ಅಪಘಾತದಲ್ಲಿ ಮೃತಪಟ್ಟ ದಂಪತಿ 
ರಾಜ್ಯ

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ದೇವಸ್ಥಾನದಿಂದ ಹಿಂತಿರುಗುತ್ತಿದ್ದ ನವ ದಂಪತಿ ಸಾವು, ಇಬ್ಬರಿಗೆ ಗಂಭೀರ ಗಾಯ!

ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ (34) ಮತ್ತು ಅವರ ಪತ್ನಿ ಐಶ್ವರ್ಯಾ (30) ಎಂದು ಗುರುತಿಸಲಾಗಿದೆ. ದಂಪತಿ ಮದುವೆಯಾಗಿ ಕೇವಲ 15 ದಿನಗಳು ಕಳೆದಿದ್ದವು.

ಹಾವೇರಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಭಾನುವಾರ ಬೆಳಿಗ್ಗೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇತ್ತೀಚೆಗಷ್ಟೇ ವಿವಾಹವಾಗಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ (34) ಮತ್ತು ಅವರ ಪತ್ನಿ ಐಶ್ವರ್ಯಾ (30) ಎಂದು ಗುರುತಿಸಲಾಗಿದೆ. ದಂಪತಿ ಮದುವೆಯಾಗಿ ಕೇವಲ 15 ದಿನಗಳು ಕಳೆದಿದ್ದವು.

'ಭಾನುವಾರ ಬೆಳಿಗ್ಗೆ ಶಿಗ್ಗಾಂವ್ ತಾಲ್ಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ದರ್ಶನ ಮುಗಿಸಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಅವರ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ನಜ್ಜುಗುಜ್ಜಾದ ವಾಹನದಿಂದ ಶವಗಳನ್ನು ಹೊರತೆಗೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೊಸ ಬಗೆಯ ದಾಳಿ ಮಾಡ್ತೇವೆ..' ಇರಾನ್ ಪ್ರತಿದಾಳಿಗೆ ಟ್ರಂಪ್ ಎಚ್ಚರಿಕೆ, ಖಮೇನಿ ಹತ್ಯೆಗೆ ಸಂಭ್ರಮ-ಶೋಕಾಚರಣೆ, ಬೃಹತ್ ಪರೇಡ್.. ಪ್ರತಿಮೆ ಧ್ವಂಸ!

ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ, ಟ್ರಂಪ್ ದ್ವಂದ ನೀತಿ ವಿರುದ್ಧ ಕಿಡಿ!

ಇಸ್ರೇಲ್- ಇರಾನ್ ಯುದ್ಧ! ಕನ್ನಡಿಗರ ರಕ್ಷಣೆಗೆ ಎಲ್ಲಾ ಪ್ರಯತ್ನ- DCM ಡಿಕೆ ಶಿವಕುಮಾರ್

'ಮೌನವಾಗಿರಬೇಡಿ': Khamenei ಸಾವಿನ ಕುರಿತು ಭಾರತಕ್ಕೆ ಇರಾನ್ ಆಗ್ರಹ!

ಇರಾನ್ ಪ್ರತಿ ದಾಳಿ: ದುಬೈ ವಿಮಾನ ನಿಲ್ದಾಣಕ್ಕೆ ಹಾನಿ, ಬುರ್ಜ್ ಖಲೀಫಾ ಬಳಿ ಬಿದ್ದ ಕ್ಷಿಪಣಿ

SCROLL FOR NEXT