ರಂಜಿತಾ-ರಫೀಕ್ 
ರಾಜ್ಯ

ಕಾರವಾರ: ಅಕ್ರಮ ಸಂಬಂಧ ಬೇಡ ಮದುವೆಯಾಗು; ಬೇಡ ಹೀಗೆ ಇದ್ದುಬಿಡೋಣ ಅಂದ ರಂಜಿತಾಳನ್ನು ಇರಿದು ಕೊಂದ ಪ್ರಿಯಕರ ರಫೀಕ್!

ಒಂದು ಮದುವೆಯಾಗಿ ಅನುಭವಿಸಿದ್ದೇನೆ. ಮತ್ತೊಂದು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದ ವಿವಾಹಿತೆ ರಂಜಿತಾಳನ್ನು ಪ್ರಿಯಕರ ರಫೀಕ್ ಚೂರಿ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.

ಕಾರವಾರ: ಒಂದು ಮದುವೆಯಾಗಿ ಅನುಭವಿಸಿದ್ದೇನೆ. ಮತ್ತೊಂದು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದ ವಿವಾಹಿತೆ ರಂಜಿತಾಳನ್ನು ಪ್ರಿಯಕರ ರಫೀಕ್ ಚೂರಿ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತಳನ್ನು ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಎಂದು ಗುರುತಿಸಲಾಗಿದೆ. ಹತ್ತು ವರ್ಷಗಳ ಹಿಂದೆ ರಂಜಿತಾ ವಿಚ್ಛೇದನ ಪಡೆದು ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ಮಗುವಿನೊಂದಿಗೆ ವಾಸವಾಗಿದ್ದಳು. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾಳಿಗೆ ರಫೀಕ್ ನ ಪರಿಚಯವಾಗಿತ್ತು.

ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇತ್ತು. ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಹೋಗುತ್ತಿದ್ದನು. ಈ ಮಧ್ಯೆ ರಫೀಕ್ ಮದುವೆಯಾಗುವಂತೆ ರಂಜಿತಾಳನ್ನು ಒತ್ತಾಯಿಸುತ್ತಿದ್ದನು. ಅದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಾನು ಈಗಾಗಲೇ ಮದುವೆಯಾಗಿ ಸಾಕಷ್ಟು ಅನುಭವಿಸಿದ್ದೇನೆ. ಮತ್ತೆ ಮದುವೆಯಾಗುವ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆ ಇರಲಿ, ಮದುವೆ ಮಾತ್ರ ಬೇಡ ಎಂದು ಎಂದು ಹೇಳಿದ್ದಳು.

ರಂಜಿತಾಳ ಮಾತಿನಿಂದ ಕೋಪಗೊಂಡಿದ್ದ ರಫೀಕ್ ಎಂದು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ರಂಜಿತಾಳನ್ನು ಅಡ್ಡಗಟ್ಟಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ರಂಜಿತಾ ಕೋಪದಿಂದ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ರಫೀಕ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

Passport Fees Increases: ದೇಶದ ಜನತೆಗೆ ಕೇಂದ್ರದಿಂದ ಮತ್ತೊಂದು ಶಾಕ್! ಪಾಸ್ ಪೋರ್ಟ್ ಶುಲ್ಕ ಹೆಚ್ಚಳ, ಜು. 1 ರಿಂದ ಹೊಸ ದರಗಳು ಜಾರಿಗೆ

PWD ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆಯಲ್ಲಿ 13 ಕೋಟಿ ಮೌಲ್ಯದ ಆಸ್ತಿ ಪತ್ತೆ!

ಕಲಬುರಗಿಯಲ್ಲಿ ಮನಕಲಕುವ ಘಟನೆ: ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಗರ್ಭಿಣಿ ಆತ್ಮಹತ್ಯೆ!

ಪ್ರಧಾನಿ ಮೋದಿ ಭೇಟಿ ಮಾಡಿದ Amazon CEO; ಭಾರತದಲ್ಲಿ ಹೆಚ್ಚುವರಿಯಾಗಿ 13 ಬಿಲಿಯನ್ ಡಾಲರ್ ಹೂಡಿಕೆ