ಡಿ.ಕೆ ಶಿವಕುಮಾರ್ 
ರಾಜ್ಯ

ಬಂಗಾಳ,‌ ಅಸ್ಸಾಂನಲ್ಲಿ ಏನಾಗಿದೆ ಗೊತ್ತಲ್ವ? SIR ಬಗ್ಗೆ ಎಚ್ಚರವಿರಲಿ; ಕೆಲಸ ಮಾಡಿದವರಿಗೆ ಪಾಲಿಕೆ ಟಿಕೆಟ್: CM ಡಿ.ಕೆ ಶಿವಕುಮಾರ್; Video

ಎಸ್ ಐಆರ್ ಬಗೆಗಿನ ಸಭೆಗೆ ಬರದ ಕಾರ್ಯದರ್ಶಿಗಳನ್ನು ಎಐಸಿಸಿ ಅವರು ವಜಾ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು" ಎಂದರು. ಎಸ್ ಐಆರ್ ಬಗೆಗಿನ ಸಭೆಗೆ ಬರದ ಕಾರ್ಯದರ್ಶಿಗಳನ್ನು ಎಐಸಿಸಿ ಅವರು ವಜಾ ಮಾಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ‌ಎಸ್‌ ಐಆರ್ ಬಗ್ಗೆ ಗಮನ ಹರಿಸಬೇಕು. ಇದರಿಂದ ಸಮಸ್ಯೆಯಿದೆ. ಬಂಗಾಳ,‌ ಅಸ್ಸಾಂ ಸೇರಿದಂತೆ ಅನೇಕ ಕಡೆ ಏನಾಗಿದೆ ಎಂದು ತಿಳಿದಿದೆ. ಎಲ್ಲರೂ ಸಭೆ ನಡೆಸಿ ಅರಿವು ಮೂಡಿಸಬೇಕು.‌ ಮತ ಇಲ್ಲ ಎಂದರೆ ಗೃಹಲಕ್ಷ್ಮೀ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಚ್ಚರಿಸಿದರು.

ನಗರದ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಮೂರು- ನಾಲ್ಕು ವಾರ್ಡ್ ಗಳನ್ನು ಸೇರಿ‌ ಶಾಸಕರನ್ನು ಒಳಗೊಂಡ ಸಮಿತಿ ಮಾಡಲಾಗುವುದು. ಅವರು ಎಸ್ ಐಆರ್ ಬಗ್ಗೆ ಸಭೆ ಮಾಡಲಿದ್ದಾರೆ.

ನಂತರ ಪಾಲಿಕೆ ಚುನಾವಣೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡಬೇಕು. ಹಿಂದೆ ತಿರುಗಿದರೆ ಟಿಕೆಟ್ ಸಿಗಲ್ಲ. ಜನರ ನಡುವೆ ಕೆಲಸ ಮಾಡಬೇಕು" ಎಂದರು.

"ಎಸ್ ಐಆರ್ ಬಗೆಗಿನ ಸಭೆಗೆ ಬರದ ಕಾರ್ಯದರ್ಶಿಗಳನ್ನು ಎಐಸಿಸಿ ಅವರು ವಜಾ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು" ಎಂದರು. ಎಸ್ ಐಆರ್ ಬಗೆಗಿನ ಸಭೆಗೆ ಬರದ ಕಾರ್ಯದರ್ಶಿಗಳನ್ನು ಎಐಸಿಸಿ ಅವರು ವಜಾ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು" ಎಂದರು.

ಕಾಂಗ್ರೆಸ್ ಕಚೇರಿ ನಮಗೆ ದೇವಾಲಯ ಇದ್ದಂತೆ. ನಾನು ಅದಕ್ಕಾಗಿ ಕಚೇರಿಗೆ ಬಂದಿದ್ದೇ‌ನೆ. ಮಹಾತ್ಮ ಗಾಂಧಿ ಅವರ ನೆನಪಿನಲ್ಲಿ ನೂರು ಕಚೇರಿಗಳಿಗೆ ಅಡಿಪಾಯ ಹಾಕಲಾಗಿದೆ.

ಮುಖ್ಯಮಂತ್ರಿ ಆದ ತಕ್ಷಣ ಕಾಂಗ್ರೆಸ್ ಕಚೇರಿ ಬಿಡುವವನಲ್ಲ. ಕಾರ್ಯಕರ್ತರೇ ನನ್ನ ಉಸಿರು. ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದವನು. ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಕಾರ್ಯಕರ್ತನಿಗೆ ಒಂದಲ್ಲ ಒಂದು ಅವಕಾಶ ಸಿಗುತ್ತದೆ. ನಾನು ಕುಳಿತಿರುವ ಕುರ್ಚಿ ಈ ರಾಜ್ಯದ ಜನರನದ್ದು" ಎಂದರು.

ಪಕ್ಷದ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರು ಚುಕ್ಕಾಣಿ ಹಿಡಿದಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರು. 5 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಈ ಎರಡನೇ ಬಾರಿಗೆ ವಿಧಾನಪರಿಷತ್ ಸದಸ್ಯರಾಗುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ 36 ವರ್ಷಗಳ ಕಾಲ ಪಕ್ಷವು ಅಧಿಕಾರ ನೀಡಿದೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

ನನ್ನ ಹೃದಯ ಚೂರಾಗಿದೆ: ಸಲ್ಮಾನ್ ಖಾನ್ ನಂತರ CJP ಪ್ರತಿಭಟನೆಗೆ ಆಲಿಯಾ ಭಟ್ ಬೆಂಬಲ!

CJP protest: ಪ್ರತಿಭಟನೆಗೆ ಅಡ್ಡಿಪಡಿಸಲು, ಕಲ್ಲು ತೂರಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ; ಕೇಂದ್ರದ ವಿರುದ್ಧ ದೀಪ್ಕೆ ಕಿಡಿ

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!