ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾವನ ಕೊಂದು, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಅಳಿಯನ ಬಂಧನ!

ಕೊಲೆಯಾದ ವ್ಯಕ್ತಿ ಇನಾಯತ್ ಪಾಷಾ ಆಸ್ಟಿನ್ ಟೌನ್‌ನಲ್ಲಿರುವ ತನ್ನ ಸಹೋದರಿಯ ಮನೆಯ ನೆಲ ಮಹಡಿಯನ್ನು ಲೀಸ್ ಗೆ ತೆದುಕೊಂಡು ಒಬ್ಬರೇ ವಾಸಿಸುತ್ತಿದ್ದರು.

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ತನ್ನ ಮಾವನನ್ನು ಕೊಂದು, ಬಳಿಕ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ 22 ವರ್ಷದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಸ್ರೂರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿ ಇನಾಯತ್ ಪಾಷಾ ಆಸ್ಟಿನ್ ಟೌನ್‌ನಲ್ಲಿರುವ ತನ್ನ ಸಹೋದರಿಯ ಮನೆಯ ನೆಲ ಮಹಡಿಯನ್ನು ಲೀಸ್ ಗೆ ತೆದುಕೊಂಡು ಒಬ್ಬರೇ ವಾಸಿಸುತ್ತಿದ್ದರು. ಮೆಕಾನಿಕ್ ಆಗಿ ಕೆಲಸ ಮಾಡ್ಕೊಂಡಿದ್ದ ಇನಾಯತ್ ಹುಟ್ಟಿನಿಂದಲೇ ಅಂಗವಿಕಲ ಎಂದು ಪೊಲೀಸರು ತಿಳಿಸಿದ್ದಾರೆ.

ಲೀಸ್​​ ಹಣ ವಾಪಸ್​​ ನೀಡದೆ ಮನೆ ಖಾಲಿ ಮಾಡುವಂತೆ ಇನಾಯತ್ ಪಾಷಾನನ್ನು ಅವರ ಅಕ್ಕ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಆಗಾಗ ಕಿರಿಕ್​​ ನಡೆಯುತ್ತಲೇ ಇತ್ತು. ಕಳೆದ ಭಾನುವಾರ ಕೂಡ ಇನಾಯತ್ ಮನೆಗೆ ಬಂದ ಕೂಡಲೇ ಮನೆ ಖಾಲಿ ಮಾಡು ಎಂದು ಜಗಳ ನಡೆದಿದೆ. ಈ ವೇಳೆ ಇನಾಯತ್ ಅಕ್ಕನ ಮಗ ಮಶ್ರೂರ್ ಅಹ್ಮದ್ ಕೂಡ ಜಗಳಕ್ಕೆ ಎಂಟ್ರಿಯಾಗಿದ್ದ. ಆದ್ರೆ ಜಗಳ ಮಧ್ಯೆ ಮಸ್ರೂರ್ ಮಾರಣಾಂತಿಕ ಹಲ್ಲೆ ಮಾಡಿದ್ರಿಂದ ಕುಸಿದು ಬಿದ್ದ ಇನಾಯತ್ ಪ್ರಾಣ ಬಿಟ್ಟಿದ್ದಾನೆ.

ಇನ್ನು ಘಟನೆಯನ್ನು ಮರೆಮಾಚಲು ಯತ್ನಿಸಿದ್ದ ಆರೋಪಿಗಳು, ಇನಾಯತ್ ಅತಿಯಾಗಿ ಕುಡಿದು, ಮೇಲಿಂದ ಬಿದ್ದು ಸತ್ತುಹೋದ ಎಂದು ಸಂಬಂಧಿಕರು, ಸ್ಥಳೀಯರುನ್ನ ನಂಬಿಸಿದ್ದರು. ಆ ಬಳಿಕ ಇನಾಯತ್ ಅಂತ್ಯ ಸಂಸ್ಕಾರಕ್ಕೂ ಸಿದ್ದತೆ ನಡೆದಿತ್ತು. ಆದರೆ ಸಾವಿನ ಮಾಹಿತಿ ತಿಳೀದು ಸ್ಥಳಕ್ಕೆ ಹೋಗಿದ್ದ ವಿವೇಕ್ ನಗರ ಪೊಲೀಸರ ಬಳಿ ಕೆಲ ಸಂಬಂಧಿಕರು ಕೊಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ಕೆದಕಿದಾಗ ಕೊಲೆ ರಹಸ್ಯ ಬಯಲಾಗಿದೆ.

ಇನ್ನು ಇನಾಯತ್​​ ಮೃತದೇಹ ಪರಿಶೀಲನೆ ವೇಳೆಯೂ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಇನಾಯತ್​​ ಸಾವು ಕೊಲೆ ಎಂಬುದು ದೃಢಪಟ್ಟಿದೆ. ಹೀಗಾಗಿ ಕೊಲೆಯನ್ನ ಸಹಜ ಸಾವೆಂದು ಬಿಂಬಿಸಲು ಹೋಗಿದ್ದ ಮಶ್ರೂರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!