ಸಾಂದರ್ಭಿಕ ಚಿತ್ರ 
ರಾಜ್ಯ

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

2025–26ನೇ ಸಾಲಿನ ಕೃಷಿ ಪಂಪ್ ಸೆಟ್‌ಗಳ ವಿದ್ಯುತ್ ದರವನ್ನು ರಾಜ್ಯಾದ್ಯಂತ ಪ್ರತಿ ಯೂನಿಟ್‌ಗೆ 8.30 ರೂ.ಗಳಿಂದ 6.57 ರೂಪಾಯಿಗೆ ಇಳಿಕೆ ಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಬುಧವಾರ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಆದರೆ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಕೃಷಿ ಪಂಪ್ ಸೆಟ್ ವಿದ್ಯುತ್ ದರವನ್ನು ಇಳಿಕೆ ಮಾಡಿದೆ.

2025–26ನೇ ಸಾಲಿನ ಕೃಷಿ ಪಂಪ್ ಸೆಟ್‌ಗಳ ವಿದ್ಯುತ್ ದರವನ್ನು ರಾಜ್ಯಾದ್ಯಂತ ಪ್ರತಿ ಯೂನಿಟ್‌ಗೆ 8.30 ರೂ.ಗಳಿಂದ 6.57 ರೂಪಾಯಿಗೆ ಇಳಿಕೆ ಮಾಡಲಾಗಿದೆ.

ಕೃಷಿ ಪಂಪ್ ಸೆಟ್ ವಿದ್ಯುತ್ ದರವನ್ನು ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 7.40 ರೂಪಾಯಿ, ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 7.70 ರೂಪಾಯಿ, ಹೆಸ್ಕಾಂ ವ್ಯಾಪ್ತಿಯಲ್ಲಿ 7.73 ರೂಪಾಯಿ, ಜೆಸ್ಕಾಂ ವ್ಯಾಪ್ತಿಯಲ್ಲಿ 7.79 ರೂಪಾಯಿಗೆ ಕಡಿಮೆ ಮಾಡಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚಿನ ಜಿಲ್ಲೆಗಳಿವೆ. ಜೊತೆಗೆ ಹೆಚ್ಚಿನ ಕೃಷಿ ಪಂಪ್ ಸೆಟ್ ಗಳೂ ಕೂಡ ಇವೆ. ಹೀಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಕಡಿಮೆ ವಿದ್ಯುತ್ ದರವನ್ನು ಕೃಷಿ ಪಂಪ್ ಸೆಟ್ ಗಳಿಗೆ ನಿಗದಿ ಮಾಡುವ ಮೂಲಕ ರಾಜ್ಯ ಸರ್ಕಾರ ಕೃಷಿ ಪಂಪ್ ಸೆಟ್ ವಿದ್ಯುತ್‌ ಗೆ ನೀಡುವ ಸಬ್ಸಿಡಿ ಪ್ರಮಾಣ ಕಡಿಮೆಯಾಗುವಂತೆ ಚಾಣಾಕ್ಷ ತಂತ್ರ ಅನುಸರಿಸಿದೆ.

ವಾಣಿಜ್ಯ, ಕೈಗಾರಿಕಾ ಬಳಕೆದಾರರಿಗೆ ದರ ಏರಿಕೆ ಶಾಕ್

ಕೆಇಆರ್ ಸಿ ಆಯ್ದ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆಯವರೆಗೆ ಹೆಚ್ಚಿಸಿದೆ. ಪರಿಷ್ಕೃತ ಸುಂಕಗಳು ಏಪ್ರಿಲ್ 2025 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಆಯೋಗದ ಆದೇಶದ ಪ್ರಕಾರ, ಪರಿಷ್ಕೃತ ದರಗಳು ಈ ಕೆಳಗಿನಂತಿವೆ

ಪ್ರತಿ ಕಿಲೋವ್ಯಾಟ್‌ಗೆ ರೂ. 235 ಸ್ಥಿರ ಶುಲ್ಕದೊಂದಿಗೆ LT-3A ವಾಣಿಜ್ಯ ಸುಂಕಗಳನ್ನು ಪ್ರತಿ ಯೂನಿಟ್​ಗೆ ರೂ. 7 ರಿಂದ ರೂ. 7.10 ಕ್ಕೆ ಹೆಚ್ಚಿಸಲಾಗಿದೆ.

LT-5 ಕೈಗಾರಿಕಾ ಸುಂಕಗಳು ಪ್ರತಿ ಯೂನಿಟ್‌ಗೆ ರೂ. 4.50 ರಿಂದ ರೂ. 5.20 ಕ್ಕೆ ಏರಿದ್ದು, ಪ್ರತಿ ಅಶ್ವಶಕ್ತಿಗೆ ರೂ. 165 ಸ್ಥಿರ ಶುಲ್ಕವಾಗಿದೆ.

HT-2A ಕೈಗಾರಿಕಾ ಗ್ರಾಹಕರು ಈಗ ಪ್ರತಿ ಯೂನಿಟ್‌ಗೆ 6.70 ರೂ. ಪಾವತಿಸಲಿದ್ದಾರೆ, ಇದು ಪ್ರತಿ kVA ಗೆ 365 ರೂ. ಡಿಮ್ಯಾಂಡ್ ಶುಲ್ಕ ವಿಧಿಸಲಾಗುತ್ತದೆ.

ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರಗಳು ಮತ್ತು ಹೋಟೆಲ್‌ಗಳಂತಹ HT-2B ವಾಣಿಜ್ಯ ಗ್ರಾಹಕರು ಪ್ರತಿ ಯೂನಿಟ್‌ಗೆ ರೂ. 5.95 ರಿಂದ ರೂ. 6.90 ಕ್ಕೆ ತೀವ್ರ ಏರಿಕೆ ಕಾಣಲಿದ್ದಾರೆ ಮತ್ತು ಪ್ರತಿ kVA ಗೆ ರೂ. 390 ಡಿಮ್ಯಾಂಡ್ ಶುಲ್ಕ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!