ಅಪರಾಧ online desk
ರಾಜ್ಯ

ಬೆಂಗಳೂರು: ಹೋಟೆಲ್ ಸರ್ವಿಸ್ ಲಿಫ್ಟ್‌ನಲ್ಲಿ ಸಿಲುಕಿ ಯುವಕನ ದಾರುಣ ಸಾವು..!

ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ವಾಣಿಜ್ಯ ಸಂಸ್ಥೆಯೊಂದರ ಹಳೆಯ ಮಾದರಿಯ ಸರ್ವಿಸ್ ಲಿಫ್ಟ್‌ನಲ್ಲಿ ತಲೆ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಮೃತನನ್ನು ಧಾರವಾಡ ಮೂಲದ ರಾಜೇಶ್ (22) ಎಂದು ಗುರುತಿಸಲಾಗಿದೆ. ಸ್ವಂತ ಹೋಟೆಲ್ ಆರಂಭಿಸುವ ಉದ್ದೇಶ ಹೊಂದಿದ್ದ ಮೃತ ರಾಜೇಶ್, ಹೋಟೆಲ್ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ತನ್ನ ಸ್ನೇಹಿತನಿಗೆ ಸೇರಿದ ಜಯನಗರದ 27ನೇ ಕ್ರಾಸ್, 4ನೇ ಟಿ ಬ್ಲಾಕ್‌ನಲ್ಲಿರುವ ದಕ್ಷಿಣ ಉಪಹಾರ್ ಹೋಟೆಲ್‌ಗೆ ತೆರಳಿದ್ದರು. ಹೋಟೆಲ್‌ನ ದೈನಂದಿನ ಕಾರ್ಯವೈಖರಿಯನ್ನು ಗಮನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.

ರಾಜೇಶ್ ಲಿಫ್ಟ್‌ನಿಂದ ಹೊರಬರಲು ಮುಂದಾದಾಗ, ಲಿಫ್ಟ್ ಏಕಾಏಕಿ ಚಲಿಸಲು ಆರಂಭಿಸಿದೆ. ಇದರಿಂದ ಅವರ ತಲೆ ಲಿಫ್ಟ್‌ನ ಮೇಲ್ಭಾಗದ ಅಂಚಿಗೆ (ಲಿಂಟೆಲ್) ಸಿಲುಕಿ ತೀವ್ರವಾಗಿ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಹೋಟೆಲ್ ಹಾಗೂ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ವ್ಯಕ್ತಿ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

BRICS 'ನವದೆಹಲಿ ಘೋಷಣೆ 2026' ಗೆ ಸರ್ವಾನುಮತದ ಅಂಗೀಕಾರ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಪ್ರಗತಿ

'ಹಿಂಸೆ ಅಥವಾ ಗ್ಲಾಮರ್‌ಗೆ ಸೀಮಿತವಾಗಿಲ್ಲ, ವಯಸ್ಕರಿಗಾಗಿ ಮಾಡಿದ ವಿಭಿನ್ನ ಕಥೆ'; ಯಶ್ ರ Toxic ಕುರಿತು ಟೀಕಾಕಾರರಿಗೆ ಬಟ್ಟೆ ಸುತ್ತಿ ಹೊಡೆದ ಹಾಲಿವುಡ್ ನಟ!

ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ...