ಸಂಗ್ರಹ ಚಿತ್ರ 
ರಾಜ್ಯ

ನಿರಂತರ ಶ್ರಮಕ್ಕೆ ಸಿಕ್ಕ ಪ್ರತಿಫಲ: UPSC ಪರೀಕ್ಷೆಯಲ್ಲಿ ಕೋಲಾರದ ಇಬ್ಬರು ಯುವಕರ ಸಾಧನೆ..!

ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆ (CSE) 2025ರಲ್ಲಿ ಕರ್ನಾಟಕದಿಂದ ಆಯ್ಕೆಯಾದ 22 ಅಭ್ಯರ್ಥಿಗಳಲ್ಲಿ ಕೋಲಾರದ ಎ. ಮಧು ಮತ್ತು ತೌಸಿಫ್ ಉಲ್ಲಾ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.

ಬೆಂಗಳೂರು: ದಿಟ್ಟ ಸಂಕಲ್ಪ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವ ಗುರಿಯನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕೋಲಾರ ಜಿಲ್ಲೆಯ ಈ ಇಬ್ಬರು ಯುವಕರು ಉತ್ತಮ ಉದಾಹರಣೆಯಾಗಿದ್ದಾರೆ.

ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆ (CSE) 2025ರಲ್ಲಿ ಕರ್ನಾಟಕದಿಂದ ಆಯ್ಕೆಯಾದ 22 ಅಭ್ಯರ್ಥಿಗಳಲ್ಲಿ ಕೋಲಾರದ ಎ. ಮಧು ಮತ್ತು ತೌಸಿಫ್ ಉಲ್ಲಾ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.

ಎ. ಮಧು ರಾಷ್ಟ್ರೀಯ ಮಟ್ಟದಲ್ಲಿ 436ನೇ ರ‍್ಯಾಂಕ್ ಗಳಿಸಿದ್ದರೆ, ತೌಸಿಫ್ ಉಲ್ಲಾ ಖಾನ್ 741ನೇ ರ‍್ಯಾಂಕ್ ಪಡೆದು ಯಶಸ್ಸು ಕಂಡಿದ್ದಾರೆ. ಈ ಸಾಧನೆಯ ಹಿಂದೆ ಹಲವು ವರ್ಷಗಳ ನಿರಂತರ ಪ್ರಯತ್ನ ಮತ್ತು ವಿಫಲತೆಗಳನ್ನು ಎದುರಿಸಿದ ಹೋರಾಟ ಅಡಗಿದೆ.

ಬಂಗಾರಪೇಟೆಯ ನಿವಾಸಿಯಾಗಿರುವ ತೌಸಿಫ್ ಉಲ್ಲಾ ಖಾನ್ ತಮ್ಮ ಐದನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾನು ಸಂದರ್ಶನ ಹಂತಕ್ಕೆ ತಲುಪಿದ್ದೆ. ಆದರೆ, ಅಂತಿಮ ಪಟ್ಟಿಯಲ್ಲಿ ಕೇವಲ ಒಂದು ಅಂಕದಿಂದ ಸ್ಥಾನ ತಪ್ಪಿತ್ತು. ಆದರೂ ನಾನು ನಿರಾಶೆಯಾಗದೆ ಮತ್ತೆ ಪ್ರಯತ್ನ ಮುಂದುವರಿಸಿದೆ ಎಂದು ತೌಸಿಫ್ ಹೇಳಿದ್ದಾರೆ.

2021ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಅವರು UPSCಗೆ ಸಿದ್ಧತೆ ಆರಂಭಿಸಿದರು. ಕಳೆದ ವರ್ಷ ಹೈದರಾಬಾದ್‌ನ Council of Scientific and Industrial Research (CSIR) ನಲ್ಲಿ ಅಸಿಸ್ಟಂಟ್ ಸೆಕ್ಷನ್ ಆಫೀಸರ್ ಆಗಿ ಕೆಲಸವೂ ಪಡೆದರು.

“ಆ ಉದ್ಯೋಗ ನನಗೆ ಆರ್ಥಿಕವಾಗಿ ನೆರವಾಯಿತು. ಅದರಿಂದ ನಾನು ನನ್ನ ಕುಟುಂಬಕ್ಕೂ ಸಹಾಯ ಮಾಡುತ್ತಾ UPSC ಸಿದ್ಧತೆಯನ್ನು ಮುಂದುವರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಎರಗಸಂದ್ರ ಗ್ರಾಮದ ನಿವಾಸಿಯಾದ ಎ. ಮಧು ಸಾಮಾನ್ಯ ಕುಟುಂಬದಿಂದ ಬಂದವರು. ಅವರ ತಂದೆ ರೈತರಾಗಿದ್ದು ತಾಯಿ ಗೃಹಿಣಿ.

ಮಧು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ UPSC ಪರೀಕ್ಷೆಗೆ ಸಿದ್ಧತೆ ನಡೆಸಿದರು. ನಾಲ್ಕು ಬಾರಿ ಸಂದರ್ಶನ ಹಂತಕ್ಕೂ ತಲುಪಿದ್ದಾರೆ.

2023ರಲ್ಲಿ ಪ್ರಿಲಿಮ್ಸ್‌ನಲ್ಲಿ ವಿಫಲವಾದುದು ನನಗೆ ದೊಡ್ಡ ಪಾಠವಾಯಿತು. 2024ರಲ್ಲಿ ಮೂರನೇ ಪ್ರಯತ್ನದಲ್ಲಿ 544ನೇ ರ‍್ಯಾಂಕ್ ಪಡೆದು Indian Revenue Service (IRS) ಗೆ ಆಯ್ಕೆಯಾದೆ. ಈ ಬಾರಿ ನನ್ನ ರ‍್ಯಾಂಕ್ ಮತ್ತು OBC ವರ್ಗದ ಆಧಾರದ ಮೇಲೆ Indian Administrative Service (IAS) ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ಮಧು ಹೇಳಿದ್ದಾರೆ.

ಕೋಲಾರದ ಈ ಇಬ್ಬರು ಯುವಕರ ಸಾಧನೆ, ಹಲವು ವಿಫಲತೆಗಳ ಬಳಿಕವೂ ಕನಸನ್ನು ಕೈಬಿಡದೆ ಪ್ರಯತ್ನಿಸಿದರೆ ಯಶಸ್ಸು ಖಚಿತ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇವರ ಯಶೋಗಾಥೆ UPSC ಕನಸು ಕಾಣುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ!

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ

ಕೇರಳ ಸಿಎಂ ಆಯ್ಕೆ: ಕೆಸಿ ವೇಣುಗೋಪಾಲ್ ರಾಹುಲ್ ಗಾಂಧಿಯ ಆದ್ಯತೆ; ಕುತೂಹಲ ಮೂಡಿಸಿದ ಖಾಸಗಿ ಭೇಟಿ!

Tamil Nadu: 'ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ': ಇಚ್ಛಾಶಕ್ತಿ ಬೇಕು ಎಂದ Stalin ಗೆ ಶಾಕ್ ಕೊಟ್ಟ ಸಿಎಂ ವಿಜಯ್

SCROLL FOR NEXT