ಬೆಂಗಳೂರು: ಯುಪಿಐ ಸ್ಕ್ಯಾನರ್-ಲಿಂಕ್ಡ್ ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಮೂವರು ನಿರ್ವಾಹಕರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಮಾನತುಗೊಳಿಸಿದೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ನಿಯಮಿತ ತಪಾಸಣೆಯಲ್ಲಿ, ಸುರೇಶ್, ಮಂಚೇಗೌಡ ಮತ್ತು ಅಶ್ವಕ್ ಖಾನ್ ಎಂಬ ಮೂವರು ಸಿಬ್ಬಂದಿ ಟಿಕೆಟ್ ನೀಡುವಾಗ ಬಿಎಂಟಿಸಿ ಒದಗಿಸಿದ ಅಧಿಕೃತ ಕೋಡ್ ಬದಲಿಗೆ ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿದ್ದರು ಎಂದು ತಿಳಿದುಬಂದಿದೆ.
ಮೂವರು ನಿರ್ವಾಹಕರು 1,04,821 ರೂಪಾಯಿ ಮೌಲ್ಯದ ಟಿಕೆಟ್ ಹಣವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ.
ದಕ್ಷಿಣ ವಲಯದಲ್ಲಿ ನಿಯೋಜನೆಗೊಂಡಿದ್ದ ಮಂಜೇಗೌಡ 54,358 ರೂಪಾಯಿಗಳನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ. ಈಶಾನ್ಯದಲ್ಲಿ ನಿಯೋಜನೆಗೊಂಡಿದ್ದ ಸುರೇಶ್ 47,257 ರೂ.ಗಳನ್ನು ಮತ್ತು ಅಶ್ವಕ್ ಖಾನ್ 3,206 ರೂ.ಗಳನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂತಹ ಘಟನೆ ಪುನರಾವರ್ತನೆಯಾಗದಂತೆ ತಡೆಯಲು, ಹೆಚ್ಚು ಪಾರದರ್ಶಕ ಟಿಕೆಟ್ ವ್ಯವಸ್ಥೆಗೆ ಕ್ರಿಯಾತ್ಮಕ ಕ್ಯೂಆರ್-ಆಧಾರಿತ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಟಿಸಿ ಯೋಜಿಸಿದೆ.