ಸತೀಶ್ ಜಾರಕಿಹೊಳಿ  
ರಾಜ್ಯ

ಜೂನ್ 20 ರಂದು ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆ: ಸತೀಶ್ ಜಾರಕಿಹೊಳಿ

ಯಾವುದೇ ಯೋಜನೆ ತೆಗೆದುಕೊಳ್ಳುವಾಗ, ಅದು ಸರ್ಕಾರಕ್ಕೆ ಹೊರೆ ಆಗಬಾರದು, ಪಕ್ಷಕ್ಕೂ ಹಾನಿ ಆಗಬಾರದು ಎಂಬುದು ಅವರ ಸ್ಪಷ್ಟ ಅಭಿಪ್ರಾಯ. ಒಂದು ಕಾರ್ಯಕ್ರಮ ಅಥವಾ ಯೋಜನೆ ಪಕ್ಷದ ಹೆಸರಿಗೆ ಡ್ಯಾಮೇಜ್ ಆಗುವಂತೆ ಇರಬಾರದು ಎಂದು ಹೇಳಿದ್ದಾರೆ.

ಬೆಂಗಳೂರು: ಜೂನ್ 20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಡದಿ ಟೌನ್​​ಶಿಪ್​ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿರುವಂತೆ ಕಾಣುತ್ತದೆ.

ಬಿಡದಿ ಟೌನ್​ಶಿಪ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಪಕ್ಷದ ಭವಿಷ್ಯವು ಸಹ ಅದರ ಮೇಲೆ ನಿರ್ಮಾಣ ಆಗಿದೆ. ಟೌನ್​​ಶಿಪ್ ನಿರ್ಮಾಣ ಸರ್ಕಾರಕ್ಕೆ ಹೊರೆಯಾಗಬಾರದು. ಯಾವುದೋ ಒಂದು ಸ್ಕೀಮ್ ಮಾಡಲು ಹೋಗಿ ಸರ್ಕಾರಕ್ಕೆ ದಕ್ಕೆ ಆಗಬಾರದು. ಅದೇ ಸಮಸ್ಯೆ ಉದ್ಭವ ಆಗಬಾರದು.

ಯಾವುದೇ ಯೋಜನೆ ತೆಗೆದುಕೊಳ್ಳುವಾಗ, ಅದು ಸರ್ಕಾರಕ್ಕೆ ಹೊರೆ ಆಗಬಾರದು, ಪಕ್ಷಕ್ಕೂ ಹಾನಿ ಆಗಬಾರದು ಎಂಬುದು ಅವರ ಸ್ಪಷ್ಟ ಅಭಿಪ್ರಾಯ. ಒಂದು ಕಾರ್ಯಕ್ರಮ ಅಥವಾ ಯೋಜನೆ ಪಕ್ಷದ ಹೆಸರಿಗೆ ಡ್ಯಾಮೇಜ್ ಆಗುವಂತೆ ಇರಬಾರದು ಎಂದು ಹೇಳಿದ್ದಾರೆ.

ಅಸಮಾಧಾನ ಹೆಚ್ಚುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ಅಗತ್ಯ ಎಂದು ಸೂಚಿಸಿದ್ದಾರೆ. ಶನಿವಾರ ನಡೆಯುವ ಕ್ಯಾಬಿನೆಟ್​ನಲ್ಲಿ ಈ ಬಗ್ಗೆ ಚರ್ಚೆ ಆಗಬಹುದು ಎಂದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಯೋಜನೆಯ ಬಗ್ಗೆ ಸತೀಶ್ ಅವರ ನಿಲುವನ್ನು ಸ್ವಾಗತಿಸಿದರು. ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ, ಕಡಿಮೆ ಮಾತನಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಮಾತುಗಳನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ