ಆರ್ ಅಶೋಕ್ 
ರಾಜ್ಯ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ; ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ- R Ashok

ನಮ್ಮ ಮೂರು ವೋಟುಗಳು ಕ್ರಾಸ್ ಆಗಿದೆ ಅಂತ ಮಾಹಿತಿ ಬಂದಿದೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ ಎಂದು ಆರ್ ಅಶೋಕ್ ಹೇಳಿದರು.

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರನ್ನು ಪತ್ತೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಮೇಲ್ಮನೆ ಚುನಾವಚಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, 'ಬಿಜೆಪಿಯಿಂದ (BJP) ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಗೆದ್ದಿದ್ದಾರೆ. ನಮ್ಮ ಮೂರು ವೋಟುಗಳು ಕ್ರಾಸ್ ಆಗಿದೆ ಅಂತ ಮಾಹಿತಿ ಬಂದಿದೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ. ನಮ್ಮ ಒಂದು ಮತ ಅಸಿಂಧು ಆಗಿದೆ. ನಾಲ್ಕು ವೋಟು ಜೆಡಿಎಸ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು.

ನಮ್ಮಿಂದ ಮೂರು ಮತ ಕ್ರಾಸ್ ಆಗಿರೋದು ನಮಗೆ ಖಚಿತ ಆಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಆಗುತ್ತೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಚರ್ಚೆ ಮಾಡ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಆಗ ಯಾರು ಅಡ್ಡಮತದಾನ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ. ಈ ಫಲಿತಾಂಶಕ್ಕೂ ನಮ್ಮಲ್ಲಿ ಸ್ಥಾನಗಳ ಬದಲಾವಣೆ ಆಗುವುದಕ್ಕೂ ಸಂಬಂಧ ಇಲ್ಲ. ಜೆಡಿಎಸ್‌ಗೆ ನಾಲ್ಕು ವೋಟ್ ಹಾಕಲು ನಾವು ಹೇಳಿದ್ವಿ. ಅವರಿಗೆ ಹಾಕಿದ್ದಾರೆ ಅಂತಾ ಅಂದುಕೊಂಡಿದ್ದೀವಿ ಎಂದರು.

ಬಿವೈ ವಿಜಯೇಂದ್ರ ಹೇಳಿಕೆ

ಬಿ.ವೈ.ವಿಜಯೇಂದ್ರ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಿಂಗಾರಾಜು ಪಾಟೀಲ್‌ಗೆ 30 ಮತ ನಿಗದಿ ಮಾಡಿದ್ವಿ.

ಅದರಲ್ಲಿ ಮೂರು ವೋಟ್ ಅಡ್ಡಮತದಾನವಾಗಿದೆ. ರಘು ಕೌಟಿಲ್ಯಗೆ ಕೊಟ್ಟ 30 ವೋಟ್‌ನಲ್ಲಿ ಒಂದು ವೋಟ್ ಅಸಿಂಧು ಆಗಿದೆ. ಯಾರು ಅಡ್ಡಮತದಾನ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಲ್ಲವೂ ಮಾಹಿತಿ ಸಿಕ್ಕ ಮೇಲೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!

ನೂತನ ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!

ಕಾವೇರಿ ವಿವಾದ: ನೀರು ಬಿಟ್ಟರೂ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು; ಇಲ್ಲಿದೆ ಕಾರಣ...

Flipkart Freedom Sale: Samsung Galaxy F70 Pro ಬಿಡುಗಡೆ, ವಿಶೇಷ ಬೆಲೆಯಲ್ಲಿ ಲಭ್ಯ!

'ನನಗೂ ಒಮ್ಮೆ ಸಚಿವ ಸ್ಥಾನ ಕೈತಪ್ಪಿತ್ತು': ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಡಿಕೆ ಶಿವಕುಮಾರ್ ಸಮಾಧಾನ!