ಬಿಡದಿಯಲ್ಲಿ ಅಧಿಕಾರಿಗಳಿಗೆ ಪೊರಕೆಯಿಂದ ಥಳಿಸಲು ಮುಂದಾದ ಟೌನ್ ಶಿಪ್ ವಿರೋಧಿ ರೈತ ಮಹಿಳೆ  online desk
ರಾಜ್ಯ

ಬಿಡದಿ ಟೌನ್ ಶಿಪ್: ಸರ್ವೇಗೆ ಬಂದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಏಟು: ಕಾರಿನ ಗ್ಲಾಸ್ ಪೀಸ್!

ಜೆಎಂಸಿ ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಹೊರತಾಗಿಯೂ ಸರ್ವೇ ನಡೆಸಲು ಮುಂದಾದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ.

ಬಿಡದಿ ಟೌನ್​ಶಿಪ್ ನ್ನು ವಿರೋಧಿಸುತ್ತಿರುವ ಸ್ಥಳೀಯ ರೈತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಮೀನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ರೈತರು ಕೆರಳಿದ್ದು, ವಿರೋಧದ ನಡುವೆಯೂ ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಮುಂದಾದ ಜಿಬಿಡಿಎ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಜೆಎಂಸಿ ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಹೊರತಾಗಿಯೂ ಸರ್ವೇ ನಡೆಸಲು ಮುಂದಾದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ.

ಸರ್ವೆಗೆ ಬಂದ ಅಧಿಕಾರಿಗಳ ಕಾರನ್ನು ಸುತ್ತುವರಿದು, ಪೊರಕೆ, ಕಲ್ಲುಗಳಿಂದ ಥಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶ ತಡೆಯಲು ಸಾಧ್ಯವಾಗಲಿಲ್ಲ. ಘಟನೆ ಬೆನ್ನಲ್ಲೇ ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಶ್ರೀನಿವಾಸ ಗೌಡ ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ನಾವು ಸುಮ್ಮನೆ ನೋಡ್ತಾ ಕೂರಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CCTV ಕಡ್ಡಾಯ: ಮುಜರಾಯಿ ದೇವಾಲಯಗಳಲ್ಲಿ ಭದ್ರತೆ, ದೇಣಿಗೆಗಳ ಪಾರದರ್ಶಕತೆಗಾಗಿ ರಾಜ್ಯ ಸರ್ಕಾರದಿಂದ SOP

ದಾಖಲೆಯಲ್ಲಿ ಸ್ಪೆಲ್ಲಿಂಗ್ ತಪ್ಪಾಗಿದೆ ಎಂಬ ಕಾರಣ ಆತ ವಿದೇಶಿಗನಲ್ಲ; ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಖಡಕ್ ಸೂಚನೆ

ಹನಿಮೂನ್ ಆಯ್ತು, ಈಗ ರೈಲಿನಲ್ಲೇ ಪೂಜೆ-ಪುನಸ್ಕಾರ; video ವೈರಲ್, ಇಲಾಖೆ ಸ್ಪಷ್ಟನೆ! ಇಷ್ಟಕ್ಕೂ ಏನಿದು ಸಲೂನ್ ಕೋಚ್?

ಹೇ... ನಿಂಗೆ ಗೊತ್ತ ನಮ್ಮ ತಾತ ಸಬ್ ಇನ್ಸ್‌ಪೆಕ್ಟರ್‌: ಕಾರು ಚಲಾಯಿಸಿದ್ದ 6 ವರ್ಷದ ಬಾಲಕಿಯಿಂದ ಸಾರ್ವಜನಿಕರಿಗೆ ಅವಾಜ್, Video!

ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಟ್ರಂಪ್ ಯಿಂದ ಪಡೆಯಬೇಕಾ? ಶ್ವೇತಭವನ ಹೊರಗೆ ಪ್ರತಿಭಟಿಸಬೇಕಾ? ಕೇಂದ್ರದ ವಿರುದ್ಧ CM ಒಮರ್ ಅಬ್ದುಲ್ಲಾ ಕಿಡಿ