ಸಂಗ್ರಹ ಚಿತ್ರ 
ರಾಜ್ಯ

ಹಳೇ ದ್ವೇಷ: ಹೆತ್ತ ತಾಯಿ ಎದುರೇ ರೌಡಿಶೀಟರ್ ಪುತ್ರನ ಬರ್ಬರ ಹತ್ಯೆ

ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್‌ ಆಗಿದ್ದ ಪವನ್ ಕುಮಾರ್ (28) ಎಂಬಾತನನ್ನು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಆತನ ತಾಯಿಯ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ರುವ ಘಟನೆ ಥಣಿಸಂದ್ರದ ಅಮರ ಜ್ಯೋತಿ ಲೇಔಟ್ ನಲ್ಲಿ ನಡೆದಿದೆ.

ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್‌ ಆಗಿದ್ದ ಪವನ್ ಕುಮಾರ್ (25) ಎಂಬಾತನನ್ನು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ತಣಿಸಂದ್ರದ ಅಮರಜ್ಯೋತಿ ಲೇಔಟ್ ನಿವಾಸಿಯಾಗಿದ್ದ ಪವನ್, ತನ್ನ ಬೇಕರಿ ಮುಚ್ಚಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ. ಈ ವೇಳೆ ಮೂರು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿ ಆರು ಮಂದಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಪವನ್ ಮನೆ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆಯೇ ಆತನ ತಾಯಿಗಳ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹೆತ್ತ ಮಗನನ್ನು ರಕ್ಷಿಸಲು ಸಹಾಯಕ್ಕಾಗಿ ತಾಯಿ ಗೋಗರೆಯುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.

ಜೈಲಿಂದ ಬಂದಿದ್ದ ಪವನ್

ಪವನ್ ಕುಮಾರ್‌ ಒಟ್ಟು ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2023 ರಲ್ಲಿ ನಡೆದಿದ್ದ ಕಪಿಲ್ ಎಂಬಾತನ ಕೊಲೆ ಪ್ರಕರಣವೊಂದರಲ್ಲಿ ಐದನೇ ಆರೋಪಿಯಾಗಿ ಜೈಲಿಗೆ ಹೋಗಿದ್ದ. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದ. ಮಗ ಒಳ್ಳೆಯವನಾಗಿ ಬದಲಾಗಲಿ ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಹಿಂದೆ ಮನೆ ಸಮೀಪವೇ ಕುಟುಂಬದವರು ಪವನ್ ಗೆ ಬೇಕರಿ ಇಟ್ಟುಕೊಟ್ಟಿದ್ದರು.

ಹತ್ಯೆಗೆ ಕೆಲ ದಿನಗಳ ಮೊದಲು ಕಪಿಲನ ಸಹೋದರ ಪ್ರೇಮ್ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಜೀವಭಯವಿದೆ ಎಂದು ಪವನ್ ತಾಯಿಗೆ ತಿಳಿಸಿದ್ದ ಎನ್ನಲಾಗಿದೆ.

ಕುಟುಂಬದ ಸಹಾಯದಿಂದ ಸುಮಾರು 45 ದಿನಗಳ ಹಿಂದೆ ರಾಜಾನುಕುಂಟೆಯಲ್ಲಿ ಬೇಕರಿ ಆರಂಭಿಸಿದ್ದ ಪವನ್, ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದನೆಂದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

BJP ತೊರೆಯಲು ಕಾರಣ ಬಹಿರಂಗಪಡಿಸಿದ Annamalai; ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನೆಂದರೆ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್‌, ಭಾರಿ ಟ್ರೋಲ್, ಸಂಗೀತಾ ಸಮರ್ಥನೆ, ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’!

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಸಂಸದ ಇಮ್ರಾನ್ ಮಸೂದ್