ರಕ್ಷಿಸಿರುವ ನಾಯಿಮರಿಗಳು. 
ರಾಜ್ಯ

ನಂದಿಬೆಟ್ಟದ ಬಳಿ 14 ನಾಯಿಮರಿಗಳ ಎಸೆದು ಹೋದ ಕಾಲೇಜು ಸಿಬ್ಬಂದಿ; ಅಮಾನವೀಯತೆಗೆ ಪ್ರಾಣಿಪ್ರಿಯರ ಆಕ್ರೋಶ

ನಾಯಮರಿಗಳು 20 ದಿನಗಳ ಹಿಂದೆ ಜನಿಸಿದ್ದು, ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಹೆಸರನ್ನು ಹೊಂದಿರುವ ವಾಹನದ ಭದ್ರತಾ ಸಿಬ್ಬಂದಿ ಸೇರಿ ಮೂವರು ಈ ನಾಯಿ ಮರಿಗಳನ್ನು ಎಸೆದು ಹೋಗುತ್ತಿರುವುದನ್ನು ಪ್ರಯಾಣಿಕನೊಬ್ಬ ನೋಡಿದ್ದಾನೆ.

ಬೆಂಗಳೂರು: ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಕೆಲವೊಂದು ಅಮಾನವೀಯ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಚಿಕ್ಕಬಳ್ಳಾಪುರ) ಕಾಲೇಜು ಸಿಬ್ಬಂದಿ 14 ನಾಯಿಗಳನ್ನು ನಂದಿಬೆಟ್ಟದ ಬಳಿ ಎಸೆದು ಹೋಗಿದ್ದಾರೆ. ಈ ಪೈಕಿ 13 ಮರಿಗಳನ್ನು ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸದಸ್ಯರು ರಕ್ಷಣೆ ಮಾಡಿದ್ದಾರೆ.

ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸಂಸ್ಥಾಪಕ ವಿಕಾಶ್ ಎ. ಬಾಫ್ನಾ ಅವರು ಮಾತನಾಡಿ, ನಾಯಮರಿಗಳು 20 ದಿನಗಳ ಹಿಂದೆ ಜನಿಸಿದ್ದು, ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಹೆಸರನ್ನು ಹೊಂದಿರುವ ವಾಹನದ ಭದ್ರತಾ ಸಿಬ್ಬಂದಿ ಸೇರಿ ಮೂವರು ಈ ನಾಯಿ ಮರಿಗಳನ್ನು ಎಸೆದು ಹೋಗುತ್ತಿರುವುದನ್ನು ಪ್ರಯಾಣಿಕನೊಬ್ಬ ನೋಡಿದ್ದಾನೆಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ರಕ್ಷಣೆಗೆ ಧಾವಿಸಲಾಗಿತ್ತು. ನಾಯಿಮರಿಗಳನ್ನು ಬೆಂಗಳೂರು-ಹೈದರಾಬಾದ್ ಹೆದ್ದಾರಿ (NH44) ಬಳಿ ಎಸೆಯಲಾಗಿತ್ತು. ಪೊದೆಗಳ ಮಧ್ಯೆ ನಾಯಿಗಳನ್ನು ಎಸೆದಿದ್ದರು. ರಕ್ಷಣೆ ಬಹಳ ಕಷ್ಟಕರವಾಗಿತ್ತು. 14 ಮರಿಗಳ ಪೈಕಿ 13 ಮರಿಗಳನ್ನು ರಕ್ಷಣೆ ಮಾಡಲಾಗಿದೆ. ಒಂದು ಮರಿ ಪತ್ತೆಯಾಗಿಲ್ಲ. 13 ಮರಿಗಳ ಪೈಕಿ ಒಂದು ನಾಯಿಮರಿ ವಾಹನದ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದೆ.

ಗಾಯಗೊಂಡ ನಾಯಿಮರಿಗೆ ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 12 ನಾಯಿಗಳನ್ನು ಕಾಲೇಜು ಕಾಂಪೌಂಡ್‌ನಲ್ಲಿರುವ ತಾಯಿಯೊಂದಿಗೆ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕಾಲೇಜು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಾಯಿಮರಿಗಳ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆಂದು ಬಫ್ನಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-PAC ಮೇಲೆ ಇಡಿ ದಾಳಿ ಖಂಡಿಸಿ ಅಮಿತ್ ಶಾ ಕಚೇರಿ ಹೊರಗೆ ಪ್ರತಿಭಟನೆ: ಟಿಎಂಸಿ ಸಂಸದರ ಬಂಧನ-Video

ಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಗಳಿಂದ ಗುಂಡಿಟ್ಟು ಮಹಿಳೆ ಹತ್ಯೆ, ‘ಸ್ವಯಂರಕ್ಷಣೆ ಕ್ರಮ’ ಎಂದು ಟ್ರಂಪ್ ಸಮರ್ಥನೆ

"ನನಗೆ ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳೂ ಬೇಕಿಲ್ಲ"- ಗ್ರೀನ್ ಲ್ಯಾಂಡ್ ವಶದ ಬಗ್ಗೆ ಟ್ರಂಪ್ ಸುಳಿವು

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ'- ಅಮೆರಿಕ ವಾಣಿಜ್ಯ ಕಾರ್ಯದರ್ಶಿ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ; ಸಿದ್ದರಾಮಯ್ಯ ತೀವ್ರ ಆಕ್ರೋಶ

SCROLL FOR NEXT