ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ 
ರಾಜ್ಯ

ಮಾತೃತ್ವ ರಜೆಗೆ ಶಿಕ್ಷಕಿಯರು ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಅನುಮೋದನೆ; ಹೆರಿಗೆ ನಂತರ ಮರಳುವವರಿಗೆ ಇಚ್ಚಿಸಿದ ಶಾಲೆಯಲ್ಲೇ 5 ವರ್ಷ ಕೆಲಸ: ಮಧು ಬಂಗಾರಪ್ಪ

ಶಿಕ್ಷಕಿಯರು ಸುದೀರ್ಘ ಅವಧಿ ಹೆರಿಗೆ, ಶಿಶುಪಾಲನಾ ರಜೆ ಪಡೆದಾಗ ಅವರ ಬದಲಿಗೆ ಅರ್ಹ, ಪ್ರತಿಭಾವಂತ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಬೆಂಗಳೂರು: ಹೆರಿಗೆ ಮತ್ತು ಶಿಶುಪಾಲನೆ ರಜೆಗೆ ಶಿಕ್ಷಕಿಯರು ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಯು ಅನುಮೋದನೆ ನೀಡಬೇಕು. ನಿಗದಿತ ಅವಧಿಯ ಒಳಗೆ ರಜೆ ಮಂಜೂರು ಮಾಡದೇ ಇದ್ದರೆ ಮೇಲಧಿಕಾರಿಗೆ ದೂರು ನೀಡಬಹುದು. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಹಿಳಾ ಶಿಕ್ಷಕರಿಗೆ ಮಕ್ಕಳ ಆರೈಕೆ ರಜೆ ನೀಡುವ ಮಾನದಂಡಗಳ ಕುರಿತು ಕೌನ್ಸಿಲ್‌ನಲ್ಲಿ ಬಿಜೆಪಿ ಎಂಎಲ್‌ಸಿ ವೈ ಎಂ ಸತೀಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು, ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು, ಅಂದರೆ ಜೂನ್ 1 ರಂದು ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಶಿಕ್ಷಕಿಯರು ಸುದೀರ್ಘ ಅವಧಿ ಹೆರಿಗೆ, ಶಿಶುಪಾಲನಾ ರಜೆ ಪಡೆದಾಗ ಅವರ ಬದಲಿಗೆ ಅರ್ಹ, ಪ್ರತಿಭಾವಂತ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಯೆಲ್ಬುರ್ಗಾದಲ್ಲಿ ಶಿಕ್ಷಕಿಯೊಬ್ಬರ ಉದಾಹರಣೆಯನ್ನು ಉಲ್ಲೇಖಿಸಿ ಸತೀಶ್, ಒಬ್ಬ ಶಿಕ್ಷಕಿ ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಿದರು. ಆರು ತಿಂಗಳ ಹೆರಿಗೆ ರಜೆಯ ನಂತರ, ಅವರು ಮಕ್ಕಳ ಆರೈಕೆಗಾಗಿ ಅರ್ಜಿ ಸಲ್ಲಿಸಿದರು. ಆದಾಗ್ಯೂ, ಬ್ಲಾಕ್ ಶಿಕ್ಷಣ ಅಧಿಕಾರಿ ಅವರ ವಿನಂತಿಯನ್ನು ತಿರಸ್ಕರಿಸಿದರು, ಕೆಲಸಕ್ಕೆ ವರದಿ ಮಾಡಲು ಆದೇಶಿಸಿದರು ಮಾತ್ರವಲ್ಲದೆ ಶೋಕಾಸ್ ನೋಟಿಸ್ ಸಹ ನೀಡಿದರು.

ಬಿಇಒ ಕಾನೂನಿನ ಪ್ರಕಾರ ವರ್ತಿಸುತ್ತಿರಬಹುದು. ಆದರೆ ಅವರ ಕ್ರಮ ಕಾನೂನಿನ ವಿರುದ್ಧವಾಗಿತ್ತು. ಆರು ತಿಂಗಳ ಮಕ್ಕಳ ಆರೈಕೆ ರಜೆಗೆ ಅರ್ಹರಾಗಿರುವ ಶಿಕ್ಷಕಿಯನ್ನು ಹೆರಿಗೆಯ ನಂತರ ಕೆಲಸಕ್ಕೆ ಮರಳುವಂತೆ ಒತ್ತಾಯಿಸುವುದು ಅಮಾನವೀಯ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರು ಮಕ್ಕಳ ಪಾಲನೆಗಾಗಿ ತಾವು ಇಚ್ಚಿಸಿದ ಶಾಲೆಯಲ್ಲೇ ಐದು ವರ್ಷ ಕೆಲಸ ಮಾಡುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಲಿದೆ.

ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಲಾಲನೆ–ಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ, ವಿಶ್ರಾಂತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್