ಸ್ವಚ್ಛತಾ ಅಭಿಯಾನದಲ್ಲಿ ಕಸ ಗುಡಿಸಿದ ನಿರ್ಮಲಾ ಸೀತಾರಾಮನ್ 
ರಾಜ್ಯ

ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಕಸ ಗುಡಿಸಿದ ನಿರ್ಮಲಾ ಸೀತಾರಾಮನ್; 'ನಮಗೆ ಲೋನ್ ಕೊಡಿಸಿ ಮೇಡಂ' ಎಂದ ತಳ್ಳುಗಾಡಿ ವ್ಯಾಪಾರಿಗಳು; Video

ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.

ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಭಾಗಿಯಾಗಿದ್ದು, ಮಾಸ್ಕ್, ಗ್ಲೌಸ್ ಹಾಕಿ ಕಸ ಗುಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಳಿಕ ತಳ್ಳುವ ತರಕಾರಿ ಗಾಡಿ ವ್ಯಾಪಾರಿಗಳ ಬಳಿ ಮಾತನಾಡಿದ ಸಚಿವರು, ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.

ಸತತ 12 ವರ್ಷ ದೇಶದ ಪ್ರಧಾನಿಯಾಗಿ ದಾಖಲೆ ನಿರ್ಮಿಸಿರುವ ನರೇಂದ್ರ ಮೋದಿಯವರ ಆಡಳಿತ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕದ ಭಾಗವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನ ಕಾರ್ಯದಲ್ಲಿ ಪಾಲ್ಗೊಂಡರು.

ಮೋದಿಯವರ 12 ವರ್ಷಗಳ ಜನಪರ ಆಡಳಿತ ಮತ್ತು ಅಭೂತಪೂರ್ವ ಸಾಧನೆಗಳನ್ನು ಸಾರ್ಥಕವಾಗಿ ಆಚರಿಸಲು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಗಾಂಧೀಜಿಯವರ ಕನಸಿನ ಸ್ವಚ್ಛ ಭಾರತ ಸಂಕಲ್ಪ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಒಂದು ಜನಾಂದೋಲನವಾಗಿ ಉಳಿಯದೆ, ಪ್ರತಿಯೊಬ್ಬ ಭಾರತೀಯನ ಜೀವನ ಪದ್ಧತಿಯಾಗಿ ಮಾರ್ಪಟ್ಟಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!