ಸೈಕಲ್ ನಲ್ಲಿ ತಿರುಪತಿ ತಲುಪಿದ ಸುರೇಶ್ ಕುಮಾರ್ 
ರಾಜ್ಯ

60ರ ಹರೆಯದಲ್ಲೂ ಸುರೇಶ್ ಕುಮಾರ್ ಸಾಹಸ: ಸೈಕಲ್‌ನಲ್ಲೇ ತಿರುಪತಿ ತಲುಪಿದ ರಾಜಾಜಿನಗರ ಶಾಸಕ!

ಬೆಂಗಳೂರಿನಿಂದ ತಿರುಪತಿ ವೆಂಕಟರಮಣ ಸ್ವಾಮಿ ಸನ್ನಿಧಿವರೆಗಿನ ಒಟ್ಟು 265ಕಿಲೋಮೀಟರ್ ದೂರದ ಹಾದಿಯನ್ನು ಶಾಸಕರು ಮತ್ತು ಅವರ ಸೈಕ್ಲಿಂಗ್ ತಂಡ ಕೇವಲ 14 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ತಿರುಪತಿಗೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿ ಎಲ್ಲರ ಹುಬ್ಬೇರಿಸಿದ್ದಾರೆ.‌

ಬೆಂಗಳೂರಿನಿಂದ ತಿರುಪತಿ ವೆಂಕಟರಮಣ ಸ್ವಾಮಿ ಸನ್ನಿಧಿವರೆಗಿನ ಒಟ್ಟು 265ಕಿಲೋಮೀಟರ್ ದೂರದ ಹಾದಿಯನ್ನು ಶಾಸಕರು ಮತ್ತು ಅವರ ಸೈಕ್ಲಿಂಗ್ ತಂಡ ಕೇವಲ 14 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.

ತಮ್ಮ 60ರ ಹರೆಯದಲ್ಲೂ ಯುವಕರಿಗೂ ಮಾದರಿಯಾಗುವಂತೆ ಸೈಕಲ್ ತುಳಿದಿರುವ ಸುರೇಶ್ ಕುಮಾರ್ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಬೆಂಗಳೂರಿನಿಂದ ಹೊರಟ ಈ ಸೈಕ್ಲಿಂಗ್ ತಂಡವು ಹೆದ್ದಾರಿಯ ಕಠಿಣ ಹಾದಿ, ಏರಿಳಿತಗಳನ್ನು ಯಶಸ್ವಿಯಾಗಿ ದಾಟಿ ನಿಗದಿತ ಅವಧಿಗಿಂತ ಮುನ್ನವೇ ತಿರುಪತಿ ಬೆಟ್ಟದ ತಪ್ಪಲನ್ನು ತಲುಪಿದೆ.

10 ಜನರ ತಂಡದ ಜೊತೆ ಸುರೇಶ್ ಕುಮಾರ್ ಸೈಕಲ್​ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ. ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿ ಇ ಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ