ಸತೀಶ್ ಜಾರಕಿಹೊಳಿ  
ರಾಜ್ಯ

ರಾಜ್ಯ ಸರ್ಕಾರಿ ನೌಕರರ ಮೇಲಿನ ED ದಾಳಿ ಅಚ್ಚರಿ ತಂದಿದೆ: ಸತೀಶ್‌ ಜಾರಕಿಹೊಳಿ

ಭ್ರಷ್ಟಾಚಾರದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಎಸಿಬಿ/ಲೋಕಾಯುಕ್ತಗಳಿವೆ. ಕೇಂದ್ರ ಸರ್ಕಾರದ ಕೈಯಲ್ಲಿದ್ದರೆ ಸಿಬಿಐನವರು ತನಿಖೆ ಮಾಡಬೇಕಿತ್ತು. ಇಡಿ ದಾಳಿ ಮಾಡಿರುವುದರ ಹಿಂದೆ ರಾಜಕೀಯ ಪ್ರೇರಿತ ಸಂಚು ಇದೆಯೇ ಕಾದು ನೋಡಬೇಕಿದೆ.

ಬೆಳಗಾವಿ: ಬಾಮೈದುನ ಮೇಲಿನ ಜಾರಿ ನಿರ್ದೇಶನಾಲಯ ದಾಳಿ ನನಗೆ ಅಚ್ಚರಿ ತಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತದಲ್ಲಿ ಅವರ ಮೇಲಿರುವ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹಿಂದೆ ಹೈಕೋರ್ಟ್ ಒಂದು ಹಳೆಯ ಕೇಸ್ ಅನ್ನು ರದ್ದು ಮಾಡಿತ್ತು. ಹೀಗಿರುವಾಗ ಭ್ರಷ್ಟಾಚಾರದ ಆರೋಪದ ಮೇಲೆ ಇಡಿ ದಾಳಿ ಮಾಡಿರುವುದು ನನಗೂ ಅಚ್ಚರಿ ಮೂಡಿಸಿದೆ ಎಂದರು.

ಭ್ರಷ್ಟಾಚಾರದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಎಸಿಬಿ/ಲೋಕಾಯುಕ್ತಗಳಿವೆ. ಕೇಂದ್ರ ಸರ್ಕಾರದ ಕೈಯಲ್ಲಿದ್ದರೆ ಸಿಬಿಐನವರು ತನಿಖೆ ಮಾಡಬೇಕಿತ್ತು. ಆದರೆ ಇಡಿ ದಾಳಿ ಮಾಡಿರುವುದರ ಹಿಂದೆ ರಾಜಕೀಯ ಪ್ರೇರಿತ ಸಂಚು ಇದೆಯೇ ಎಂಬುದನ್ನು ಕಾದು ನೋಡಬೇಕಿದೆ. ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಸ್ವರೂಪ ಮತ್ತು ಪರಿಣಾಮ ಗೊತ್ತಾಗಲಿದೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಎಂಬ ಕಾರಣಕ್ಕೇ ದಾಳಿ ಮಾಡಲಾಗಿದೆಯೇ? ಮತ್ತು ಸಚಿವರ ಪ್ರಭಾವದಿಂದಲೇ ಇಷ್ಟೊಂದು ಆಸ್ತಿ ಸಂಪಾದಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆತ ಎಲ್ಲೇ ಇದ್ದರೂ ಒಬ್ಬ ಅಧಿಕಾರಿಯಷ್ಟೇ. ಅವರ ಇಲಾಖೆಯಲ್ಲಿ ನಮ್ಮ ಪ್ರಭಾವ ಏನೂ ಇರುವುದಿಲ್ಲ, ಅದು ಸೀಮಿತ ಪೋಸ್ಟ್ ಎಂದು ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಡ್ರೋನ್ ದಾಳಿಗೆ ಅಮೆರಿಕ ತಿರುಗೇಟು; ಇರಾನ್ ಮೇಲೆ ವಾಯುದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

ಮೂರ್ಖತನದ ಯಾವುದೇ ಕೃತ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಅಮೆರಿಕ ದಾಳಿಗೆ ಇರಾನ್ ಕಠಿಣ ಎಚ್ಚರಿಕೆ

Venezuelaದಲ್ಲಿ ಪ್ರಕೃತಿ ವಿಕೋಪ; ಅವಳಿ ಭೂಕಂಪದ ಬೆನ್ನಲ್ಲೇ ಮತ್ತೆ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲು; 900ಕ್ಕೂ ಹೆಚ್ಚು ಮಂದಿ ಸಾವು

Israel-Lebanon ಸಂಘರ್ಷಕ್ಕೆ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ ತ್ರಿಪಕ್ಷೀಯ ಒಪ್ಪಂದ, Hezbollah ಮಣಿಸುವವರೆಗೆ ಹಿಂದೆ ಸರಿಯಲ್ಲ ಎಂದ ನೆತನ್ಯಾಹು..!

ಹೈದರಾಬಾದ್‌ ರಸ್ತೆಗೆ ಅಮೆರಿಕಾ ಅಧ್ಯಕ್ಷನ ಹೆಸರು: ‘ನನ್ನ ಪಾಲಿಗಿದು ಐತಿಹಾಸಿಕ ಗೌರವ’ ಎಂದು ಭಾರತಕ್ಕೆ ಧನ್ಯವಾದ ತಿಳಿಸಿದ ಟ್ರಂಪ್