ಯಶ್ ತಾಯಿ ಪುಷ್ಪಾ 
ರಾಜ್ಯ

ಹಾಸನ: ಬೆಳಂ ಬೆಳಿಗ್ಗೆ ನಟ 'ಯಶ್ ತಾಯಿ ಪುಷ್ಪಾ' ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ಧ್ವಂಸ!

ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನು ಒತ್ತುವರಿ ಮಾಡಿ ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಂ ಬೆಳಗ್ಗೆ ಅವರ ಮನೆ ಮುಂದೆ ಜೆಸಿಬಿ ಘರ್ಷನೆ ಮಾಡಿದ್ದು, ಕಾಂಪೌಂಡ್ ತೆರವು ಮಾಡಲಾಗಿದೆ.

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಸದ್ದು ಮಾಡುತ್ತಿರುವಂತೆಯೇ ಅವರ ತಾಯಿ ಪುಷ್ಪಾ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನು ಒತ್ತುವರಿ ಮಾಡಿ ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಂ ಬೆಳಗ್ಗೆ ಅವರ ಮನೆ ಮುಂದೆ ಜೆಸಿಬಿ ಘರ್ಷನೆ ಮಾಡಿದ್ದು, ಕಾಂಪೌಂಡ್ ತೆರವು ಮಾಡಲಾಗಿದೆ.

ಹಾಸನದ ವಿದ್ಯಾನಗರದಲ್ಲಿ ಯಶ್ ಅಮ್ಮ ಪುಷ್ಪ ಅವರ ಮನೆ ಇದ್ದು, ಅವರು ಲಕ್ಷ್ಮಮ್ಮ‌ ಎಂಬುವರಿಗೆ ಸೇರಿದ್ದ ಸೈಟ್ ಗೆ ಕಾಂಪೌಡ್ ಹಾಕಿದ್ದಾರೆ ಎನ್ನಲಾಗಿದೆ. ಲಕ್ಷಮ್ಮ ಸಂಬಂಧಿ ದೇವರಾಜ್ ಎನ್ನುವವರು ಇದನ್ನು ಪ್ರಶ್ನಿಸಿ ಹಾಸನದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ಮಾಡಿದ್ದಾರೆ.

ಆದರೆ, ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್ ಗೆ ಬಾರದೆ ಇದ್ದು ನ್ಯಾಯಾಲಯಕ್ಕೆ ದಾಖಲೆ ಒದಗಿಸದ ಹಿನ್ನಲೆ ದೇವರಾಜ್ ಪರ ಕೋರ್ಟ್ ಆದೇಶ ಮಾಡಿದೆ. ದೇವರಾಜ್ ಅವರು ಕೋರ್ಟ್ ಆದೇಶದಂತೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಆದರೆ ದೇವರಾಜ್ ಮನವಿಗೆ ಸ್ಪಂದಿಸದ ಯಶ್ ತಾಯಿ ಸುಮ್ಮನಿದ್ದರು.

ಈ ಹಿನ್ನಲೆ ಕೋರ್ಟ್ ಆದೇಶದಂತೆ ಮಾಲೀಕರು ಇಂದು ಬೆಳ್ಳಂ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಡ್ ತೆರವುಗೊಳಿಸಿದ್ದಾರೆ. ಸುಮಾರು ಒಂದುವರೆ ಸಾವಿರ ಅಡಿಗೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದರು ಎಂದು ದೇವರಾಜು ಆರೋಪ ಮಾಡಿದ್ದಾರೆ.

ಈ ಮಧ್ಯೆ ಕಾಂಪೌಡ್ ತೆರವು ಪ್ರತಿಕ್ರಿಯಿಸಿರುವ ಪುಷ್ಪಾ, ನಮ್ಮ ಬಳಿ ಇರುವ ಎಲ್ಲಾ ದಾಖಲಾತಿಗಳು ಸರಿಯಾಗಿದ್ದು, ಯಾವುದೇ ಒತ್ತುವರಿ ಮಾಡಿಲ್ಲ. ಕಾಂಪೌಂಡ್ ತೆರುವ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಾಂಪೌಡ್ ತೆರವು ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಪುಷ್ಪಾ ಅವರ ಪರ ವಕೀಲ ಸಂಜಯ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೀರ್ಘಾವಧಿ ಆಯ್ತು, ಈಗ ಪೂರ್ಣಾವಧಿ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ; ಹೈಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಎಂದ CM; Video

ಪಾಕ್-ಚೀನಾಗೆ ಶಾಕ್! ಭಾರತೀಯ ಸೇನೆ ಕೈ ಸೇರಲಿದೆ ಸ್ವದೇಶಿ ನಿರ್ಮಿತ 'ಮಾರಕಾಸ್ತ್ರ'; ಜಗತ್ತಿನಲ್ಲೇ ಮೊದಲು!

ಕರೂರ್ ಕಾಲ್ತುಳಿತ ಪ್ರಕರಣ: ದಳಪತಿ ವಿಜಯ್ ಗೆ CBI ಶಾಕ್, ಸಮನ್ಸ್ ಜಾರಿ!

ತಿರುಪಾರಂಕುಂದ್ರಂ ಬೆಟ್ಟ ವಿವಾದ: ದೀಪ ಬೆಳಗಲು ಹಿಂದೂಗಳಿಗೆ ಅನುಮತಿ, ತೀರ್ಪು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ದೆಹಲಿ: ಯುವಕನಿಗೆ ಒದ್ದು, ಹೊಡೆದು ಕೊಂದ ಆರು ಬಾಲಕರು!

SCROLL FOR NEXT