ಆರೋಪಿ ಮಸೂರ್‌ ಅಹ್ಮದ್‌ 
ರಾಜ್ಯ

ಮನೆ ಖಾಲಿ ಮಾಡದ ಹಿನ್ನಲೆಯಲ್ಲಿ ಅಂಗವಿಕಲ ವ್ಯಕ್ತಿ ಹತ್ಯೆ: ಅಂತ್ಯ ಸಂಸ್ಕಾರ ಸಮಯದಲ್ಲಿ ಬಯಲಾಯ್ತು ಕೊಲೆ ರಹಸ್ಯ!

ಅಂತ್ಯ ಸಂಸ್ಕಾರದ ವೇಳೆ ಇನಾಯತ್ ಫಾಷಾ ಬಾಯಿಂದ ರಕ್ತ ಸುರಿದಿದೆ. ಇದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ಅಂಗವಿಕಲ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ಟಿನ್‌ಟೌನ್‌ ನಿವಾಸಿ ಇನಾಯತ್‌ ಪಾಷಾ (52) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಮಸೂರ್‌ ಅಹ್ಮದ್‌ (22) ಎಂಬಾತನನ್ನು ಬಂಧಿಸಲಾಗಿದೆ.

ಅಂತ್ಯ ಸಂಸ್ಕಾರದ ವೇಳೆ ಇನಾಯತ್ ಫಾಷಾ ಬಾಯಿಂದ ರಕ್ತ ಸುರಿದಿದೆ. ಇದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೊಲೆ ಮಾಡಿದ್ದ ಮೃತನ ಸೋದರ ಸಂಬಂಧಿ ಅಪರಾಧದ ಸ್ಥಳವನ್ನು ಸ್ವಚ್ಛಗೊಳಿಸಿ, ಹಾಸಿಗೆಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಸಹಜ ಎಂದು ಬಿಂಬಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಟಿನ್ ಟೌನ್‌ನಲ್ಲಿ ಆರೋಪಿಯ ಸಹೋದರಿ ಉಸ್ಮಾ ಬಾನು ಅವರ ಒಡೆತನದ ಮನೆಯ ನೆಲ ಮಹಡಿ ಮನೆಯಲ್ಲಿ ಲೀಸ್ ಆಧಾರದ ಮೇಲೆ ವಾಸಿಸುತ್ತಿದ್ದರು. ಆತ ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಹುಟ್ಟಿನಿಂದಲೇ ಪೋಲಿಯೊದಿಂದಾಗಿ ಎಡಗಾಲಿನಲ್ಲಿ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಆರೋಪಿ ಮಸೂರ್ ಅಹ್ಮದ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಮಾರ್ಚ್ 1 ರಂದು ಸಂಜೆ 6.45 ರ ಸುಮಾರಿಗೆ ಪಾಷಾ ಅವರ ಮಗ ಸೈಯದ್ ಮೊಹಮ್ಮದ್ ಅಲಿ ತನ್ನ ತಂದೆ ಮನೆಯಲ್ಲಿ ಕಾಣದಿದ್ದನ್ನು ಗಮನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹ್ಮದ್ ಅವರು ಸಂಜೆ 4.45 ರ ಸುಮಾರಿಗೆ ಮನೆಗೆ ಭೇಟಿ ನೀಡಿದ್ದಾಗಿ ಮತ್ತು ಪಾಷಾ ಮದ್ಯಪಾನ ಮಾಡಿ ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಕುಟುಂಬಕ್ಕೆ ತಿಳಿಸಿದ್ದಾರೆ. ಅವರ ಮಾತುಗಳನ್ನು ನಂಬಿದ ಕುಟುಂಬ ಸದಸ್ಯರು ಇದು ಸಹಜ ಸಾವು ಎಂದು ಭಾವಿಸಿದರು ಮತ್ತು ಪಾಷಾ ಅವರ ಅಂಗವೈಕಲ್ಯವನ್ನು ಪರಿಗಣಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಅಥವಾ ಪೊಲೀಸರಿಗೆ ತಿಳಿಸಲಿಲ್ಲ.

ಪಾಷಾ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಮತ್ತು ಶವವನ್ನು ಸ್ನಾನಕ್ಕೆ ತೆಗೆದುಕೊಂಡು ಹೋಗುವಾಗ, ಕುಟುಂಬ ಸದಸ್ಯರು ಅವರ ಬಾಯಿಯಿಂದ ಸ್ವಲ್ಪ ರಕ್ತದ ಹನಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಅನೈಸರ್ಗಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತ ವ್ಯಕ್ತಿ ಮುಖ ಮತ್ತು ಎದೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಅಹ್ಮದ್ ಅವರ ಕುಟುಂಬವು ಪಾಷಾ ಅವರನ್ನು ಮನೆಯಿಂದ ಖಾಲಿ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಆಧಾರದ ಮೇಲೆ, ಅಹ್ಮದ್, ಅವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರನ್ನು ವಿಚಾರಣೆ ನಡೆಸಲಾಯಿತು.

ವಿಚಾರಣೆಯ ಸಮಯದಲ್ಲಿ, ಅಹ್ಮದ್ ಅವರು ಸಂಜೆ 4.30 ರ ಸುಮಾರಿಗೆ ಪಾಷಾ ಅವರ ಮನೆಗೆ ಹೋಗಿ ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಬಹಿರಂಗಪಡಿಸಿದರು. ಪಾಷಾ ನಿರಾಕರಿಸಿದಾಗ, ತೀವ್ರ ವಾಗ್ವಾದ ನಡೆಯಿತು. ಈ ಗಲಾಟೆಯ ಸಮಯದಲ್ಲಿ, ಅಹ್ಮದ್ ಪಾಷಾ ಅವರ ಮುಖ ಮತ್ತು ಕಣ್ಣುಗಳಿಗೆ ಹೊಡೆದು ಎದೆಯ ಮೇಲೆ ಹಲ್ಲೆ ನಡೆಸಿದ್ದು, ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್