ಬೆಂಗಳೂರು: ಚಡ್ಡಿ ಹಾಕಿಕೊಂಡು ತಿರುಗಾಡುತ್ತಿದ್ದ ಯುವತಿಯೋರ್ವಳಿಗೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್‌ಗೆ ಯುವತಿಯೋರ್ವಳು ಥಳಿಸಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಹೋಂ ಗಾರ್ಡ್ ಲಕ್ಷ್ಮೀನರಸಮ್ಮಗೆ ಮೋಹಿನಿ ಎಂಬಾಕೆ ತೀವ್ರವಾಗಿ ಥಳಿಸಿದ್ದಾಳೆ. ಶಾರ್ಟ್ ಬಟ್ಟೆಗಳನ್ನು ಧರಿಸಿ ಮೋಹಿನಿ ಓಡಾಡುತ್ತಿದ್ದಳು. ಮೋಹಿನಿಯನ್ನು ನೋಡಿದ ಕೆಲ ಯುವಕರು ಚುಡಾಯಿಸಿದ್ದರು.
ಇದನ್ನು ಗಮನಿಸಿದ ಹೋಂ ಗಾರ್ಡ್ ಲಕ್ಷ್ಮೀನರಸಮ್ಮ ಯುವತಿಯನ್ನು ಕರೆದು ವಿಚಾರಿಸಿದರು. ಅಲ್ಲದೆ ಈ ರೀತಿ ಶಾರ್ಟ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದರೆ ಪುಂಡ ಪೋಕರಿಗಳು ಚುಡಾಯಿಸದೇ ಏನು ಮಾಡುತ್ತಾರೆ. ಮುಂದೆ ಈಗೇ ಸಣ್ಣ ಪುಟ್ಟ ಬಟ್ಟೆ ಧರಿಸಿ ಓಡಾಡಬೇಡ ಎಂದು ಬುದ್ಧವಾದ ಹೇಳಿದ್ದರು. ಇದರಿಂದ ಕೋಪಗೊಂಡ ಯುವತಿ, ನನಗೆ ಬುದ್ಧಿ ಹೇಳಲು ನೀನ್ಯಾರು? ಎಂದು ಹೋಂ ಗಾರ್ಡ್ ಗೆ ಮನಬಂದಂತೆ ಹೊಡೆದು ಹಲ್ಲೆ ನಡೆಸಿದ್ದಾಳೆ. ಸ್ಥಳೀಯರು ಆಗಮಿಸಿ ಹೋಂ ಗಾರ್ಡ್ ಮಹಿಳೆಯನ್ನು ರಕ್ಷಿಸಿದ್ದಾರೆ. ಹಲ್ಲೆ ನಡೆಸಿರುವ ಯುವತಿ ಮೋಹಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.