ತುಮಕೂರು: ಸಿದ್ದಗಂಗಾ ಮಠದ ಪೀಠಾಧಿಪತಿ ದಿವಂಗತ ಡಾ. ಶಿವಕುಮಾರ ಸ್ವಾಮೀಜಿಯ ಆದರ್ಶಗಳು ಆಡಳಿತದ ಮೂಲಕ ಸಾಂಸ್ಥಿಕ ಅಭಿವ್ಯಕ್ತಿಯನ್ನು ಕಂಡುಕೊಂಡಿವೆ ಎಂದು ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಅವರು ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿಕ್ಷಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ) ಗುರಿ ಸಾಧಿಸುವಲ್ಲಿ ಪೀಠಾಧಿಪತಿಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಮಾರ್ಗದರ್ಶಕ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
ಇಂದು ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಉದ್ಘಾಟಿಸಿದ ಮಾತನಾಡಿದ ಉಪ ರಾಷ್ಟ್ರಪತಿಗಳು, ಸಿದ್ದಗಂಗಾ ಮಠವು ನಾಗರಿಕರ ಆಧ್ಯಾತ್ಮಿಕ ಅಭಿವೃದ್ಧಿಯಲ್ಲಿ ಹಾಗೂ ಆರೋಗ್ಯ, ಶಿಕ್ಷಣ, ಸಾಮಾಜಿಕ ಏಕೀಕರಣದಂತಹ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.
ರಾಧಾಕೃಷ್ಣನ್ ಅವರ ಪ್ರಕಾರ, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಧರ್ಮ ಮತ್ತು ಸೇವೆ, ವಸುಧೈವ ಕುಟುಂಬಕಂ ಮತ್ತು ಪ್ರಕೃತಿಯ ಮೇಲಿನ ಗೌರವದ ಮೂಲಕ ಸಮಾಜವನ್ನು ಉಳಿಸಿಕೊಂಡಿದೆ ಎಂದರು.
"ಇತ್ತೀಚಿನ ವರ್ಷಗಳಲ್ಲಿ, ಅವರ(ಶಿವಕುಮಾರ ಸ್ವಾಮೀಜಿ) ಕಾಲಾತೀತ ಆದರ್ಶಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆಡಳಿತದ ಮೂಲಕ ಸಾಂಸ್ಥಿಕ ಅಭಿವ್ಯಕ್ತಿಯನ್ನು ಕಂಡುಕೊಂಡಿವೆ" ಎಂದು ರಾಧಾಕೃಷ್ಣನ್ ಹೇಳಿದರು.
"ಮುಖ್ಯವಾಗಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಹಿಂದೂ ಪ್ರಜ್ಞೆಯ ಪುನರುಜ್ಜೀವನಗೊಳ್ಳುತ್ತಿದೆ. ನಾವು ಯಾರು, ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಯಾವ ಮೌಲ್ಯಗಳು ನಮ್ಮನ್ನು ಮುನ್ನಡೆಸಲು ಮಾರ್ಗದರ್ಶನ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಧಾನಿ ಮೋದಿ ನುಡಿಯಂತೆ ವಿಕಸಿತ ಭಾರತದತ್ತ ಸಾಗುತ್ತಿದ್ದೇವೆ. ಮಠವು ನಾಗರಿಕರ ಆಧ್ಯಾತ್ಮಿಕ ಅಭಿವೃದ್ಧಿ ಜತೆಗೆ ಶಿಕ್ಷಣ, ಆರೋಗ್ಯ ಸಾಮಾಜಿಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆಧುನಿಕ ಜಗತ್ತಿನಲ್ಲಿ ಎತ್ತರವಾಗಿ ನಿಂತಿದೆ
ಸಾರಾಂಶವಾಗಿ ಒಟ್ಟಾರೆಯಾಗಿ ಹೇಳುವುದಾದರೆ ನಾವು ಭೌತಿಕವಾಗಿ ಮುನ್ನಡೆಯುತ್ತಾ ಆಚಾರಾತ್ಮಕವಾಗಿ ನೆಲೆಯೂರಿದ್ದೇವೆ. ಮಠದಂತಹ ಸಂಸ್ಥೆಗಳು ಆಧ್ಯಾತ್ಮಿಕವಾಗಿ ನೆಲೆಯೂರಲು ಪ್ರೇರೇಪಿಸುವೆ. ಅವರ ಆದರ್ಶಗಳನ್ನು ಅನುಸರಿಸಬೇಕು
ಸ್ವಾಮೀಜಿ ಗೆ ಗೌರವ ನೀಡುವುದು ನಮ್ಮ ಸೇವೆಯಲ್ಲಿದೆ ಎಂದರು.
ಡಾ. ಶಿವಕುಮಾರ ಸ್ವಾಮೀಜಿ ಅವರು ಜನವರಿ 21, 2019 ರಂದು ತಮ್ಮ 111 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.