ಸಾಂದರ್ಭಿಕ ಚಿತ್ರ 
ರಾಜ್ಯ

ಧಾರವಾಡ : ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ಹೆತ್ತವರು; ಕಾಲಿನ ಹೆಬ್ಬೆರಳನ್ನು ಕಚ್ಚಿ ತಿಂದ ನಾಯಿ; ಗ್ರಾಮಸ್ಥರಿಂದ ಮಗು ರಕ್ಷಣೆ

ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಗುವಿನ ಎಡಗಾಲಿನ ಹೆಬ್ಬೆರಳನ್ನು ಸಂಪೂರ್ಣವಾಗಿ ಅಗಿದು ತಿಂದಿದೆ.

ಧಾರವಾಡ: ಕೃಷಿ ಜಮೀನಿನಲ್ಲಿ ಬಿಟ್ಟು ಹೋಗಿದ್ದ ನವಜಾತ ಶಿಶುವಿಗೆ ನಾಯಿ ಕಚ್ಚಿದ್ದು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಧಾರವಾಡ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬೈಹಟ್ಟಿ ಗ್ರಾಮದಲ್ಲಿರುವ ಹೊಲದಲ್ಲಿ ಮಗು ಅಳುತ್ತಿರುವುದನ್ನು ಕೇಳಿದ ಜನರು ಮಗುವನ್ನು ಪತ್ತೆಹಚ್ಚಿದ್ದಾರೆ. ನಾಯಿ ಕಚ್ಚಲು ಪ್ರಾರಂಭಿಸಿದಾಗ ಮಗು ನೋವಿನಿಂದ ಜೋರಾಗಿ ಅಳುತ್ತಿತ್ತು. ಹೊಲದಲ್ಲಿದ್ದ ಜನರು ಸ್ಥಳಕ್ಕೆ ಧಾವಿಸಿ ಆಶಾ ಕಾರ್ಯಕರ್ತರ ಸಹಾಯದಿಂದ ಅದನ್ನು ರಕ್ಷಿಸಿದರು.

ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಗುವಿನ ಎಡಗಾಲಿನ ಹೆಬ್ಬೆರಳನ್ನು ಸಂಪೂರ್ಣವಾಗಿ ಅಗಿದು ತಿಂದಿದೆ.

ಸುಮಾರು 2.6 ಕೆಜಿ ತೂಕದ ನವಜಾತ ಶಿಶುವಿಗೆ ಎನ್‌ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಗಾಯಗೊಂಡ ಮಗು ಬೆಳಿಗ್ಗೆ ಹೊಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗುಂಜನ್ ಆರ್ಯ ದೃಢಪಡಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮತ್ತು ಮಗುವನ್ನು ತ್ಯಜಿಸಿದ ಜನರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ; ಶೀಘ್ರದಲ್ಲೇ ದಕ್ಷಿಣ ಭಾರತದ ಸಿಎಂಗಳ ಸಮ್ಮೇಳನ: ಸಿದ್ದರಾಮಯ್ಯ

ಹೊಂಡಕ್ಕೆ ಬಿದ್ದು ನೋಯ್ಡಾ ಟೆಕ್ಕಿ ಸಾವು: ನಿರ್ಲಕ್ಷ್ಯದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಡೆವಲಪರ್ ಬಂಧನ

ಬೀದಿ ನಾಯಿ ವಿಷಯ ಸಂಬಂಧ ಮೇನಕಾ ಗಾಂಧಿಗೆ 'ಸುಪ್ರೀಂ' ಛೀಮಾರಿ: ಉಗ್ರ ಕಸಬ್ ಬಗ್ಗೆ ಕೋರ್ಟ್ ಪ್ರಸ್ತಾಪಿಸಿದ್ದೇಕೆ?

Tamil Nadu: ರಾಜ್ಯಪಾಲರಿಗೆ ಸಿಎಂ Stalin ತಿರುಗೇಟು, ವಾರ್ಷಿಕ ಭಾಷಣ ರದ್ದತಿಗೆ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯ!

ಕಚೇರಿಯಲ್ಲೇ ರಾಸಲೀಲೆ: DGP ರಾಮಚಂದ್ರ ರಾವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಆಗ್ರಹ

SCROLL FOR NEXT