ನಮ್ಮ ಮೆಟ್ರೋ 
ರಾಜ್ಯ

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ: ನಮ್ಮ ಮೆಟ್ರೋಗೆ ಭಾರೀ ನಷ್ಟ; ಸಾಲ ಮರುಪಾವತಿ ಹೊರೆ ಹೆಚ್ಚಳ!

ಬೆಂಗಳೂರು ಮೆಟ್ರೋ ಹಂತ 2A(ORR ಮಾರ್ಗ) ಮತ್ತು 2B(ವಿಮಾನ ನಿಲ್ದಾಣ ಮಾರ್ಗ) ಕಾರಿಡಾರ್‌ಗಳು ನಿರ್ಮಾಣ ಹಂತದಲ್ಲಿದ್ದು, ಯಾವುದೇ ಆದಾಯವನ್ನು ಗಳಿಸದಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(BMRCL) ಜೂನ್ 1 ರಿಂದ 500 ಮಿಲಿಯನ್ ಡಾಲರ್ ಸಾಲ ಮರುಪಾವತಿಸಲು ಆರಂಭಿಸಿದೆ.

ಬೆಂಗಳೂರು: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಇದರ ಬಿಸಿ ನಮ್ಮ ಮೆಟ್ರೋಗೂ ತಟ್ಟಿದ್ದು, ಭಾರೀ ನಷ್ಟ ಅನುಭವಿಸುತ್ತಿದೆ.

ಬೆಂಗಳೂರು ಮೆಟ್ರೋ ಹಂತ 2A(ORR ಮಾರ್ಗ) ಮತ್ತು 2B(ವಿಮಾನ ನಿಲ್ದಾಣ ಮಾರ್ಗ) ಕಾರಿಡಾರ್‌ಗಳು ನಿರ್ಮಾಣ ಹಂತದಲ್ಲಿದ್ದು, ಯಾವುದೇ ಆದಾಯವನ್ನು ಗಳಿಸದಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(BMRCL) ಜೂನ್ 1 ರಿಂದ 500 ಮಿಲಿಯನ್ ಡಾಲರ್ ಸಾಲ ಮರುಪಾವತಿಸಲು ಆರಂಭಿಸಿದೆ.

2021 ರಲ್ಲಿ ಈ ಸಾಲ ಒಪ್ಪಂದ ಮಾಡಿಕೊಂಡಾಗಿನಿಂದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ತೀವ್ರವಾಗಿ ಕುಸಿಯುತ್ತಿದ್ದು, ಮರುಪಾವತಿ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದೆ.

2024-25ರ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಆಗಸ್ಟ್ 19, 2021 ರಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್(ADB) ನೊಂದಿಗೆ ಸಹಿ ಮಾಡಿದ ಸಾಲ ಒಪ್ಪಂದದ ಅಡಿಯಲ್ಲಿ ಮರುಪಾವತಿ ವೇಳಾಪಟ್ಟಿ ಜೂನ್ 1 ರಿಂದ ಪ್ರಾರಂಭವಾಗಿದೆ.

ಒಟ್ಟು 3,750 ಕೋಟಿ ರೂ.(ಅಂದಾಜು) ಸಾಲವು ಐದು ವರ್ಷಗಳ ವಿನಾಯಿತಿ ಸೇರಿದಂತೆ 25 ವರ್ಷಗಳ ಅವಧಿಯನ್ನು ಹೊಂದಿದೆ ಮತ್ತು ಡಿಸೆಂಬರ್ 1, 2045 ರವರೆಗೆ ಕಂತುಗಳ ಮೂಲಕ ಸಾಲ ಮರುಪಾವತಿಸಲಾಗುತ್ತದೆ.

2021 ರಲ್ಲಿ ಸಾಲ ಒಪ್ಪಂದಕ್ಕೆ ಸಹಿ ಹಾಕಿದಾಗ, ವಿನಿಮಯ ದರವು ಪ್ರತಿ ಅಮೆರಿಕನ್ ಡಾಲರ್‌ಗೆ ಸುಮಾರು 75 ರೂ.ಗಳಷ್ಟಿತ್ತು, ಆದರೆ ಈಗ ಪ್ರತಿ ಡಾಲರ್ ಗೆ ಸುಮಾರು 95 ರೂ.ಗಳ ವಹಿವಾಟು ನಡೆಸುತ್ತಿದೆ.

ಇದರರ್ಥ ಬಿಎಂಆರ್‌ಸಿಎಲ್ ಸಾಲ ಪಡೆದ ಸಮಯಕ್ಕೆ ಹೋಲಿಸಿದರೆ ಮರುಪಾವತಿಸುವ ಪ್ರತಿ ಡಾಲರ್‌ಗೆ ಸುಮಾರು 20 ರೂ.ಗಳನ್ನು ಹೆಚ್ಚು ಪಾವತಿಸುತ್ತಿದೆ. ಅಸಲು ಮತ್ತು ಬಡ್ಡಿ ಪಾವತಿಗಳೆರಡೂ ಡಾಲರ್-ಮೌಲ್ಯದ ಸಾಲಕ್ಕೆ ಸಂಬಂಧಿಸಿವೆ.

ಅಧಿಕೃತ ಮಾಹಿತಿಯ ಪ್ರಕಾರ, ಬಿಎಂಆರ್‌ಸಿಎಲ್ 2024-25 ಹಣಕಾಸು ವರ್ಷದ ಅಂತ್ಯದ ವೇಳೆಗೆ ಮಂಜೂರಾದ 500 ಮಿಲಿಯನ್ ಡಾಲರ್ ಸಾಲದಲ್ಲಿ 335.12 ಮಿಲಿಯನ್ ಡಾಲರ್ ಅನ್ನು ಪಡೆದುಕೊಂಡಿದೆ. ಇದು ಸುಮಾರು ರೂ.2,748.67 ಕೋಟಿಗೆ ಸಮಾನವಾಗಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ವಿಸ್ತರಣೆ: CM ಡಿ.ಕೆ. ಶಿವಕುಮಾರ್-ಕಾಂಗ್ರೆಸ್ ನಾಯಕರು ನಾಳೆ ಸಂಜೆ ದೆಹಲಿಗೆ; ಹೈಕಮಾಂಡ್ ಮಹತ್ವದ ಮಾತುಕತೆ

ಯಾರ ಒತ್ತಡಕ್ಕೂ ಮಣಿದು ಬರ ಘೋಷಿಸಲ್ಲ, ಮಾತುಕತೆಯಲ್ಲೇ ಮೇಕದಾಟು ವಿವಾದಕ್ಕೆ ಪರಿಹಾರ: ಸಿಎಂ ಡಿಕೆ.ಶಿವಕುಮಾರ್

ಅಸಮರ್ಥ-ಭ್ರಷ್ಟ ಸರ್ಕಾರ ಕಿತ್ತೊಗೆಯುವವರೆಗೆ ವಿರಮಿಸದಿರಿ, ಹೋರಾಟ ಮುಂದುವರೆಸಿ: ವಿದ್ಯಾರ್ಥಿ-ಯುವಜನರಿಗೆ ಸಿದ್ದರಾಮಯ್ಯ ಕರೆ

ಕಾಂಗ್ರೆಸ್ ರಾಜಕೀಯ ಆಟಕ್ಕೆ ಬ್ರೇಕ್ ಹಾಕಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿಜಯೇಂದ್ರ

ಅಗ್ನಿಶಾಮಕ, ತುರ್ತು ಸೇವೆಗಳ ಆಧುನೀಕರಣಕ್ಕೆ ಸಮಗ್ರ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ