ಕ್ರೆಸ್ಟ್ ಗೇಟ್ ಕುಸಿತ  
ರಾಜ್ಯ

ತುಂಗಾಭದ್ರಾ ಕ್ರೆಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ ಹಣ ವಾಪಸ್: ಸರ್ಕಾರದ ವಿರುದ್ಧ BJP ಆಕ್ರೋಶ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತುಂಗಭದ್ರಾ ಮಂಡಳಿ ಮೇ 2026ರೊಳಗೆ ಎಲ್ಲಾ ಹೊಸ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

ಬೆಂಗಳೂರು: ತುಂಗಭದ್ರಾ ಜಲಾಶಯಕ್ಕೆ 33 ಹೊಸ ಗೇಟ್‌ಗಳನ್ನು ಅಳವಡಿಸುವ ಸಂಬಂಧ ಕರ್ನಾಟಕ ಸರ್ಕಾರ ತನ್ನ ಪಾಲಿನ ಹಣವನ್ನು ಹಿಂಪಡೆದಿದೆ ಎಂದು ಹೇಳಲಾಗುತ್ತಿದ್ದು. ಇದರ ಬೆನ್ನಲ್ಲೇ ರಾಜ್ಯದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು. ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತುಂಗಭದ್ರಾ ಮಂಡಳಿ ಮೇ 2026ರೊಳಗೆ ಎಲ್ಲಾ ಹೊಸ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಹಿತವನ್ನು ಕಾಪಾಡಬೇಕಾದರೆ ಕರ್ನಾಟಕ ಸರ್ಕಾರ ತಡೆಹಿಡಿದಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡಿ ತನ್ನ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದ ಘಟನೆ ಎಲ್ಲರಿಗೂ ತಿಳಿದಿದೆ. ಆಗ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಗೇಟ್ ಅಳವಡಿಸಿತ್ತು. ತಜ್ಞರ ಸಲಹೆ ಮೇರೆಗೆ ಮುರಿದ ಗೇಟ್ ಸೇರಿದಂತೆ ಉಳಿದ 33 ಗೇಟ್‌ಗಳನ್ನು ಬದಲಾಯಿಸಲು ತುಂಗಗಭದ್ರಾ ಮಂಡಳಿ ಕ್ರಮ ಕೈಗೊಂಡಿದೆ.

ಈ ಗೇಟ್‌ಗಳ ಬದಲಾವಣೆ ವೆಚ್ಚವನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಭರಿಸಬೇಕಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರ ರೂ.10 ಕೋಟಿ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶ ಸರ್ಕಾರ ರೂ.20 ಕೋಟಿ ಬಿಡುಗಡೆ ಮಾಡಿದೆ,

ಇದರಲ್ಲಿ ಆಂಧ್ರಪ್ರದೇಶ ಸರ್ಕಾರ ಬಿಡುಗಡೆ ಮಾಡುವ ಮೊತ್ತವು ಕರ್ನಾಟಕ ಸರ್ಕಾರದ ಹೊಸಪೇಟೆ ಖಜಾನೆಯ ಮೂಲಕನೇ ಬಿಡುಗಡೆ ಮಾಡಲಾಗುತ್ತದೆ. ನಂತರ ಆಂಧ್ರ ಸರ್ಕಾರವು ತುಂಗಭದ್ರಾ ಮಂಡಳಿಗೆ ನಿರ್ವಹಣೆ ಮತ್ತು ವೇತನಕ್ಕಾಗಿಕರ್ನಾಟಕ ಸರ್ಕಾರದ ಹೊಸಪೇಟೆ ಖಜಾನೆಹೆ 33 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೊತ್ತವನ್ನು ತುಂಗಾಭದ್ರಾ ಮಂಡಳಿಗೆ ಪಾವತಿಸಬೇಕಾಗಿದೆ ಎಂದು ವಿವರಿಸಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: DCM ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕಾರ?

ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆ: 16 ವರ್ಷದೊಳಗಿನವರಿಗೆ "social media" ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ..!

ಫೆಬ್ರವರಿ 1 ಕೇಂದ್ರ ಬಜೆಟ್: ಭಾನುವಾರದಂದೇ ಆಯವ್ಯಯ ಮಂಡಿಸುತ್ತಿರುವುದೇಕೆ; ಬ್ರಿಟೀಷ್ ಯುಗದ ಸಂಪ್ರದಾಯ ಮುರಿದದ್ದು ಯಾರು?

ಕರ್ನಾಟಕದ ತೆರಿಗೆ ಪಾಲು ಕನಿಷ್ಟ ಶೇ.4.7 ಮರು ನಿಗದಿಯಾಗಲಿ: ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಅಭಿಯಾನ

ಜ.28ರಿಂದಲೂ ವಿಚಾರಣೆ ನಡೆಸುತ್ತಿದ್ದರು, ರಾಯ್ ಸಾವಿಗೆ IT ಕಿರುಕುಳವೇ ಕಾರಣ: ಸಹೋದರ ಸಿಜೆ.ಬಾಬು ಗಂಭೀರ ಆರೋಪ

SCROLL FOR NEXT