ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: CCB ಅಧಿಕಾರಿಗಳಂತೆ ನಟಿಸಿ ಜಿಮ್ ಟ್ರೈನರ್ ಕಿಡ್ನಾಪ್ ಮಾಡಿದ್ದ ಐವರ ಬಂಧನ!

ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ, ಅಲ್ಲಿ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಸಿಸಿಬಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಜಿಮ್ ಟ್ರೈನರ್ ನನ್ನು ಅಪಹರಿಸಿ, ಆತನಿಂದ ಐದು ಲಕ್ಷ ರೂ. ಸುಲಿಗೆಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಜೂನ್ 19 ರಂದು ಅವರನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇತರ ಮೂವರು ಸಹಚರರೊಂದಿಗೆ ಇಲ್ಲಿನ ಸಿಟಿ ಇನ್ಸ್ಟಿಟ್ಯೂಟ್ (City Institute) ಬಳಿಗೆ ಕಾರಿನಲ್ಲಿ ಬಂದ ಐವರು, ಸಿಸಿಬಿ ಪೊಲೀಸ್ ಅಧಿಕಾರಿಗಳಂತೆ ಸುಳ್ಳು ಹೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಬಂಧನದಲ್ಲಿಡುವ ಉದ್ದೇಶದಿಂದ ಆರೋಪಿಗಳು ಜಿಮ್ ತರಬೇತುದಾರರನ್ನು ಅಪಹರಿಸಿ, ಕೊಲೆ ಬೆದರಿಕೆ ಹಾಕಿ 5 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ನಂತರ ಜಿಮ್ ಟ್ರೈನರ್ ನನ್ನು ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ, ಅಲ್ಲಿ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಜೂನ್ 25 ರಂದು ಸಿಸಿಬಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಜಿಮ್ ತರಬೇತುದಾರರನ್ನು ಅಪಹರಿಸಿದ ಐವನ್ನು ಆರೋಪಿಗಳನ್ನು ಬಂಧಿಸಿದ್ದು,ಅಪರಾಧ ಮಾಡಲು ಬಳಸಲಾದ ಕಾರು ಮತ್ತು ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ವಿಳಂಬ; ಸರ್ಕಾರದ ವಿರುದ್ಧ AIDSO ಆಕ್ರೋಶ

ಹಗ್ಗ 16 ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆ: ಏನೋ ದಬಾಕಕ್ಕೆ ಹೋಗವನೆ, ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು; ಯಶ್ ತಾಯಿ

ನಾಗೇಂದ್ರ ರಾಜೀನಾಮೆಗೆ ರಾಜ್ಯಪಾಲರ ಅಂಗೀಕಾರ: ಸಂಪುಟದ ಎರಡು ಖಾಲಿ ಸ್ಥಾನ ಭರ್ತಿಗೆ ದೆಹಲಿಗೆ ತೆರಳಿದ ಸಿಎಂ ಡಿಕೆಶಿ!