ಹೈಕೋರ್ಟ್  
ರಾಜ್ಯ

ಕೋಗಿಲು ಅಕ್ರಮ ಮನೆಗಳ ತೆರವು ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ

ಮನೆ ಕಳೆದುಕೊಂಡಿರುವ ಜನರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಬೇಕು ಎಂದು ಕೋರಿ ಜೈಬಾ ತಬಸ್ಸುಮ್ ಹಾಗೂ ಮತ್ತಿತರರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಲೇಔಟ್ ನ ಅನಧಿಕೃತ ಮನೆಗಳ ತೆರವು ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್​​ಗೆ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.

ಮನೆ ಕಳೆದುಕೊಂಡಿರುವ ಜನರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಬೇಕು ಎಂದು ಕೋರಿ ಜೈಬಾ ತಬಸ್ಸುಮ್ ಹಾಗೂ ಮತ್ತಿತರರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಹಲವು ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಕಳೆದ 30 ವರ್ಷಗಳಿಂದ ಇಲ್ಲಿ 3 ಸಾವಿರ ಜನ ವಾಸಿಸುತ್ತಿದ್ದಾರೆ. ವಸೀಂ, ಫಕೀರ್ ಕಾಲೋನಿಗಳ ತೆರವಿನಿಂದ ನಿರಾಶ್ರಿತರಾಗಿದ್ದು, ಅವರಿಗೆ ಎಸ್​ಡಿಪಿಐ ಮತ್ತು ಎಂಐಎಂ ಪಕ್ಷಗಳು ಈಗ ನೆರವು ಒದಗಿಸುತ್ತಿವೆ.

ಸರ್ಕಾರ ಸಂತ್ರಸ್ತರಿಗೆ 5 ಕಿ.ಮೀ. ಅಂತರದಲ್ಲೇ ಮರುವಸತಿ ಕಲ್ಪಿಸಬೇಕು ಮತ್ತು ಅಲ್ಲಿಯವರೆಗೆ 3 ಹೊತ್ತಿನ ಪೌಷ್ಟಿಕಾಂಶಯುತ ಆಹಾರ ಒದಗಿಸಬೇಕು. 300 ಪ್ರತ್ಯೇಕ ಟೆಂಟ್, ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ ಆರೋಗ್ಯ ತಪಾಸಣೆ ಮಾಡಬೇಕು. ಜೊತೆಗೆ ಕಟ್ಟಡ ತೆರವಿಗೆ ಪರಿಹಾರ ನೀಡಬೇಕೆಂದು ಪಿಐಎಲ್ ನಲ್ಲಿ ಕೋರಲಾಗಿದೆ.

ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್‌; ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ, ಸಿದ್ಧತೆ ಆರಂಭ: CM ಸಿದ್ದರಾಮಯ್ಯ

ರಾಹುಲ್ ಗಾಂಧಿ ಪ್ರಭು ಶ್ರೀರಾಮನಿದ್ದಂತೆ: ಶೋಷಿತರಿಗೆ ನ್ಯಾಯ ಒದಗಿಸುತ್ತಿದ್ದಾರೆ - ನಾನಾ ಪಟೋಲೆ

ಕೋಗಿಲು ತೆರವು: ಕೇವಲ 90 ಜನರಿಗೆ ಮಾತ್ರ ಮನೆ ಹಂಚಿಕೆ - ಸಚಿವ ಭೈರತಿ ಸುರೇಶ್

ಬಾಂಗ್ಲಾದೇಶದಲ್ಲಿ ಜೈಶಂಕರ್ ಹ್ಯಾಂಡ್ ಶೇಕ್: ಪಾಕ್ ವರದಿಗಳು ದೊಡ್ಡ "ಜೋಕ್" ಎಂದ ಮಾಜಿ ರಾಯಭಾರಿ!

ಇದು ಗಂಭೀರ ಪಾಪ, ನಿನ್ನ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತೀಯಾ: ಮಹಾಕಾಳನ ದರ್ಶನ ಪಡೆದ ಮುಸ್ಲಿಂ ನಟಿ ವಿರುದ್ಧ ಮೌಲಾನ ಗರಂ!

SCROLL FOR NEXT