ಬೆಂಗಳೂರು ವಾಯು ಗುಣಮಟ್ಟದಲ್ಲಿ ಚೇತರಿಕೆ 
ರಾಜ್ಯ

ಅಚ್ಚರಿಯಾದ್ರೂ ಸತ್ಯ: ಬೆಂಗಳೂರು ವಾಯುಗುಣಮಟ್ಟ ಗಣನೀಯ ಚೇತರಿಕೆ: ಹವಾಮಾನ ಇಲಾಖೆ!

ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ..

ಬೆಂಗಳೂರು: ದೆಹಲಿ ರೀತಿಯಲ್ಲೇ ಬೆಂಗಳೂರಿನ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಮಂಗಳವಾರ ಸಿಲಿಕಾನ್ ಸಿಟಿಯ ವಾಯುಗುಣಮಟ್ಟ ಗಣನೀಯವಾಗಿ ಚೇತರಿಸಿಕೊಂಡಿದೆ.

ಹೌದು.. ಕಳೆದ ಕೆಲ ವರ್ಷಗಳಿಂದಲೂ ಅಪಾಯಕಾರಿ ಮಟ್ಟದಲ್ಲೇ ಇದ್ದ ಬೆಂಗಳೂರು ವಾಯುಗುಣ ಮಟ್ಟ ಮಂಗಳವಾರ ಚೇತರಿಕೆ ಕಂಡಿದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಹಿಂದೆ ಬೆಂಗಳೂರಿನ ವಾಯುಗುಣಮಟ್ಟ 200ಕ್ಕೇರಿ ದೆಹಲಿ ಹಾದಿಯಲ್ಲೇ ಸಾಗುತ್ತಿದೆ ಎಂಬ ಟೀಕೆಗಳಿಗೆ ಗುರಿಯಾಗಿತ್ತು. ಇದಾದ ಬಳಿಕ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು.

ಆದರೆ ಇದೀಗ ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.

ಮಂಗಳವಾರ ಬೆಂಗಳೂರಿನ ವಾಯುಗುಣಮಟ್ಟ 129 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ಗಣನೀಯ ಚೇತರಿಕೆಯಾಗಿದೆ. ಆದರೂ ಇಂದಿಗೂ ಗಾಳಿಯು ಕಲುಷಿತವಾಗಿಯೇ ಇದ್ದು, ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ವಾಯುಗುಣಮಟ್ಟ ಸಾಕಷ್ಟು ಚೇತರಿಕೆಯಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪೈಕಿ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ಜಿಲ್ಲೆಗಳ ಪೈಕಿ ಗಣಿ ಜಿಲ್ಲೆ ಬಳ್ಳಾರಿ (153) ಮಂಗಳೂರು (158), ಉಡುಪಿ (162) ಸ್ಥಾನಪಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುಂಬಾ ಆದೇಶ ಕೊಟ್ಟಿದ್ದೀರಿ.. ಇನ್ನು ಸಾಕು..': ಅಮೆರಿಕಕ್ಕೆ ವೆನೆಜುವೆಲಾ ಖಡಕ್ ವಾರ್ನಿಂಗ್!

ಶೀಘ್ರ ಕೆನಡಾ ಪ್ರಧಾನಿ Mark Carney ಭಾರತ ಭೇಟಿ: ಪರಮಾಣು ಯೋಜನೆಗೆ ಶಕ್ತಿ, 2.8 ಬಿಲಿಯನ್ Uranium ಡೀಲ್ ಗೆ ಸಹಿ!

ನಿರಂತರ ಭಯೋತ್ಪಾದನೆ: UNSC ಯಲ್ಲಿ ಪಾಕ್ ಮುಟ್ಟಿ ನೋಡಿಕೊಳ್ಳುವಂತೆ ಭಾರತದ ತಿರುಗೇಟು!

ಭಾರತ- EU ನಡುವೆ 'Mother of All Deals: ಉರಿದುಕೊಂಡ ಅಮೆರಿಕ! ಹೇಳಿದ್ದೇನು?

ಸೆಣಬಿನ ಕೊರತೆ, ಸಿಗದ ಗೋಣಿ ಚೀಲಗಳು! ರಾಗಿ ಖರೀದಿಯಾಗದೆ ರೈತರ ಪರದಾಟ!

SCROLL FOR NEXT