ಮೈಸೂರು: ಮೈಸೂರು ಸಿಲ್ಕ್ ಸೀರೆ ಎಂದರೆ ಯಾವ ಮಹಿಳೆಯರಿಗೆ ಇಷ್ಟವಿಲ್ಲ ಹೇಳಿ, ಶುದ್ಧ ರೇಷ್ಮೆ ಸೀರೆಯನ್ನು ಖರೀದಿಸಲು ನಸುಕಿನ ಜಾವ 4 ಗಂಟೆಗೆ ಬಂದು ಸರದಿ ಸಾಲಿನಲ್ಲಿ ಮಹಿಳೆಯರು ನಿಂತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಶೋ ರೂಂ ಹೊರಗೆ ನಸುಕಿನ ಜಾವವೇ ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. 23,000 ರಿಂದ ಎರಡೂವರೆ ಲಕ್ಷದವರೆಗಿನ ರೇಷ್ಮೆ ಸೀರೆಗಳನ್ನು ಖರೀದಿಸಿದ್ದಾರೆ. ಪ್ರತಿ ಗ್ರಾಹಕರಿಗೆ ಕೇವಲ ಒಂದು ಸೀರೆ ಮಾತ್ರ ಖರೀದಿಸಲು ಅವಕಾಶ ನೀಡಲಾಗಿತ್ತು, ಟೋಕನ್ ಪಡೆದು ಮಹಿಳೆಯರು ಸಾಲಿನಲ್ಲಿ ನಿಂತಿದ್ದರು.
ಅಧಿಕೃತ ಮೈಸೂರು ರೇಷ್ಮೆ ಸೀರೆಗಳ ಕೊರತೆ ಇದೆ, ವಿಶೇಷವಾಗಿ ಶುದ್ಧ ಮೈಸೂರು ರೇಷ್ಮೆ ಸೀರೆಗಳ ಅಧಿಕೃತ ಉತ್ಪಾದನೆ ಮತ್ತು GI-ಟ್ಯಾಗ್ ಮಾಡಿದ ಹಕ್ಕುಗಳನ್ನು ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮ ನಿಗಮವು ಉತ್ಪಾದಿಸುವುದು ಸವಾಲಾಗಿದೆ.
ನಿಗಮವು ಸೀಮಿತ ಸಂಖ್ಯೆಯ ನುರಿತ ನೇಕಾರರು ಮತ್ತು ಕುಶಲಕರ್ಮಿಗಳನ್ನು ಹೊಂದಿದೆ. ಅವರ ತರಬೇತಿ 6-7 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.