ರಾಜ್ಯಸಭೆ, ವಿಧಾನಪರಿಷತ್ ಗೆ ಬಿಜೆಪಿ ಅಭ್ಯರ್ಥಿಗಳು  online desk
ರಾಜ್ಯ

ರಾಜ್ಯಸಭೆ, ವಿಧಾನ ಪರಿಷತ್ ಗೆ ಕರ್ನಾಟಕ ಬಿಜೆಪಿಯಿಂದ ಅಚ್ಚರಿಯ ಹೆಸರು ಘೋಷಣೆ!

ಮೈಸೂರಿನ ರಘು ಕೌಟಿಲ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ವಿಧಾನಪರಿಷತ್ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೋವಿಂದ ರಾಜು ಸ್ಪರ್ಧಿಸಲಿಸಲಿದ್ದಾರೆ.

ಬೆಂಗಳೂರು: ರಾಜ್ಯಸಭಾ ಮತ್ತು ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಿಸಿದೆ.

ಪ್ರತಿ ಬಾರಿ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಅನಿರೀಕ್ಷಿತ ನಡೆಯನ್ನು ಬಿಜೆಪಿ ಈಗಲೂ ಮುಂದುವರೆಸಿದೆ. ರಾಜ್ಯಸಭೆಗೆ ಡಾ. ಎಂ.ನಾಗರಾಜ್ ಹಾಗೂ ವಿಧಾನ ಪರಿಷತ್‌ಗೆ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಮೈಸೂರಿನ ರಘು ಕೌಟಿಲ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ವಿಧಾನಪರಿಷತ್ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೋವಿಂದ ರಾಜು ಸ್ಪರ್ಧಿಸಲಿಸಲಿದ್ದಾರೆ.

ರಾಜ್ಯಸಭಾ ಅಭ್ಯರ್ಥಿಯಾಗಿ ಎಂ. ನಾಗರಾಜ್

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಪ್ರೊ. ಎಂ. ನಾಗರಾಜ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿದೆ.

ನಾಗರಾಜ ಅವರು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಇವರಿಗಿದೆ. ಜನಸಂಘದ ಸ್ಥಾಪಕ‌ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮನೋತ್ಸವ ವರ್ಷದ ನಿಮಿತ್ತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಸ್ವಂತ ಕಾರ್ಯಾಲಯ ನಿರ್ಮಿಸುವ ಅಮಿತ್ ಶಾ ಅವರ ಕನಸಿನ ಯೋಜನೆಯಲ್ಲಿ ಭವನ ನಿರ್ಮಾಣ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿಯೂ ಇವರು ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ

ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ: ಸುನಿತಾ ವಿಲಿಯಮ್ಸ್

KGF ಕಾಲೇಜಿನಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ: ತರಗತಿಯಲ್ಲಿ ಯುವಕನ ಥಳಿತಕ್ಕೆ ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿ, Video

ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!