ಯುಟಿ ಖಾದರ್ online desk
ರಾಜ್ಯ

ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ?

ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನದ ಬಳಿಕ ಸದನ ನಡೆಸಲು ಒಪ್ಪಿದ ಸ್ಪೀಕರ್ ಖಾದರ್ ಕಲಾಪಕ್ಕೆ ಬಂದು ಕುರ್ಚಿಯಲ್ಲಿ ಕುಳಿತುಕೊಂಡರು.

ಬೆಂಗಳೂರು: ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವವರೇ ಇಲ್ಲ, ಸಚಿವರು, ಅಧಿಕಾರಿಗಳು ಗೈರಾಗಿದ್ದಾರೆ, ಹೀಗಾದರೆ ಸದನ ನಡೆಸುವುದು ಹೇಗೆ ಎಂದು ಹೊರನಡೆದ ಸ್ಪೀಕರ್ ಯುಟಿ ಖಾದರ್ ಆಕ್ರೋಶಕ್ಕೆ 3 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.

ವಿಧಾನಸಭೆ ಅಧಿವೇಶನಕ್ಕೆ ಸಚಿವರು ಗೈರಾಗಿದ್ದಾರೆ. ಅಲ್ಲದೇ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ಇಲ್ಲ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಲ್ಲ ಎಂದು ಸ್ಪೀಕರ್​​ ಯುಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸ್ಪೀಕರ್ ಖಾದರ್ ಜೊತೆ ಮಾತುಕತೆ ನಡೆಸಿ ಮನವೊಲಿಕೆ ಮಾಡಿದ್ದಾರೆ. ಸ್ಪೀಕರ್ ಜೊತೆ ಮಾತನಾಡಿದ ಬಳಿಕ ಮೂವರು ಅಧಿಕಾರಿಗಳಿಗೆ ನೋಟಿಸ್ ಕಳಿಸುವಂತೆ ಸೂಚನೆ ನೀಡಿದ್ದಾರೆ.

ಮತ್ತೆ ಸದನಕ್ಕೆ ಬಂದ ಸ್ಪೀಕರ್​

ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನದ ಬಳಿಕ ಸದನ ನಡೆಸಲು ಒಪ್ಪಿದ ಸ್ಪೀಕರ್ ಖಾದರ್ ಕಲಾಪಕ್ಕೆ ಬಂದು ಕುರ್ಚಿಯಲ್ಲಿ ಕುಳಿತುಕೊಂಡರು.ಸರ್ಕಾರದ ವಿರುದ್ಧವೇ ಸಿಟ್ಟಾದ ಸ್ಪೀಕರ್​ ಖಾದರ್ ಅವರ ಮನವೊಲಿಕೆ ಮಾಡುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ಶಾಸಕರ ಪ್ರಶ್ನೆಗಳಿಗೆ ಸಿಗಲಿದೆ ಸೂಕ್ತ ಉತ್ತರ

ಲಿಖಿತ ಪ್ರಶ್ನೆಗಳಿಗೆ ಉತ್ತರ ಸಂಬಂಧ ಸಿಎಂ ಹಾಗೂ ಸಚಿವರು ಮತ್ತೆ ಪ್ರತಿಪಕ್ಷ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಭೋಜನ ಸಮಯದ ಬಳಿಕ ಸರ್ಕಾರ ಅದಕ್ಕೆ ಉತ್ತರ ಕೊಡಲಿದೆ ಎಂದು ಸ್ಪೀಕರ್​ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ

D Boss ವಿರುದ್ಧ ಸ್ನೇಹಿತರೇ 'ಸಾಕ್ಷ್ಯ': ರೇಣುಕಾಸ್ವಾಮಿ ಚಡ್ಡಿ ಬಿಚ್ಚಿ ದರ್ಶನ್‌ ಹೊಡೆದಿದ್ದರು, ನೇಣು ಹಾಕೋ ಯತ್ನ- ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಮತ್ತೇನಿದೆ?

TNIE Exclusive | Air India ವಿಮಾನದಲ್ಲಿ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?