ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ 
ರಾಜ್ಯ

ಮೈಸೂರು: ಮಟಮಟ ಮಧ್ಯಾಹ್ನವೇ ಪಬ್‌ನಲ್ಲಿ ಭೀಕರ ಅಗ್ನಿ ದುರಂತ; ಇಬ್ಬರು ಸುಟ್ಟು ಕರಕಲು, 7 ಮಂದಿ ಸ್ಥಿತಿ ಗಂಭೀರ!

ಪಬ್ ವೊಂದರಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವದಹನವಾಗಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಬ್ ವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಮೈಸೂರು: ಪಬ್ ವೊಂದರಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವದಹನವಾಗಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದಿದೆ. ದಟ್ಟಗಳ್ಳಿಯ ರಿಂಗ್ ರಸ್ತೆ ಬಳಿಯಿರುವ ಫಾಕ್ಸ್​ ಡೆನ್​ ಲಿಕ್ಕರ್​ ಗ್ಯಾರೇಜ್​ ಬಾರ್​ ಅಂಡ್​ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಸುಟ್ಟು ಕರಕಲಾಗಿದ್ದು 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಡೀ ಪಬ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತರನ್ನು ಸಾಹಿಲ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂದರ್ಭದಲ್ಲಿ ಪಬ್ ನಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಸದ್ಯ 15 ಜನರನ್ನು ರಕ್ಷಿಸಲಾಗಿದ್ದು 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸುಯೋಗ ಹಾಗೂ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!