ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: RTO ಅಧಿಕಾರಿಯ ಖುಲ್ಲಂ ಖುಲ್ಲಾ ದಂಧೆ: 10,210 ವಾಹನಗಳಿಗೆ ಅಕ್ರಮ FC ; ಎಫ್‌ಐಆರ್ ದಾಖಲು!

ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ ಫೆಬ್ರವರಿ 28 ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್ ಎಲ್ ಅವರ ಆದೇಶದ ನಂತರ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ

ಬೆಂಗಳೂರು: 10,210 ಕ್ಕೂ ಹೆಚ್ಚು ವಾಹನಗಳಿಗೆ ತಪಾಸಣೆ ಇಲ್ಲದೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು (ಎಫ್‌ಸಿ) ನೀಡಿದ ಆರೋಪದ ಮೇಲೆ ಆರ್ ಟಿ ಒ ಅಧಿಕಾರಿಯೊಬ್ಬರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಇಲಾಖಾ ತನಿಖೆಯ ನಂತರ, ವಾಹನಗಳಿಗೆ ತಪಾಸಣೆ ಇಲ್ಲದೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು (ಎಫ್‌ಸಿ) ನೀಡಿದ ಆರೋಪದ FIR ದಾಖಲಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳದವರಾಗಿದ್ದು, ಎಫ್‌ಐಆರ್‌ನಲ್ಲಿ ವಾಹನ ಮಾಲೀಕರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.

ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ ಫೆಬ್ರವರಿ 28 ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್ ಎಲ್ ಅವರ ಆದೇಶದ ನಂತರ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಕೀಲ ಎಸ್ ನಟರಾಜ್ ಶರ್ಮಾ ಅವರು ಸಾರಿಗೆ ಆಯುಕ್ತರಿಗೆ ನೀಡಿದ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈಸಂಬಂಧ ಇಲಾಖಾ ತನಿಖೆಗೆ ಆದೇಶಿಸಲಾಯಿತು. ಜಂಟಿ ಸಾರಿಗೆ ಆಯುಕ್ತರು ಫೆಬ್ರವರಿ 19 ರಂದು ವಾಹನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲನೆ ನಡೆಸಿದರು. ನಿವೃತ್ತ ಹಿರಿಯ ಮೋಟಾರ್ ವಾಹನ ನಿರೀಕ್ಷಕ ನಿಸಾರ್ ಅಹ್ಮದ್ ಆಗಸ್ಟ್ 1, 2025 ಮತ್ತು ಜನವರಿ 31, 2026 ರ ನಡುವೆ ಫಾರ್ಮ್ 38A ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ಬಹಿರಂಗಪಡಿಸಿವೆ.

ಗುಜರಾತ್ ಸಾರಿಗೆ ಆಯುಕ್ತರ ಕಚೇರಿಯು ಈ ಹಿಂದೆ ಗುಜರಾತ್‌ನಲ್ಲಿ ನೋಂದಾಯಿತ 41 ವಾಹನಗಳಿಗೆ ಇಮೇಲ್ ಮೂಲಕ ಪ್ರಮಾಣಪತ್ರಗಳನ್ನು ನೀಡಿತ್ತು, ಅದರ ನಂತರ ನಿಸಾರ್ ಅಹ್ಮದ್ ಅವರನ್ನು ಜನವರಿ 20 ರಂದು ಅಮಾನತುಗೊಳಿಸಲಾಗಿತ್ತು. ಅವರು ಜನವರಿ 31 ರಂದು ನಿವೃತ್ತರಾದರು.

ಫೆಬ್ರವರಿ 27 ರಂದು ಸಲ್ಲಿಸಿದ ವಿಚಾರಣಾ ವರದಿಯ ಆಧಾರದ ಮೇಲೆ, ಸಾರಿಗೆ ಆಯುಕ್ತರು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ನಿರ್ದೇಶಿಸಿದರು. ಪೊಲೀಸರು ನಿಸಾರ್ ಅಹ್ಮದ್ ಮತ್ತು ವಾಹನ ಮಾಲೀಕರ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ವಂಚನೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

IRGC ಪ್ರಧಾನ ಕಚೇರಿ ಧ್ವಂಸ! ಹಾವಿನ ತಲೆಯನ್ನು ಕತ್ತರಿಸಿದ್ದೇವೆ: ಅಮೆರಿಕ

ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; 2 ಲಕ್ಷ ರೂ. ಆಗುತ್ತಾ 10 ಗ್ರಾಂ ಚಿನ್ನದ ರೇಟ್?

Iran-Israel war: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ, ಭದ್ರತೆ-ವಿದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ಚರ್ಚೆ

SCROLL FOR NEXT