ಕರ್ನಾಟಕ ಮುಖ್ಯಕಾರ್ಯದರ್ಶಿ ಹೊಸ ಸುತ್ತೋಲೆ 
ರಾಜ್ಯ

'ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆ ರಿಸೀವ್ ಮಾಡಲೇಬೇಕು': ಕರ್ನಾಟಕ ಮುಖ್ಯಕಾರ್ಯದರ್ಶಿ ಹೊಸ ಸುತ್ತೋಲೆ!

ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆ ರಿಸೀವ್ ಮಾಡಲೇಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಹೌದು.. ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಶಾಸಕರು, ಪರಿಷತ್ ಸದಸ್ಯರ, ಸಂಸದರ ಫೋನ್ ಕರೆ ಸ್ವೀಕರಿಸುವ ಸಂಬಂಧ ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಅಧಿಕಾರಿಗಳು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವುದು, ಮರಳಿ ಕರೆ ಮಾಡದೇ ಇರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

ಈ ವಿಚಾರವಾಗಿ ಸುತ್ತೋಲೆ ಹೊರಡಿಸಿರುವ ಅವರು, ಇನ್ನು ಮುಂದೆ ಎಲ್ಲ ಸರ್ಕಾರಿ ಅಧಿಕಾರಿಗಳು ಎಂಎಲ್ಎಗಳ ತ್ತು ಎಂಎಲ್‌ಸಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಲೇಬೇಕು. ಒಂದು ವೇಳೆ ಕರೆ ಬಂದಾಗ ಇತರ ಕೆಲಸಗಳಲ್ಲಿ ವ್ಯಸ್ತರಾಗಿದ್ದಲ್ಲಿ, ಮರಳಿ ಕರೆ ಮಾಡಿ ಮಾತನಾಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆ ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ವಿಧಾನಸಭಾ ಹಾಗೂ ಪರಿಷತ್ತಿನ ಸದಸ್ಯರಿಗೆ ವಿನಂತಿಸಿಕೊಂಡಾಗ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಬೇಕಾಗುತ್ತದೆ.

ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಇನ್ಮುಂದೆ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ, ಪರಿಷತ್ತಿನ ಸದಸ್ಯರು, ಸಂಸದರ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಕರ್ತವ್ಯ ಮುಗಿದ ನಂತರ ಮರು ಕರೆಯನ್ನು ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ಮುಖ್ಯಕಾರ್ಯದರ್ಶಿ ಹೊಸ ಸುತ್ತೋಲೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: ಸಿಎಂ ಆಗಮನಕ್ಕೂ ಮುನ್ನ ಕುಸಿದುಬಿದ್ದ ಬೃಹತ್ ಕಟೌಟ್​ಗಳು; ನಾಲ್ವರಿಗೆ ಗಾಯ

ಛತ್ತೀಸ್‌ಗಢದಲ್ಲಿ ಆಘಾತಕಾರಿ ಕಳ್ಳತನ: 10 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಖದೀಮರು!

ತಿರುವನಂತಪುರಂ: ಮೋದಿ ಭೇಟಿ ವೇಳೆ ಅಕ್ರಮ ಫ್ಲೆಕ್ಸ್‌; ಬಿಜೆಪಿ ನೇತೃತ್ವದ ಪಾಲಿಕೆಯಿಂದ ಕೇಸರಿ ಪಕ್ಷಕ್ಕೆ 20 ಲಕ್ಷ ರೂ. ದಂಡ!

ಬಂಗಾಳದಲ್ಲಿ ತರಾತುರಿಯಲ್ಲಿ SIR; ಪ್ರಜಾಪ್ರಭುತ್ವ ಭಾಗವಹಿಸುವಿಕೆಗೆ ಅಪಾಯ: ಅಮರ್ತ್ಯ ಸೇನ್ ಎಚ್ಚರಿಕೆ

ರಾಜಸ್ಥಾನದಲ್ಲಿ ಶೀತ ಅಲೆ ತೀವ್ರ; ಮೌಂಟ್ ಅಬುನಲ್ಲಿ -7 ಡಿಗ್ರಿಗೆ ತಾಪಮಾನ ಕುಸಿತ, Video

SCROLL FOR NEXT