ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 36 ವರ್ಷದ ಆಟೋರಿಕ್ಷಾ ಚಾಲಕನಿಗೆ ಅಪರಿಚಿತ ವ್ಯಕ್ತಿಗಳು ಇರಿದು ಕೊಂದಿದ್ದಾರೆ. ಮೃತ ವ್ಯಕ್ತಿಯನ್ನು ರೇಚಣ್ಣ ಪಿ ಎಂದು ಗುರುತಿಸಲಾಗಿದೆ. ಹೂವು ವ್ಯಾಪಾರಿ ಮತ್ತು ಮೃತರ ಹತ್ತಿರದ ಸಂಬಂಧಿ ಗಿರೀಶ್ ಎಸ್ ಕೊಲೆ ದೂರು ದಾಖಲಿಸಿದ್ದಾರೆ. ಇಂದು ಮುಂಜಾನೆ 12.19 ಗಂಟೆಗೆ ರೇಚಣ್ಣನವರ ಸ್ನೇಹಿತ ಚಂದ್ರಶೇಖರ್ ಎಂಬುವರು ಕರೆ ಮಾಡಿ ರೇಚಣ್ಣರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂದಮ್ ವೃತ್ತದ ಬಳಿಯ ಭುವನೇಶ್ವರಿ ನಗರದಲ್ಲಿರುವ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ರೇಚಣ್ಣ ರಕ್ತದ ಮಡುವಿನಲ್ಲಿ ಬದ್ದಿರುವುದು ಕಂಡುಬಂದಿತು ಎಂದು ಪೊಲೀಸರು ತಿಳಿಸಿದರು. ಪ್ರಾಥಮಿಕ ಪರೀಕ್ಷೆಯಲ್ಲಿ ಎದೆಯ ಎಡಭಾಗ ಮತ್ತು ಬೆನ್ನಿನ ಎಡಭಾಗದಲ್ಲಿ ಹರಿತವಾದ ಆಯುಧದಿಂದ ಇರಿದ ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದರು. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ವೈಷಮ್ಯದಿಂದಾಗಿ ಅಪರಿಚಿತ ವ್ಯಕ್ತಿಗಳು ಹರಿತವಾದ ಆಯುಧವನ್ನು ಬಳಸಿ ರೇಚಣ್ಣನನ್ನು ಕೊಲೆ ಮಾಡಿದ್ದಾರೆ ಎಂದು ದೂರುದಾರರು ಶಂಕಿಸಿದ್ದು ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶ, ಆರೋಪಿಗಳ ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.