ರೌಡಿಶೀಟರ್​​ ಸೈಯದ್ ಅಸ್ಗರ್ ಗೆ ಚೂರಿ ಇರಿತ 
ರಾಜ್ಯ

ಬೆಂಗಳೂರು: 8 ಮಕ್ಕಳ ತಂದೆ, 2ನೇ ಪತ್ನಿಯನ್ನ ಬಿಟ್ಟುಬಿಡುವಂತೆ ರೌಡಿಶೀಟರ್​​ಗೆ ಮೊದಲ ಪತ್ನಿಯಿಂದ ಚೂರಿ ಇರಿತ!

ಎರಡೆರಡು ಮದುವೆ ಮಾಡಿಕೊಂಡು 8 ಮಕ್ಕಳನ್ನು ಹುಟ್ಟಿಸಿದ್ದ ರೌಡಿಶೀಟರ್​​ಗೆ ಇದೀಗ ಆತನ ಮೊದಲ ಪತ್ನಿಯನ್ನು ಕಂಡರೆ ಹೆದರುವಂತಾಗಿದೆ. 2ನೇ ಪತ್ನಿಯನ್ನು ಬಿಟ್ಟು ಬರುವಂತೆ ಮೊದಲ ಪತ್ನಿ ಚೂರಿ ಇರಿದಿದ್ದಾಳೆ.

ಬೆಂಗಳೂರು: ಎರಡೆರಡು ಮದುವೆ ಮಾಡಿಕೊಂಡು 8 ಮಕ್ಕಳನ್ನು ಹುಟ್ಟಿಸಿದ್ದ ರೌಡಿಶೀಟರ್​​ಗೆ ಇದೀಗ ಆತನ ಮೊದಲ ಪತ್ನಿಯನ್ನು ಕಂಡರೆ ಹೆದರುವಂತಾಗಿದೆ. ಬೆಂಗಳೂರಿನ ಜೆಜೆ ನಗರದಲ್ಲಿ ಈ ಘಟನೆ ನಡೆದಿದ್ದು ರೌಡಿಶೀಟರ್​​ ಸೈಯದ್ ಅಸ್ಗರ್ ಗೆ ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ ಆತನ ಮೊದಲ ಪತ್ನಿಯೇ ಚೂರಿ ಇರಿದಿದ್ದಾಳೆ. ರೌಡಿಶೀಟರ್ ಸೈಯದ್ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಚಾಕು ಕೂಡ ಇರಿದಿದ್ದಾಳೆ.

ಗಾಯಗೊಂಡಿರುವ ಸೈಯದ್ ಇದೀಗ ಹೆದರಿದ್ದು ಮೊದಲ ಪತ್ನಿಯ ವಿರುದ್ಧ ಜೆಜೆ ನಗರ ಠಾಣೆಗೆ ದೂರು ನೀಡಿದ್ದಾನೆ. ಸೈಯದ್ ಗೆ ಎರಡನೇ ಪತ್ನಿ ಸಾಥ್​​ ಕೊಟ್ಟಿದ್ದಾಳೆ. ಇದಕ್ಕೂ ಮೊದಲೇ ರೌಡಿಶೀಟರ್​​ ಸೈಯದ್ ಅಸ್ಗರ್ ಮೊದಲ ಪತ್ನಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯುವೆ ಎಂದು ಮಚ್ಚು ಹಿಡಿದು ಎಚ್ಚರಿಕೆ ಕೊಟ್ಟಿದ್ದಳು. ಸದ್ಯ ರೌಡಿಶೀಟರ್​​ನಿಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂತಾರಾ ಅಪಹಾಸ್ಯ ಪ್ರಕರಣ: 'ಸೂಪರ್ ಸ್ಟಾರ್ ಆದ್ರೇನು.. ನಾಲಿಗೆ ಮೇಲೆ ಹಿಡಿತ ಇರ್ಬೇಕು..': ನಟ ರಣವೀರ್ ಸಿಂಗ್ ಹೈಕೋರ್ಟ್ ಚಾಟಿ!

ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ: ಆದರೆ ದೇಶದ ಹಿತಕ್ಕಾಗಿ ಇದು ಒಳ್ಳೆಯದ್ದು ಎಂದ ಖರ್ಗೆ

ಪಶ್ಚಿಮ ಬಂಗಾಳ SIR ಪರಿಶೀಲನೆ: ಜಾರ್ಖಂಡ್-ಒಡಿಶಾ ನ್ಯಾಯಾಧೀಶರ ನಿಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ; Video

ಸಾಮೂಹಿಕ ಅತ್ಯಾಚಾರ: ಕೊನೆಗೂ ಮೌನ ಮುರಿದ ಸಂತ್ರಸ್ಥೆ, 'ನ್ಯಾಯಬೇಕು.. ನನ್ನಂತೆಯೇ ಸಾಕಷ್ಟು ಯುವತಿಯರಿಗೆ ದೌರ್ಜನ್ಯ'

SCROLL FOR NEXT