ಕೇಂದ್ರ ಸಚಿವ ಡಾ.ಎಲ್. ಮುರುಗನ್ 
ರಾಜ್ಯ

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ರೂ ಹಣ ವೆಚ್ಚ!

ತಪ್ಪು ಮಾಹಿತಿ ಇಲ್ಲದೇ ಕೇವಲ ಸತ್ಯ ಮಾಹಿತಿ ನೀಡುತ್ತದೆ. ಸಾರ್ವಜನಿಕರಿಗೆ ನಿಜವಾದ ಸಂಗತಿ ತಲುಪಿಸುವ ಕೆಲಸ ಮಾಡಿದೆ. ದೇಶದ ಆಕಾಶವಾಣಿ ದೂರದರ್ಶನದ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ತಿಳಿಸಿದರು.

ಶಿವಮೊಗ್ಗ: ಶಿವಮೊಗ್ಗದ ವಿದ್ಯಾನಗರದಲ್ಲಿ ನಿರ್ಮಿಸಿರುವ 10 ಕಿಲೋ ವ್ಯಾಟ್ FM ಟ್ರಾನ್ಸ್ ಮೀಟರ್ ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಇಂದು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಮೋದಿ ಅವರು ನಿರಂತರ ವಾಗಿ ದೇಶದ ಅಭಿವೃದ್ದಿಯತ್ತ ಪರಿಶ್ರಮಿಸುತ್ತಿದ್ದಾರೆ. ಎಫ್ ಎಂ ಶಿವಮೊಗ್ಗ ಭದ್ರಾವತಿ ಜನರಿಗೆ ಗಿಫ್ಟ್ ಆಗಿದೆ. ಈ ಎಫ್ ಎಂ ಸ್ಥಳೀಯ ಎಲ್ಲ ಸಂಸ್ಕೃತಿ ಚಟುವಟಿಕೆಗೆ ವೇದಿಕೆ ಆಗಿದೆ. ಎಫ್ ಎಂ ಒಂದು ಶಕ್ತಿ ಶಾಲಿ ಮಾಧ್ಯಮ ಆಗಿದೆ ಎಂದರು.

ಆಕಾಶವಾಣಿ ಜನರನ್ನು ಸುಲಭವಾಗಿ ತಲುಪುವ ಮಾರ್ಗ ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಕಾಶವಾಣಿ ಒಂದು ಸಂಪರ್ಕ ಮಾಧ್ಯಮ ಆಗಿತ್ತು. ತಪ್ಪು ಮಾಹಿತಿ ಇಲ್ಲದೇ ಕೇವಲ ಸತ್ಯ ಮಾಹಿತಿ ನೀಡುತ್ತದೆ. ಸಾರ್ವಜನಿಕರಿಗೆ ನಿಜವಾದ ಸಂಗತಿ ತಲುಪಿಸುವ ಕೆಲಸ ಮಾಡಿದೆ. ದೇಶದ ಆಕಾಶವಾಣಿ ದೂರದರ್ಶನದ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದರು.

ಡಿಜಿಟಲ್ ರೇಡಿಯೋ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಧ್ವನಿಯ ವ್ಯವಸ್ಥೆ ಮಾಡಲಾಗಿದೆ. ದೇಶದ ಮೂಲೆ ಮೂಲೆಗೆ ಆಕಾಶವಾಣಿ ಮೂಲಕ ತಲುಪುತ್ತಿದೆ ಎಂದು ಹೇಳಿದರು.

ಎಲ್ಲ 23 ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರ ಆಗುತ್ತದೆ. ಆಲ್ ಇಂಡಿಯಾ ರೇಡಿಯೋ ಮೂಲಕ ತಲುಪುತ್ತಿದೆ.. 2024 ರಿಂದ ಆಕಾಶವಾಣಿ ಯಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮೋದಿ ಅಂದುಕೊಂಡಂತೆ ಎಫ್ ಎಂ ದೇಶದಲ್ಲಡೆ ತಲುಪುತ್ತಿದೆ. ಒಂದೇ ವರ್ಷದಲ್ಲಿ ಶಿವಮೊಗ್ಗ ಆಕಾಶವಾಣಿ ಯೋಜನೆ ಪೂರ್ಣ ಗೊಂಡಿದೆ. ಆಕಾಶವಾಣಿ ರಾಜ್ಯದಲ್ಲಿ ಪ್ರಮುಖ ಮಾಧ್ಯಮ ಆಗಿದೆ. ಇನ್ನೂ ಉಡುಪಿ ಮತ್ತು ಬೆಂಗಳೂರಿನಲ್ಲಿ ಆಕಾಶವಾಣಿ ವಿಸ್ತರಣೆ ಯೋಜನೆ ಶೀಘ್ರ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಪೈಲೆಟ್ ಯೋಜನೆಯಲ್ಲಿ ಶೀಘ್ರ ದಲ್ಲಿ ಶಿವಮೊಗ್ಗ ನಗರದ ಎಲ್ಲ ಪಾರ್ಕ್ ನಲ್ಲಿ ಆಕಾಶವಾಣಿ ಎಫ್ ಎಂ ಸೆಟ್ ಗಳ ವ್ಯವಸ್ಥೆ ಮಾಡಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!