ಕೊಲೆಯಾದ ರಾಜೇಶ್ವರಿ ಫಕ್ಕಿರಪ್ಪ ಹಾಗೂ ಹಂತಕ ಫಕ್ಕಿರಪ್ಪ 
ರಾಜ್ಯ

ಬೆಂಗಳೂರು: ಪತ್ನಿ ಕೊಂದು 'ಹಾರ್ಟ್ ಆಟ್ಯಕ್' ಕಥೆ ಕಟ್ಟಿದ ಪತಿಯ ಬಂಧನ!

ಮೂರು ವರ್ಷಗಳ ಹಿಂದಷ್ಟೇ ರಾಜೇಶ್ವರಿ ಮದುವೆಯಾಗಿತ್ತು. ಆದರೆ ಮಕ್ಕಳಿಲ್ಲದ ಕಾರಣ ದಂಪತಿ ನಡುವೆ ಜಗಳ ನಡೆಯುತಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.

ಬೆಂಗಳೂರು: ಮಕ್ಕಳು ಬೇಕು, ಮಕ್ಕಳು ಬೇಕು ಎಂದು ಕೇಳುತ್ತಿದ್ದ ಪತ್ನಿಯನ್ನು ಕೊಂದು ಹಾರ್ಟ್ ಆಟ್ಯಕ್ ಆಗಿದೆ ಎಂದು ಕಥೆ ಕಟ್ಟಿದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನೇಗಿನಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

21 ವರ್ಷದ ರಾಜೇಶ್ವರಿ ಫಕ್ಕಿರಪ್ಪ ಗಿಲಕ್ಕನವರ್ ಅವರನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ಹಾರ್ಟ್ ಆಟ್ಯಕ್' ಕಥೆ ಕಟ್ಟಿದ ಪತಿ ಫಕ್ಕಿರಪ್ಪ ಗಿಲಕ್ಕನವರ್, ಆಕೆಯ ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರಿಗೆಲ್ಲಾ ಸುದ್ದಿ ಮುಟ್ಟಿಸಿದ್ದ.

ಮೂರು ವರ್ಷಗಳ ಹಿಂದಷ್ಟೇ ರಾಜೇಶ್ವರಿ ಮದುವೆಯಾಗಿತ್ತು. ಆದರೆ ಮಕ್ಕಳಿಲ್ಲದ ಕಾರಣ ದಂಪತಿ ನಡುವೆ ಜಗಳ ನಡೆಯುತಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಕೋಪದ ಭರದಲ್ಲಿ ಕೋಪದ ಭರದಲ್ಲಿ ಗಿಲಕ್ಕನವರ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ರಾಜೇಶ್ವರಿ ಅವರ ಪೋಷಕರು ಅಂತ್ಯಕ್ರಿಯೆಗೆ ಆಗಮಿಸಿದಾಗ ಆಕೆಯ ಕತ್ತಿನ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ್ದು, ನಿಜವಾಗಿಯೂ ಹಾರ್ಟ್ ಆಟ್ಯಕ್ ನಿಂದ ಸತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ರಾಜೇಶ್ವರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ತಿಳಿದುಬಂದಿದೆ.

ವಿಚಾರಣೆ ವೇಳೆ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ರಾಜೇಶ್ವರಿ ಶವವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: ಸಿಎಂ ಆಗಮನಕ್ಕೂ ಮುನ್ನ ಕುಸಿದುಬಿದ್ದ ಬೃಹತ್ ಕಟೌಟ್​ಗಳು; ನಾಲ್ವರಿಗೆ ಗಾಯ

ಒಂದೇ ಒಂದು ದಾಳಿಯಾದರೂ ಯುದ್ಧವೆಂದು ಪರಿಗಣಿಸುತ್ತೇವೆ, ಸಂಪೂರ್ಣ ಬಲದೊಂದಿಗೆ ಹೋರಾಡುತ್ತೇವೆ: ಟ್ರಂಪ್'ಗೆ ಇರಾನ್ ತಿರುಗೇಟು

ಜನಾರ್ಧನ ರೆಡ್ಡಿ ಮಾಡೆಲ್ ಹೌಸ್​ಗೆ ಅಗ್ನಿ ಅವಘಡ ಪ್ರಕರಣಕ್ಕೆ ಭಾರೀ ತಿರುವು: ರೀಲ್ಸ್ ಮಾಡಲು ಹೋಗಿ ಬೆಂಕಿ ಹಚ್ಚಿದ್ರಾ ಹುಡುಗರು..?

ಮುಂಬೈನ ವಸತಿ ಕಟ್ಟಡದಲ್ಲಿ ಎರಡು ಸುತ್ತು ಗುಂಡು ಹಾರಿಸಿದ ನಟ ಕಮಲ್ ಖಾನ್ ಬಂಧನ!

ಅಮೆರಿಕಾ: ವಿಕೋಪಕ್ಕೆ ತಿರುಗಿದ ವಾಗ್ವಾದ; ಪತಿ ಹಾರಿಸಿದ ಗುಂಡಿಗೆ ಭಾರತೀಯ ಮಹಿಳೆ - ಮೂವರು ಸಂಬಂಧಿಕರು ಬಲಿ!

SCROLL FOR NEXT