ಬೆಂಗಳೂರು: ಕರ್ನಾಟಕದಲ್ಲಿ ಮತ್ತೊಂದು ರಾಸಲೀಲೆ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಡಿಜಿಪಿ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆ ಜೊತೆ ರೊಮ್ಯಾನ್ಸ್ ನಲ್ಲಿ ತೊಡಗಿದ್ದ ಗಂಭೀರ ಆರೋಪ ಕೇಳಿಬಂದಿದೆ.
ಕಚೇರಿಯಲ್ಲೇ ಮಹಿಳೆಯ ಜೊತೆ ಡಿಜಿಪಿ ಡಾ.ಕೆ.ರಾಮಚಂದ್ರರಾವ್ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದ್ದು, ರಾಮಚಂದ್ರರಾವ್ ಸದ್ಯ ಡಿಸಿಆರ್ ಇ ಡಿಜಿಪಿಯಾಗಿದ್ದು ತಮ್ಮ ಹುದ್ದೆಯ ಘನತೆ ಮರೆತು ಸಮವಸ್ತ್ರದಲ್ಲೇ ಮಹಿಳೆಯ ಜೊತೆ ಕಚೇರಿಯಲ್ಲೇ ರಾಸಲೀಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ಈ ರಾಸಲೀಲೆ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಡಿಜಿಪಿ ರಾಮಚಂದ್ರರಾವ್ ಗೋಲ್ಡ್ ಸ್ಮಗಲ್ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾರಾವ್ ತಂದೆಯಾಗಿದ್ದು, ಡಿಜಿಪಿ ರಾಮಚಂದ್ರರಾವ್ ಕಚೇರಿಯಲ್ಲೇ ಮಹಿಳೆಯ ಜೊತೆ ರಾಸಲೀಲೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರನ್ಯಾರಾವ್ ಪ್ರಕರಣಕ್ಕಿಂತ ಮೊದಲೇ ಈ ರಾಸಲೀಲೆ ನಡೆದಿದೆ ಎನ್ನಲಾಗಿದೆ.
ಏನಿದು ವಿಡಿಯೋ?
ವೈರಲ್ ಆಗಿರುವ ವಿಡಿಯೊಗಳಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ, ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಾಡೆಲ್ ಸೇರಿ ಹಲವು ಮಹಿಳೆಯರ ಜತೆ ಸರಸವಾಡಿರುವ ವಿಡಿಯೊ ವೈರಲ್ ಆಗಿದೆ. ಕಚೇರಿಗೆ ಕೆಲಸದ ನಿಮಿತ್ತ ಬರುವ ಮಹಿಳೆಯರ ಜತೆಗೆ ಈ ಅಧಿಕಾರಿ ಸರಸವಾಡುತ್ತಿದ್ದರು ಎನ್ನಲಾಗುತ್ತಿದ್ದು, ಅವರ ಕಾಮಕಾಂಡದ ವಿಡಿಯೊಗಳು ಈಗ ಹೊರಬಂದಿವೆ.
ಕಚೇರಿಯಲ್ಲಿ ಮಹಿಳೆಗೆ ಚುಂಬನ
ಖಾಕಿ ಸಮವಸ್ತ್ರದಲ್ಲೇ ಕಚೇರಿಯ ಕುರ್ಚಿ ಮೇಲೆ ಕುಳಿತು ಯುವತಿಗೆ ಮುತ್ತು ಕೊಡುವ ದೃಶ್ಯಗಳು, ಮಹಿಳೆಯನ್ನು ಅಪ್ಪಿಕೊಳ್ಳುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಉನ್ನತ ಅಧಿಕಾರಿಯೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿದೆ. ಈ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ವೈಫಲ್ಯಗಳನ್ನು ವಿಪಕ್ಷಗಳು ಮುಗಿಬೀಳುತ್ತಿದ್ದು, ಸಿದ್ದರಾಮಯ್ಯ ಸರ್ಕಾರವನ್ನು ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಸಂಕಷ್ಟ ತರುವ ಸಾಧ್ಯತೆ ಇದೆ.
ಆರೋಪ ಅಲ್ಲಗಳೆದ DGP
ಇನ್ನು ಈ ಆರೋಪವನ್ನು ಡಿಜಿಪಿ ರಾಮಚಂದ್ರರಾವ್ ಅವರು ಅಲ್ಲಗಳೆದಿದ್ದು, ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
'ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ' ಎಂದು ಸಮರ್ಥಿಸಿಕೊಂಡಿದ್ದಾರೆ.