರೋಸಮೈನ್‌ಗಳಾಗಿ ಪರಿವರ್ತಿಸಬಹುದಾದ ನೈಟ್ರೇಟ್‌ಗಳ ಪ್ರಮಾಣ ಮೂರು ಮಾದರಿಗಳಲ್ಲಿ ಲೀಟರ್‌ಗೆ 45 ಮಿ.ಗ್ರಾಂ ಮಿತಿಯನ್ನು ಮೀರಿದೆ. ಚಿಕ್ಕಬಳ್ಳಾಪುರದ ಸೊಪ್ಪಹಳ್ಳಿಯ ಭೂಗರ್ಭ ಜಲದಲ್ಲಿ 111.6 ಮಿ.ಗ್ರಾಂ/ಲೀಟರ್, ತುರಂದಹಳ್ಳಿಯಲ್ಲಿ 97.4 ಮಿ.ಗ್ರಾಂ/ಲೀಟರ್ ಹಾಗೂ ಚಿಕ್ಕರಸನಹಳ್ಳಿಯಲ್ಲಿ 75.3 ಮಿ.ಗ್ರಾಂ/ಲೀಟರ್ ನೈಟ್ರೇಟ್ ಕಂಡುಬಂದಿದೆ.

ವಿದ್ಯುತ್ ವಾಹಕತೆ (Electrical Conductivity) ಪ್ರತಿ ಸೆಂ.ಮೀಗೆ 3,252 ಮೈಕ್ರೋಸೀಮೆನ್ಸ್ ಆಗಿದ್ದು, ಒಟ್ಟು ಕರಗಿದ ಘನಪದಾರ್ಥಗಳ (TDS) ಪ್ರಮಾಣವು 2,000 ಮಿ.ಗ್ರಾಂ/ಲೀಟರ್ ಮಿತಿಯನ್ನು ಮೀರಿದೆ ಎಂದು ಸಮಿತಿ ತಿಳಿಸಿದೆ.

ಬಹುತೇಕ ಭಾರೀ ಲೋಹಗಳ ಸಾಂದ್ರತೆ ಪತ್ತೆಯಾಗುವ ಮಟ್ಟಕ್ಕಿಂತ ಕಡಿಮೆ ಇದ್ದರೂ, ಕಬ್ಬಿಣ ಮತ್ತು ಮ್ಯಾಂಗನೀಸ್ ಪತ್ತೆಯಾಗಿದ್ದು, ಅವು ಕುಡಿಯುವ ನೀರಿನ ಮಾನದಂಡಗಳ ಮಿತಿಯೊಳಗೇ ಇವೆ ಎಂದು ಸಮಿತಿ ತಿಳಿಸಿದೆ.

ಇದೇ ವೇಳೆ, ಎರಡು ಸ್ಥಳಗಳಿಂದ 8 ಗಂಟೆಗಳ ಕಾಲ ಸಂಗ್ರಹಿಸಿದ ವಾತಾವರಣದ PM10 ಕಣಗಳ ವಿಶ್ಲೇಷಣೆಯಲ್ಲಿ ಭಾರೀ ಲೋಹಗಳ ಅಸ್ತಿತ್ವ ಕಂಡುಬಂದಿದೆ. ಚಿಕ್ಕಬಳ್ಳಾಪುರದ ಸೊಪ್ಪಹಳ್ಳಿಯಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ ತಾಮ್ರ 13.25 ನ್ಯಾನೋಗ್ರಾಂ/ಘನ ಮೀಟರ್ ಕಂಡುಬಂದರೆ, ಕೋಲಾರದ ತುರಂದಹಳ್ಳಿಯ ಮಾದರಿಯಲ್ಲಿ ಸೀಸ 13.1 ನ್ಯಾನೋಗ್ರಾಂ/ಘನ ಮೀಟರ್, ನಿಕಲ್ 29.2 ನ್ಯಾನೋಗ್ರಾಂ/ಘನ ಮೀಟರ್ ಮತ್ತು ತಾಮ್ರ 17.7 ನ್ಯಾನೋಗ್ರಾಂ/ಘನ ಮೀಟರ್ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು-Video

CM ಪಟ್ಟ ಜಟಾಪಟಿ: ಮತ್ತಷ್ಟು ಹರಿತವಾಯ್ತು ದಲಿತ ಸಿಎಂ ಅಸ್ತ್ರ, DKS ವಿರುದ್ಧ ಸಿದ್ದು ಬಣ ಪ್ರತಿತಂತ್ರ..!

ರಂಜಾನ್, ಹೋಳಿ ಹಬ್ಬ: ಶಾಂತಿ ಕದಡಿದರೆ ಕಠಿಣ ಕ್ರಮ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!

ರನ್ ರೇಟ್ ಹೆಚ್ಚಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ದಾಖಲೆಯ 254 ರನ್ ಸಿಡಿಸಿದ ವೆಸ್ಟ್ ಇಂಡೀಸ್, ಭಾರತಕ್ಕೆ ಕಂಟಕ!

SCROLL FOR NEXT