ಭದ್ರತಾ ಸಿಬ್ಬಂದಿ ತುಳಿದು ಕೊಂದ ಕಾಡಾನೆ! 
ರಾಜ್ಯ

ಕೊಡಗಿನಲ್ಲಿ ಮತ್ತೊಂದು ದುರಂತ: ಸುತ್ತಾಡುತ್ತಿದ್ದ ಭದ್ರತಾ ಸಿಬ್ಬಂದಿ ತುಳಿದು ಕೊಂದ ಕಾಡಾನೆ! Video

ಕಾಫಿ ಎಸ್ಟೇಟ್‌ನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಹುಂಡ್ಲಿಯ ನಿವಾಸಿ ಅಬ್ದುಲ್ ಲತೀಫ್ (72) ಗುರುವಾರ ಮಧ್ಯಾಹ್ನ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಮಡಿಕೇರಿ: ಕಾಫಿ ನಾಡು ಕೊಡಗಿನಲ್ಲಿ ಮತ್ತೊಂದು ಕಾಡಾನೆ ದುರಂತ ಸಂಭವಿಸಿದ್ದು, ಎಸ್ಟೇಟ್ ನಲ್ಲಿ ಸುತ್ತಾಡುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ದಿಢೀರ್ ಎದುರಾದ ಕಾಡಾನೆ ಅವರನ್ನು ತುಳಿದು ಕೊಂದು ಹಾಕಿದೆ.

ಕೊಡಗಿನನ ಸಿದ್ದಾಪುರ ಬಳಿಯ ಬಡಗ-ಬಣಂಗಾಲ ಗ್ರಾಮದಲ್ಲಿ ಈ ನಡೆದಿದ್ದು, ಎಸ್ಟೇಟ್‌ನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಹುಂಡ್ಲಿಯ ನಿವಾಸಿ ಅಬ್ದುಲ್ ಲತೀಫ್ (72) ಗುರುವಾರ ಮಧ್ಯಾಹ್ನ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಊಟದ ಸಮಯದಲ್ಲಿ, ಲತೀಫ್ ಎಸ್ಟೇಟ್‌ನಲ್ಲಿ ಸುತ್ತಾಡುತ್ತಿದ್ದಾಗ ಕಾಡಾನೆಯೊಂದು ಎದುರಾಯಿತು. ಈ ವೇಳೆ ನೋಡ ನೋಡುತ್ತಲೇ ಕಾಡಾನೆ ಆತನ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ. ಇತರೆ ಕೆಲವು ಕಾರ್ಮಿಕರು ದಾಳಿಯಿಂದ ಪಾರಾಗಿದ್ದಾರೆ.

ಬಳಿಕ ಆನೆ ದೂರಾದ ಬಳಿಕ ಲತೀಫ್‌ನನ್ನು ಸಿದ್ದಾಪುರ ಆರೋಗ್ಯ ರಕ್ಷಣಾ ಕೇಂದ್ರಕ್ಕೆ ಕರೆದೊಯ್ಯುವಾಗ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

ವಿರಾಜಪೇಟೆ ಆರ್‌ಎಫ್‌ಒ ಕೆ.ವಿ. ಶಿವರಾಮ್ ಸೇರಿದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಏತನ್ಮಧ್ಯೆ, ಈ ಕಾಫಿ ಋತುವಿನಲ್ಲಿ ಹಲವಾರು ಆನೆಗಳು ಎಸ್ಟೇಟ್‌ಗಳಲ್ಲಿ ಓಡಾಡುತ್ತಿವೆ ಎಂದು ಸ್ಥಳೀಯರು ಹಂಚಿಕೊಂಡರು ಮತ್ತು ಅದೇ ಆನೆ ಈ ಹಿಂದೆ ಮತ್ತೊಬ್ಬ ಎಸ್ಟೇಟ್ ಕೆಲಸಗಾರನ ಮೇಲೆ ದಾಳಿ ಮಾಡಿತ್ತು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಡು ಆನೆಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಈ ಮಧ್ಯೆ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಆನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಹಾರ ವಿತರಣೆ

ಅರಣ್ಯ ಇಲಾಖೆಯು ಲತೀಫ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಪದೇ ಪದೇ ದಾಳಿ ನಡೆಯುತ್ತಿರುವುದರಿಂದ ಒಂಟಿ ಆನೆಯನ್ನು ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

'ಅಪಾಯಕಾರಿ ಪರಿಣಾಮಕ್ಕೆ ಕಾರಣ, ಸಮಾಜ ವಿಭಜನೆ': ಜಾತಿ ತಾರತಮ್ಯದ ವಿರುದ್ಧದ ಹೊಸ UGC ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ!

ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ: ಬಜೆಟ್ ಅನುದಾನ ಕುರಿತು ಚರ್ಚೆ!

ಬೆಂಗಳೂರು: 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಕೆ.ಪಿ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌

ಕೊಡಗಿನ ಯುವತಿಯರ ಜತೆ ರಾಸಲೀಲೆ; ವಿಡಿಯೋ ಮಾಡಿ, ಪ್ರಸಾರ: ಬಿಬಿಎ ವಿದ್ಯಾರ್ಥಿ ಮೊಹಮ್ಮದ್ ಬಂಧನ

SCROLL FOR NEXT