ಸಿಎಂ ಸಿದ್ದರಾಮಯ್ಯ 
ರಾಜ್ಯ

ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ, ಟ್ರಂಪ್ ದ್ವಂದ ನೀತಿ ವಿರುದ್ಧ ಕಿಡಿ!

ಖಮೇನಿ ಸಾವು ಖಂಡನೀಯವಾದದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೆಡೆ ಶಾಂತಿ ಮಂತ್ರ ಹೇಳುತ್ತಾ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ಹೀಗೆ ದ್ವಂದ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

ಶಿವಮೊಗ್ಗ: ಇರಾನ್ ನ ಪರಮೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.

ಊರಗಡೂರಿನಲ್ಲಿ ಕೊಲೆಯಾದ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇರಾನ್ ನ ಖಮೇನಿ ಸಾವಿನ ಹಿನ್ನಲೆಯಲ್ಲಿ ಅವರ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಖಮೇನಿ ಸಾವು ಖಂಡನೀಯವಾದದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೆಡೆ ಶಾಂತಿ ಮಂತ್ರ ಹೇಳುತ್ತಾ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ಹೀಗೆ ದ್ವಂದ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಯುದ್ಧ ಅಗತ್ಯ ಇರಲಿಲ್ಲ ಎಂದರು.

ಇರಾಕ್ ಮೇಲೆ ಯುದ್ಧ ಆರಂಭವಾದ ಹಿನ್ನಲೆಯಲ್ಲಿ ರಾಜ್ಯದ ಕನ್ನಡಿಗರು ಸಿಲುಕಿಕೊಂಡಿದ್ಥಾರೆ. ಅವರ ರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಟೀಕೆ ಮಾಡುವುದೇ ವಿಪಕ್ಷ ಗಳ ಕೆಲಸ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೊಸ ಬಗೆಯ ದಾಳಿ ಮಾಡ್ತೇವೆ..' ಇರಾನ್ ಪ್ರತಿದಾಳಿಗೆ ಟ್ರಂಪ್ ಎಚ್ಚರಿಕೆ, ಖಮೇನಿ ಹತ್ಯೆಗೆ ಸಂಭ್ರಮ-ಶೋಕಾಚರಣೆ, ಬೃಹತ್ ಪರೇಡ್.. ಪ್ರತಿಮೆ ಧ್ವಂಸ!

ಇಸ್ರೇಲ್- ಇರಾನ್ ಯುದ್ಧ! ಕನ್ನಡಿಗರ ರಕ್ಷಣೆಗೆ ಎಲ್ಲಾ ಪ್ರಯತ್ನ- DCM ಡಿಕೆ ಶಿವಕುಮಾರ್

'ಮೌನವಾಗಿರಬೇಡಿ': Khamenei ಸಾವಿನ ಕುರಿತು ಭಾರತಕ್ಕೆ ಇರಾನ್ ಆಗ್ರಹ!

ಇರಾನ್ ಪ್ರತಿ ದಾಳಿ: ದುಬೈ ವಿಮಾನ ನಿಲ್ದಾಣಕ್ಕೆ ಹಾನಿ, ಬುರ್ಜ್ ಖಲೀಫಾ ಬಳಿ ಬಿದ್ದ ಕ್ಷಿಪಣಿ

ಖಮೇನಿ ಹತ್ಯೆ: 'ಪ್ರತೀಕಾರ ಬರುತ್ತೆ.. ನಿಮ್ಮನ್ನು ಬೇಟೆಯಾಡುತ್ತೆ'.. ಲೈವ್ ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ನಿರೂಪಕಿ, ಇಸ್ರೇಲ್-ಅಮೆರಿಕಗೆ ಎಚ್ಚರಿಕೆ

SCROLL FOR NEXT