ನಮ್ಮ ಮೆಟ್ರೋ ಸಾಂದರ್ಭಿಕ ಚಿತ್ರ 
ರಾಜ್ಯ

ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್‌ ನೀಡಿ: BMCA ಮನವಿ

ವಿದ್ಯಾರ್ಥಿಗಳಿಗೆ ನಗರದಾದ್ಯಂತ ಇರುವ ಶಾಲೆ, ಕಾಲೇಜು ಮತ್ತು ಗ್ರಂಥಾಲಯಗಳನ್ನು ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಅವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ತಲುಪಲು ಉಚಿತ ಸಂಚಾರವು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಬೆನ್ನಲ್ಲೇ ಬಿಎಂಆರ್ ಸಿಎಲ್ ಕೂಡ ಮೆಟ್ರೋದಲ್ಲಿ ಉಚಿತ ಬಸ್ ಪಾಸ್ ಯೋಜನೆ ನೀಡಬೇಕು ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ಒತ್ತಾಯಿಸಿದೆ.

ಶಿಕ್ಷಣಕ್ಕೆ ಸಾರಿಗೆ ವೆಚ್ಚ ಎಂದಿಗೂ ತಡೆಯಾಗಬಾರದು. ಸಾಮಾಜಿಕ-ಆರ್ಥಿಕ ಹಿನ್ನೆಲೆ ಉತ್ತಮವಾಗಿಲ್ಲದ ವಿದ್ಯಾರ್ಥಿಗಳಿಗೆ ನಗರದಾದ್ಯಂತ ಇರುವ ಶಾಲೆ, ಕಾಲೇಜು ಮತ್ತು ಗ್ರಂಥಾಲಯಗಳನ್ನು ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಅವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ತಲುಪಲು ಉಚಿತ ಸಂಚಾರವು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

ವಿಶ್ವದ ಅತ್ಯಂತ ಸುಸ್ಥಿರ ನಗರಗಳು ಸಾರ್ವಜನಿಕ ಸಾರಿಗೆ ಸಂಸ್ಕೃತಿಯ ಮೇಲೆ ನಿರ್ಮಾಣವಾಗಿವೆ. ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೊ ಸುಲಭವಾಗಿ ಲಭ್ಯವಾಗುವಂತೆ ಮಾಡಿದರೆ, ಸಾರ್ವಜನಿಕ ಸಾರಿಗೆಯನ್ನು ತಮ್ಮ ಪ್ರಾಥಮಿಕ ಮತ್ತು ಆದ್ಯತೆಯ ಪ್ರಯಾಣದ ಮಾರ್ಗವಾಗಿ ನೋಡುವ ಪೀಳಿಗೆಯನ್ನು ಬೆಳೆಸಬಹುದು. ಇದು ದೀರ್ಘಾವಧಿಯಲ್ಲಿ ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ.

ಸಾರ್ವಜನಿಕ ಸಾರಿಗೆಯಿಂದಾಗಿ ಪ್ರಯಾಣಿಕರ ಆರೋಗ್ಯ ಸುಧಾರಣೆ ಆಗಲಿದೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸುಸ್ಥಿರ ಸಾರಿಗೆ ಪ್ರಯೋಗಾಲಯವು ಹಳದಿ ಮಾರ್ಗದಲ್ಲಿ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರೀಕ್ಷಾ ವ್ಯವಸ್ಥೆ ಸುಧಾರಣೆ, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ- ಪ್ರಧಾನಿ ಮೋದಿ ಘೋಷಣೆ! Video

ಬಿಹಾರ: ಹಿಂಸಾಚಾರಕ್ಕೆ ತಿರುಗಿದ Gen-Z NEET ಪ್ರತಿಭಟನೆ; ಕಲ್ಲು ತೂರಾಟ, BDO Ritesh ತಲೆಬುರುಡೆಗೆ ತೀವ್ರ ಗಾಯ!

'ಸ್ವಲ್ಪ ಸಮಯ ನೀಡಿ': CJPಯ ಮುಂದಿನ ಕಾರ್ಯತಂತ್ರ ಶೀಘ್ರದಲ್ಲೇ ಪ್ರಕಟ- ಅಭಿಜೀತ್ ಡಿಪ್ಕೆ

ಕಲ್ಯಾಣ ಕರ್ನಾಟಕ ಮಂದಿಗೆ ಸಿಹಿ ಸುದ್ದಿ: ಅಗ್ನಿಶಾಮಕ ಇಲಾಖೆಯಲ್ಲಿ 490 ಹುದ್ದೆಗಳ ನೇಮಕಾತಿಗೆ ಸಚಿವ ಪ್ರಿಯಾಂಕ್ ಸೂಚನೆ

CWG 2026: ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್ ಸಾಧನೆ; ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು, ಭಾರತಕ್ಕೆ ಮೊದಲ ಚಿನ್ನ ಪದಕ!