Online Desk
ರಾಜ್ಯ

ಗ್ಯಾಸ್ ಖಾಲಿಯಾದ್ರೆ ಚಿಂತೆ ಬೇಡ; ಬೆಂಗಳೂರಿನಲ್ಲಿ ಕೇವಲ 1 ಗಂಟೆಗೆ ಮನೆ ಬಾಗಿಲಿಗೆ ಬರಲಿದೆ ಗ್ಯಾಸ್ ಸಿಲಿಂಡರ್!

ಇರಾನ್ - ಅಮೆರಿಕ ಯುದ್ಧದ ಕಾರಣ ಸರ್ಕಾರ ಈಗ ಅದನ್ನು 45 ದಿನಕ್ಕೆ ಹೆಚ್ಚಿಸಿದೆ. ಇದರ ನಡುವೆಯೇ ಕೇವಲ ಒಂದು ಗಂಟೆಗೇನೆ ಗ್ರಾಹಕರಿಗೆ ಸಿಲಿಂಡರ್ ವಿತರಣೆ ಮಾಡಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.

ಬೆಂಗಳೂರು: ಇರಾನ್ - ಅಮೆರಿಕ ಯುದ್ಧದ ಕಾರಣ ಗೃಹಬಳಕೆಯ LPG ಸಿಲಿಂಡರ್ ಬೆಲೆ ಏರಿಕೆ ಆಗಿರೋದು ಮಾತ್ರವಲ್ಲ, ಅದರ ವಿತರಣೆಯಲ್ಲಿಯೂ ಹಲವಾರು ವ್ಯತ್ಯಾಸಗಳಾಗಿವೆ. ಅದ್ರಂತೆ, ಮೊದಲು ಸಿಲಿಂಡರ್ 20 ದಿನಗಳಿಗೆ ಒಮ್ಮೆ LPG ಸಿಲಿಂಡರ್ ಸಿಗುತ್ತಿತ್ತು. ಆದ್ರೆ, ಯುದ್ಧದ ಕಾರಣ ಸರ್ಕಾರ ಈಗ ಅದನ್ನು 45 ದಿನಕ್ಕೆ ಹೆಚ್ಚಿಸಿದೆ. ಇದರ ನಡುವೆಯೇ ಕೇವಲ ಒಂದು ಗಂಟೆಗೇನೆ ಗ್ರಾಹಕರಿಗೆ ಸಿಲಿಂಡರ್ ವಿತರಣೆ ಮಾಡಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.

ಒಂದು ಗಂಟೆಗೇನೆ ಸಿಲಿಂಡರ್ ವಿತರಣೆ ಮಾಡೋದು ಯಾರು?

ಕ್ವಿಕ್ ಕಾಮರ್ಸ್ ದೈತ್ಯ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ಗ್ರಾಹಕರಿಗೆ ಕೇವಲ ಒಂದು ಗಂಟೆಯಲ್ಲಿ ಗೃಹಬಳಕೆಯ LPG ಸಿಲಿಂಡರ್ ವಿತರಣೆ ಮಾಡಲು ಹೆಚ್‌ಪಿಸಿಎಲ್ ಅಂದ್ರೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ ಅತ್ಯಂತ ವೇಗವಾಗಿ ಎಲ್‌ಪಿಜಿ ಸಿಲಿಂಡರ್ ವಿತರಣಾ ಸೇವೆ ಪ್ರಾರಂಭವಾಗಿದೆ.

ಎಲ್ಲಿ ಸಿಗಲಿದೆ ಕ್ವಿಕ್ LPG ಸಿಲಿಂಡರ್?

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೊದಲಿಗೆ ಭಾರತದ IT ರಾಜಧಾನಿ ಬೆಂಗಳೂರಿನಲ್ಲಿ ಈ ಯೋಜನೆ ಪ್ರಾರಂಭಿಸಲಿದೆ. ಅದರಂತೆ, ಈಗಾಗಲೇ ಸಿಲಿಕಾನ್ ಸಿಟಿಯ ಆಯ್ದ ಭಾಗಗಳಲ್ಲಿ ಅಂದರೆ ಉತ್ತರಹಳ್ಳಿ ಮತ್ತು ಸುಬ್ರಹ್ಮಣ್ಯಪುರದಲ್ಲಿ ಪ್ರಾಯೋಗಿಕವಾಗಿ ಈ ಸೇವೆ ಲಭ್ಯವಿದೆ.

ಎಷ್ಟು KG ಸಿಲಿಂಡರ್ ಸಿಗುತ್ತೆ?

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಎರಡು ಮಾದರಿಯ LPG ಸಿಲಿಂಡರ್ ಸಿಗಲಿದೆ. ಅದರಂತೆ,

  • 10 ಕೆಜಿ ಹೆಚ್‌ಪಿ ನವ್ಯ: ಇದು ಹೊಸ ತಂತ್ರಜ್ಞಾನದ ಕಾಂಪೋಸಿಟ್ ಸಿಲಿಂಡರ್ ಆಗಿದೆ. ಇದು ತೂಕದಲ್ಲಿ ತುಂಬಾ ಹಗುರವಾಗಿದ್ದು, ತುಕ್ಕು ಹಿಡಿಯುವುದಿಲ್ಲ. ಇದರ ಬಾಡಿ ಅರೆ-ಪಾರದರ್ಶಕವಾಗಿದ್ದು, ಒಳಗಡೆ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದು.

  • 5 ಕೆಜಿ ಮೆಟಲ್ ಸಿಲಿಂಡರ್: ಸಣ್ಣ ಕುಟುಂಬಗಳು ಅಥವಾ ಬ್ಯಾಚುಲರ್‌ಗಳಿಗಾಗಿ ಈ ಸಣ್ಣ ಮೆಟಲ್ ಸಿಲಿಂಡರ್ ಕೂಡ ಆ್ಯಪ್‌ನಲ್ಲಿ ಲಭ್ಯವಿದೆ.

(ಗಮನಿಸಿ: ಸಾಮಾನ್ಯ ಮನೆಗಳಲ್ಲಿ ಬಳಸುವ 14.2 ಕೆಜಿಯ ದೊಡ್ಡ ಸಿಲಿಂಡರ್‌ಗಳು ಸದ್ಯಕ್ಕೆ ಈ ಸೇವೆಯಲ್ಲಿ ಲಭ್ಯವಿಲ್ಲ ಎನ್ನಲಾಗಿದೆ).

ಬೆಲೆ ಎಷ್ಟು?

  • 5 ಕೆಜಿ ಸಿಲಿಂಡರ್: ಮೊದಲ ಖರೀದಿಗೆ ₹1,713 (ಸಿಲಿಂಡರ್ ಬಾಡಿ ಸೇರಿ), ರಿಫಿಲ್‌ಗೆ ₹839

  • 10 ಕೆಜಿ ಸಿಲಿಂಡರ್: ಮೊದಲ ಖರೀದಿಗೆ ₹4,958, ರಿಫಿಲ್‌ಗೆ ₹1,772

  • ರೆಗ್ಯುಲೇಟರ್: ಸಿಲಿಂಡರ್ ಸೇಫ್ಟಿ ರೆಗ್ಯುಲೇಟರ್ ಬೇಕಿದ್ದಲ್ಲಿ ಪ್ರತ್ಯೇಕವಾಗಿ ₹299 ಪಾವತಿಸಬೇಕು.

ಮುಂದುವರೆದು, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಮೊದಲ ಬಾರಿ ಆರ್ಡರ್ ಮಾಡುವಾಗ ಆ್ಯಪ್‌ನಲ್ಲೇ ಐಡಿ ವೆರಿಫಿಕೇಶನ್ (Voter ID, PAN, Driving Licence ಇತ್ಯಾದಿ) ಮುಗಿಸಿ ಹೊಸ ಸಿಲಿಂಡರ್ ಪಡೆಯಬಹುದು. ಅದ್ರಂತೆ, ಮುಂದಿನ ಬಾರಿ ಗ್ಯಾಸ್ ಖಾಲಿಯಾದಾಗ ಆ್ಯಪ್‌ನಲ್ಲಿ ರಿಫಿಲ್ ಆರ್ಡರ್ ಮಾಡಿ, ಖಾಲಿ ಸಿಲಿಂಡರ್ ನೀಡಿ ಹೊಸ ಸಿಲಿಂಡರ್ ಪಡೆಯಬಹುದು.

ಏತನ್ಮಧ್ಯೆ, ಇದನ್ನು ಸಾಮಾನ್ಯ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಡೆಲಿವರಿ ಬಾಯ್ಸ್ ತರುವುದಿಲ್ಲ. ಬದಲಾಗಿ ಸುರಕ್ಷತಾ ನಿಯಮಗಳ ತರಬೇತಿ ಪಡೆದ ಹೆಚ್‌ಪಿಸಿಎಲ್‌ನ ಅಧಿಕೃತ ವಿತರಕರೇ ಮನೆಗೆ ತಲುಪಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!