ಪ್ರಿಯಾಂಕ್ ಖರ್ಗೆ, ವಿಜಯೇಂದ್ರ 
ರಾಜ್ಯ

ನಾಲಾಯಕ್ ಗೃಹ ಸಚಿವ ಟೀಕೆ: ವಿಜಯೇಂದ್ರಗೆ ಭಯ-ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಪ್ರಿಯಾಂಕ್ ಖರ್ಗೆ ತಿರುಗೇಟು!

ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ವಿದ್ಯಾರ್ಥಿಗಳ ಹೋರಾಟದ ನೆಪದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಉಮರ್ ಖಲೀದ್ ಅಂತಾ ಘೋಷಣೆ ಕೂಗುತ್ತಿದ್ದಾರೆ. ನಾಲಾಯಕ್ ಗೃಹ ಸಚಿವ ಎಲ್ಲಿ ಮಲಗಿಕೊಂಡಿದ್ದಾರೆ ಅವ್ರನ ಕೇಳಿ ಎಂಬ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪ್ರಿಯಾಂಕ್ ಖರ್ಗೆ ಭಾನುವಾರ ತಿರುಗೇಟು ನೀಡಿದ್ದಾರೆ.

ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಎಂಬದನ್ನ ನಾನು ಪ್ರಶ್ನಿಸಲು ಹೋಗುವುದಿಲ್ಲ. ಪಾಪ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ ಎಂದು ಕುಟುಕಿದ್ದಾರೆ.

ವಿಜಯೇಂದ್ರ ನನಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವ ಪರವಾನಗಿ ಸಿಕ್ಕಂತಲ್ಲ. ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷದಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ಎಲ್.ಕೆ ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!