ವೀರಗಾಸೆ ಕಲಾವಿದ ಮಹದೇವಪ್ಪ  
ರಾಜ್ಯ

ಮಂಡ್ಯ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವೀರಗಾಸೆ ಕಲಾವಿದ ಮಹದೇವಪ್ಪ ನಿಧನ! ಚಲುವರಾಯಸ್ವಾಮಿ ಸಂತಾಪ

ಅವರ ಡಮರುಗದ ನಾದ, ಹೆಜ್ಜೆಯ ಗತ್ತು, ಮುಖದ ಭಾವ ಕಂಡು ನಾಡಿನ ಜನ ಮೈಮರೆಯುತ್ತಿದ್ದರು. ಅವರ ನಿಧನದಿಂದ ಜಾನಪದ ಕ್ಷೇತ್ರದಲ್ಲಿ ಎಂದೂ ತುಂಬಲಾರದ ಶೂನ್ಯ ಸೃಷ್ಟಿಯಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯ : ನಾಡಿನ ಹೆಸರಾಂತ ವೀರಗಾಸೆ ಕಲಾವಿದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹದೇವಪ್ಪ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹಿರಿಯ ಜಾನಪದ ಕಲಾವಿದ ಮಹದೇವಪ್ಪ, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ವೀರಗಾಸೆ ಎಂದರೆ ಮಹದೇವಪ್ಪ, ಮಹದೇವಪ್ಪ ಎಂದರೆ ವೀರಗಾಸೆ ಎಂಬಷ್ಟರ ಮಟ್ಟಿಗೆ ಅವರು ಹೆಸರಾಗಿದ್ದರು.

ವೀರಗಾಸೆ ಮಹದೇವಪ್ಪ ಅವರ ನಿಧನಕ್ಕೆ ಮಾಜಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವೀರಗಾಸೆ ಕಲೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಮಹದೇವಪ್ಪನವರು ಮಂಡ್ಯ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲ, ಇಡೀ ಕರ್ನಾಟಕದ ಜಾನಪದ ಲೋಕದ ಆಸ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

ಅವರ ಡಮರುಗದ ನಾದ, ಹೆಜ್ಜೆಯ ಗತ್ತು, ಮುಖದ ಭಾವ ಕಂಡು ನಾಡಿನ ಜನ ಮೈಮರೆಯುತ್ತಿದ್ದರು. ಅವರ ನಿಧನದಿಂದ ಜಾನಪದ ಕ್ಷೇತ್ರದಲ್ಲಿ ಎಂದೂ ತುಂಬಲಾರದ ಶೂನ್ಯ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಬಡತನದಲ್ಲೂ ಕಲೆಯನ್ನು ಬಿಡದ ಮಹದೇವಪ್ಪನವರು ನೂರಾರು ಶಿಷ್ಯರಿಗೆ ವೀರಗಾಸೆ ಕಲಿಸಿ, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಿದರು. ಮೈಸೂರು ದಸರಾ, ಹಂಪಿ ಉತ್ಸವ, ರಾಜ್ಯದ ಎಲ್ಲಾ ಪ್ರಮುಖ ಜಾನಪದ ಸಮ್ಮೇಳನಗಳಲ್ಲಿ ಅವರ ಕಲಾಪ್ರದರ್ಶನ ನೋಡುಗರ ಮನ ಗೆದ್ದಿತ್ತು ಅವರ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅವರನ್ನು ಸನ್ಮಾನಿಸುವ ಭಾಗ್ಯ ನನ್ನದಾಗಿತ್ತು. ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದ್ದಾರೆ.

ಇಂತಹ ಮೇರು ಕಲಾವಿದರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಸಿಗಬೇಕು. ಅವರ ಹೆಸರಿನಲ್ಲಿ ಜಾನಪದ ಪ್ರಶಸ್ತಿ ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಸರ್ಕಾರವನ್ನು ಸಚಿವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ